ಭಾರತ ಕ್ರಿಕೆಟ್ ತಂಡದ ಭವಿಷ್ಯದ ತಾರೆ ರಿಂಕು ಸಿಂಗ್ (Rinku Singh) ಅಧಿಕೃತವಾಗಿ ಇಂಡೋ-ಆಫ್ರಿಕಾ ಟೆಸ್ಟ್ ಸರಣಿಯ ಭಾಗವಾಗಿಲ್ಲ. ಆದಾಗ್ಯೂ, ಇವರು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ಇವರು ಬಾಕ್ಸಿಂಗ್ ಡೇ ಟೆಸ್ಟ್‌ನ 1 ನೇ ದಿನದಂದು ಭಾರತೀಯ ಡಗ್-ಔಟ್‌ನಲ್ಲಿ ಕುಳಿತಿರುವುದು ಸಹ ಕಂಡು ಬಂದಿದೆ. ಟೆಸ್ಟ್ ಸ್ಕ್ಯಾಡ್ನಲ್ಲಿ ಸ್ಥಾನ ಪಡೆಯದ ರಿಂಕು ತಂಡಕ್ಕೆ ಹೇಗೆ ಸೇರಿಕೊಂಡರು?, ದಿಢೀರ್ ಫಿಲ್ಡಿಂಗ್ ಮಾಡಲು ಕಾರಣವೇನು?.
ಕೆಲವು ವರದಿಗಳ ಪ್ರಕಾರ, ರಿಂಕು ಸಿಂಗ್ ಅವರನ್ನು ಭಾರತದ ಹಿರಿಯ ಆಟಗಾರರೊಂದಿಗೆ ಟೆಸ್ಟ್ ತಂಡದಲ್ಲಿ ಇರಿಸಲಾಗಿದೆ. ಅಲ್ಲದೆ ರುತುರಾಜ್ ಗಾಯಕ್ವಾಡ್ ಬದಲಿಗೆ ಅಭಿಮನ್ಯು ಈಶ್ವರನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಅವರು ಭಾರತ ಎ ತಂಡಕ್ಕೆ ಸೇರಿಸಲಾಗಿದೆ. ಹೀಗಾಗಿ ರಿಂಕು ಭಾರತ-ಆಫ್ರಿಕಾ ಟೆಸ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ.
Rinkuu💥#AmiKKR | #RinkuSingh pic.twitter.com/n52BKQ3zrK
— Rokte Amar KKR 🟣🟡 (@Rokte_Amarr_KKR) December 27, 2023
ಯುಪಿಯಲ್ಲಿ ಜನಿಸಿದ ರಿಂಕು ಸಿಂಗ್ ಸದ್ಯದಲ್ಲೇ ಟೆಸ್ಟ್ ಕ್ರಿಕೆಟ್ಗೂ ಪದಾರ್ಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಎಡಗೈ ಆಟಗಾರ ಸೊಗಸಾದ ಪ್ರಥಮ ದರ್ಜೆ ದಾಖಲೆಯನ್ನು ಹೊಂದಿದ್ದಾರೆ. 42 ಪಂದ್ಯಗಳಲ್ಲಿ 7 ಶತಕ ಮತ್ತು 19 ಅರ್ಧಶತಕ ಸೇರಿದಂತೆ 57.82 ಸರಾಸರಿಯಲ್ಲಿ 3007 ರನ್ ಗಳಿಸಿದ್ದಾರೆ.
NZ vs BAN: ನ್ಯೂಝಿಲೆಂಡ್ಗೆ ಸೋಲುಣಿಸಿ ಹೊಸ ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ್
ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20ಐ ಸರಣಿಯಲ್ಲಿ ರಿಂಕು ಪ್ರಮುಖ ಪಾತ್ರ ವಹಿಸಿದ್ದರು. ಇವರು ಎರಡನೇ T20I ನಲ್ಲಿ 39 ಎಸೆತಗಳಲ್ಲಿ 68 ರನ್ ಗಳಿಸಿದರು. ಅವರು ಅಂತಿಮ ಟಿ20I ನಲ್ಲಿ ಭಾರತವನ್ನು ಗೆಲ್ಲಿಸಲು ಕೊಡುಗೆ ನೀಡಿದ್ದರು. ಇದರಿಂದ ಭಾರತ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತ್ತು.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಿಂಕು ತಮ್ಮ ಏಕದಿನ ಪದಾರ್ಪಣೆ ಕೂಡ ಮಾಡಿದ್ದಾರೆ. ಕೆಎಲ್ ರಾಹುಲ್ ನೇತೃತ್ವದ ತಂಡವು ಏಕದಿನ ಸರಣಿಯನ್ನು 2-1 ರಿಂದ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ರಿಂಕು ಅವರು ಸರಣಿಯ ನಿರ್ಣಾಯಕ ಪಂದ್ಯದಲ್ಲಿ 38 ರನ್ಗಳ ಕೊಡುಗೆ ನೀಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ