Deodhar Trophy 2023: ಮಯಾಂಕ್ ಭರ್ಜರಿ ಬ್ಯಾಟಿಂಗ್: ದಕ್ಷಿಣ ವಲಯ ತಂಡಕ್ಕೆ ಜಯ

Deodhar Trophy 2023: ದಕ್ಷಿಣ ವಲಯ ಪರ ವಾಸುಕಿ ಕೌಶಿಕ್ ಹಾಗೂ ಸಾಯಿ ಕಿಶೋರ್ 3 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ 2 ವಿಕೆಟ್ ಕಬಳಿಸಿದರು.

Deodhar Trophy 2023: ಮಯಾಂಕ್ ಭರ್ಜರಿ ಬ್ಯಾಟಿಂಗ್: ದಕ್ಷಿಣ ವಲಯ ತಂಡಕ್ಕೆ ಜಯ
Mayank Agarwal
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 30, 2023 | 8:34 PM

Deodhar Trophy 2023: ದೇವಧರ್ ಟ್ರೋಫಿಯ 11ನೇ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಭರ್ಜರಿ ಜಯ ಸಾಧಿಸಿದೆ. ಪುದುಚೇರಿಯ ಕ್ರಿಕೆಟ್​ ಅಸೋಷಿಯೇಷನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ವಲಯ ಹಾಗೂ ಪೂರ್ವ ವಲಯ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪೂರ್ವ ವಲಯ ತಂಡದ ನಾಯಕ ಸೌರಭ್ ತಿವಾರಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಪೂರ್ವ ವಲಯಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕನ್ನಡಿಗ ವಾಸುಕಿ ಕೌಶಿಕ್ ಯಶಸ್ವಿಯಾದರು.

ಅಭಿಮನ್ಯು ಈಶ್ವರನ್ (12) ವಾಸುಕಿ ಕೌಶಿಕ್ ದಕ್ಷಿಣ ವಲಯ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಆದರೆ ಇದಾದ ಬಳಿಕ ಜೊತೆಯಾದ ವಿರಾಟ್ ಸಿಂಗ್ (49) ಹಾಗೂ ಸುಭ್ರಾಂಶು ಸೇನಾಪತಿ (44) ಉತ್ತಮ ಜೊತೆಯಾಟವಾಡಿದರು.

ಈ ಹಂತದಲ್ಲಿ ದಾಳಿಗಿಳಿದ ವಾಷಿಂಗ್ಟನ್ ಸುಂದರ್ ವಿರಾಟ್ ಸಿಂಗ್ ವಿಕೆಟ್ ಪಡೆದರೆ, ಸಾಯಿ ಕಿಶೋರ್ ಸುಭ್ರಾಂಶು ವಿಕೆಟ್ ಕಬಳಿಸಿದರು. ಈ ಎರಡು ವಿಕೆಟ್​ಗಳ ಪತನದೊಂದಿಗೆ ಪೂರ್ವ ವಲಯ ತಂಡವು ದಿಢೀರ್ ಕುಸಿತಕ್ಕೊಳಗಾಯಿತು.

ಈ ವೇಳೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ದಕ್ಷಿಣ ವಲಯ ಬೌಲರ್​ಗಳು 46 ಓವರ್​ಗಳಲ್ಲಿ 229 ರನ್​ಗಳಿಗೆ ಪೂರ್ವ ವಲಯ ತಂಡವನ್ನು ಆಲೌಟ್​ ಮಾಡುವಲ್ಲಿ ಯಶಸ್ವಿಯಾದರು. ದಕ್ಷಿಣ ವಲಯ ಪರ ವಾಸುಕಿ ಕೌಶಿಕ್ ಹಾಗೂ ಸಾಯಿ ಕಿಶೋರ್ 3 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ 2 ವಿಕೆಟ್ ಕಬಳಿಸಿದರು.

ಇನ್ನು 230 ರನ್​ಗಳ ಸುಲಭ ಗುರಿ ಬೆನ್ನತ್ತಿದ ದಕ್ಷಿಣ ವಲಯ ತಂಡಕ್ಕೆ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದ್ದರು. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಮಯಾಂಕ್ 88 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 84 ರನ್ ಚಚ್ಚಿದರು.

ಹಾಗೆಯೇ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ 67 ಎಸೆತಗಳಲ್ಲಿ 53 ರನ್​ ಬಾರಿಸಿದರು. ಮತ್ತೊಂದೆಡೆ ಎನ್​ ಜಗದೀಸನ್ 32 ರನ್​ಗಳ ಕೊಡುಗೆ ನೀಡಿದರು. ಪರಿಣಾಮ 44.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ದಕ್ಷಿಣ ವಲಯ ತಂಡವು 230 ರನ್​ಗಳ ಗುರಿ ಮುಟ್ಟಿತು. ಈ ಮೂಲಕ ದೇವಧರ್ ಟ್ರೋಫಿಯಲ್ಲಿ ಸತತ 4ನೇ ಗೆಲುವನ್ನು ತನ್ನದಾಗಿಸಿಕೊಂಡು ದಕ್ಷಿಣ ವಲಯ ತಂಡವು ಜಯದ ನಾಗಲೋಟ ಮುಂದುವರೆಸಿದೆ.

ಪೂರ್ವ ವಲಯ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ವಿರಾಟ್ ಸಿಂಗ್ , ಸುಭ್ರಾಂಶು ಸೇನಾಪತಿ , ಸೌರಭ್ ತಿವಾರಿ (ನಾಯಕ) , ರಿಯಾನ್ ಪರಾಗ್ , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ಮಣಿಶಂಕರ್ ಮುರಾಸಿಂಗ್ , ಅವಿನೋವ್ ಚೌಧರಿ , ಆಕಾಶ್ ದೀಪ್ , ಮುಖ್ತಾರ್ ಹುಸೇನ್.

ಇದನ್ನೂ ಓದಿ: ICC Test Rankings: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ

ದಕ್ಷಿಣ ವಲಯ ಪ್ಲೇಯಿಂಗ್ 11: ರೋಹನ್ ಕುನ್ನುಮ್ಮಳ್, ಮಯಾಂಕ್ ಅಗರ್ವಾಲ್ (ನಾಯಕ) , ಎನ್​ ಜಗದೀಸನ್ (ವಿಕೆಟ್ ಕೀಪರ್) , ಸಾಯಿ ಸುದರ್ಶನ್ , ಅರುಣ್ ಕಾರ್ತಿಕ್ , ವಾಷಿಂಗ್ಟನ್ ಸುಂದರ್ , ಸಾಯಿ ಕಿಶೋರ್ , ರೋಹಿತ್ ರಾಯುಡು , ವಾಸುಕಿ ಕೌಶಿಕ್ , ವಿಜಯ್​ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.

ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು