Karnataka Squad: ರಣಜಿ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ

Ranji Trophy 2024: ರಣಜಿ ಟ್ರೋಫಿ ಟೂರ್ನಿ ಜನವರಿ 5 ರಿಂದ ಶುರುವಾಗಲಿದೆ. ಕರ್ನಾಟಕ ತಂಡವು ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕಣಕ್ಕಿಳಿಯಲಿದೆ. ಗ್ರೂಪ್​-ಸಿ ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

Karnataka Squad: ರಣಜಿ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ
Karnataka Team
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 28, 2023 | 10:50 AM

ಜನವರಿ 5 ರಿಂದ ಶುರುವಾಗಲಿರುವ ರಣಜಿ ಟ್ರೋಫಿ ಟೂರ್ನಿಗೆ ಕರ್ನಾಟಕ ತಂಡವನ್ನು (Karnataka Squad) ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಮಯಾಂಕ್ ಅಗರ್ವಾಲ್ (Mayank Agarwal) ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕನಾಗಿ ನಿಕಿನ್ ಜೋಸ್ ಆಯ್ಕೆಯಾಗಿದ್ದಾರೆ. ಇನ್ನು ಹಿಂದಿನ ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ಅವರನ್ನು ಈ ಬಾರಿ ತಂಡದಿಂದ ಕೈಬಿಡಲಾಗಿದೆ. ಹಿಂದಿನ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ವೇಗಿ ವಿಜಯ್ ಕುಮಾರ್ ವೈಶಾಕ್ (31 ವಿಕೆಟ್​ಗಳು) ಜೊತೆಗೆ ಗೌತಮ್ ಕರ್ನಾಟಕ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು.

ಆದರೆ ಈ ಬಾರಿ ಅವರನ್ನು ಕೈ ಬಿಟ್ಟಿರುವ ಕುರಿತು ಮಾತನಾಡಿರುವ ಕೆಎಸ್‌ಸಿಎ ಪಆಯ್ಕೆ ಸಮಿತಿ ಅಧ್ಯಕ್ಷ ಜೆ. ಅಭಿರಾಮ್, ಗೌತಮ್ ಅವರು ಹಲವು ವರ್ಷಗಳಿಂದ ಕರ್ನಾಟಕಕ್ಕೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ನಾವು ಭವಿಷ್ಯವನ್ನು ಕೂಡ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ 36 ವರ್ಷದ ಆಟಗಾರನ ಬದಲಿಗೆ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

23 ವರ್ಷದೊಳಗಿನವರ ಸಿಕೆ ನಾಯುಡು ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಕೆಟ್‌ಕೀಪರ್-ಬ್ಯಾಟರ್ ಸುಜಯ್ ಸಾತೇರಿ ಅವರನ್ನು ಬಿಆರ್ ಶರತ್ ಬದಲಿಗೆ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇನ್ನು ತಂಡದಲ್ಲಿ ಮುಖ್ಯ ವಿಕೆಟ್ ಕೀಪರ್​ ಆಗಿ ಶರತ್ ಶ್ರೀನಿವಾಸ್ ಸ್ಥಾನ ಪಡೆದಿದ್ದಾರೆ. ಅದರಂತೆ ರಣಜಿ ಟ್ರೋಫಿ 2024 ಕ್ಕಾಗಿ ಆಯ್ಕೆ ಮಾಡಲಾದ ಕರ್ನಾಟಕ ತಂಡ ಈ ಕೆಳಗಿನಂತಿದೆ…

ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಆರ್. ಸಮರ್ಥ್, ದೇವದತ್ ಪಡಿಕ್ಕಲ್, ನಿಕಿನ್ ಜೋಸ್ (ಉಪನಾಯಕ), ಮನೀಶ್ ಪಾಂಡೆ, ಶುಭಾಂಗ್ ಹೆಗ್ಡೆ, ಶರತ್ ಶ್ರೀನಿವಾಸ್, ವಿಯಕುಮಾರ್ ವೈಶಾಕ್, ವಿ. ಕೌಶಿಕ್, ವಿದ್ವತ್ ಕಾವೇರಪ್ಪ, ಕೆ.ಶಶಿಕುಮಾರ್, ಸುಜಯ್ ಸಾತೇರಿ, ಡಿ.ನಿಶ್ಚಲ್ , ಎಂ.ವೆಂಕಟೇಶ್, ಕಿಶನ್ ಬೇಡರೆ, ರೋಹಿತ್ ಕುಮಾರ್.

  • ಮುಖ್ಯ ಕೋಚ್: ಪಿವಿ ಶಶಿಕಾಂತ್
  • ಬೌಲಿಂಗ್ ಕೋಚ್: ಮನ್ಸೂರ್ ಅಲಿ ಖಾನ್
  • ಫೀಲ್ಡಿಂಗ್ ಕೋಚ್: ಶಬರೀಶ್ ಮೋಹನ್

ಇದನ್ನೂ ಓದಿ: IPL 2024: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸುರೇಶ್ ರೈನಾ..?

ರಣಜಿ ಟೂರ್ನಿ ಯಾವಾಗ ಶುರು?

2024 ರ ರಣಜಿ ಟ್ರೋಫಿ ಟೂರ್ನಿ ಜನವರಿ 5 ರಿಂದ ಶುರುವಾಗಲಿದೆ. ಕರ್ನಾಟಕ ತಂಡವು ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕಣಕ್ಕಿಳಿಯಲಿದೆ. ಗ್ರೂಪ್​-ಸಿ ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!