ಪಂತ್ ಅಪಘಾತದ ನಂತರ ರಸ್ತೆಯಲ್ಲಿದ್ದ ಗುಂಡಿಗಳು ಮಾಯ; ರಾತ್ರೋರಾತ್ರಿ ದುರಸ್ತಿ ಮಾಡಿದ NHAI

| Updated By: ಪೃಥ್ವಿಶಂಕರ

Updated on: Jan 02, 2023 | 11:46 AM

Rishabh Pant accident: ಕತ್ತಲೆಯಲ್ಲಿ ಇದ್ದಕ್ಕಿದ್ದಂತೆ ಗುಂಡಿಗಳು ಕಾಣಿಸಿಕೊಂಡವು, ಹಾಗಾಗಿ ಅದನ್ನು ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆಯಿತು ಎಂದು ಪಂತ್ ಹೇಳಿಕೆ ನೀಡಿದ್ದಾರೆ.

ಪಂತ್ ಅಪಘಾತದ ನಂತರ ರಸ್ತೆಯಲ್ಲಿದ್ದ ಗುಂಡಿಗಳು ಮಾಯ; ರಾತ್ರೋರಾತ್ರಿ ದುರಸ್ತಿ ಮಾಡಿದ NHAI
ಪಂತ್ ಅಪಘಾತಕ್ಕೀಡಾದ ಜಾಗ
Follow us on

ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ (Rishabh Pant) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯಿಂದ ಉತ್ತರ ಖಂಡದ ಹರಿದ್ವಾರದಲ್ಲಿರುವ ರೂರ್​ಕೀಯಲ್ಲಿರುವ ತನ್ನ ಮನೆಗೆ ರಿಷಭ್ ಪಂತ್ ತನ್ನ ಬೆನ್ಝ್​ ಕಾರ್​​ನಲ್ಲಿ ಬರ್ತಿದ್ರು. ಈ ವೇಳೆ ಪಂತ್​ ಇದ್ದ ಕಾರು ಅಪಘಾತಕ್ಕೀಡಾಗಿತ್ತು. ದೆಹಲಿ-ಡೆಹ್ರಾಡೂನ್ ಹೈವೇನಲ್ಲಿ ರಭಸವಾಗಿ ಬಂದ ಕಾರು ಡಿವೈಡರ್​ಗೆ ಗುದ್ದಿತ್ತು. ಗುದ್ದಿದ ರಭಸಕ್ಕೆ ಕಾರು ಪಲ್ಟಿಯಾಗಿದ್ದಲ್ಲದೆ, ಕಾರಿನಲ್ಲಿ ಬೆಂಕಿ ಹತ್ತಿಕೊಂಡಿತ್ತು. ಅಷ್ಟರಲ್ಲಾಗಲೇ ಕಾರಿನಿಂದ ಹೊರಬಂದಿದೆ ಪಂತ್, ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಈ ಯುವ ಕ್ರಿಕೆಟರ್​ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸುದ್ದಿಯಾಗಿದೆ. ಆದರೆ ಪಂತ್ ಅಪಘಾತಕ್ಕೀಡಾಗಲು ಕಾರಣವಾಗಿದ್ದ ಗುಂಡಿಗಳನ್ನು ಎನ್‌ಎಚ್‌ಎಐ ( NHAI) ರಾತ್ರೋರಾತ್ರಿ ಮುಚ್ಚಿ, ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಯತ್ನಿಸಿದೆ.

ವಾಸ್ತವವಾಗಿ, ಪಂತ್ ಕಾರು ಅಪಘಾತಕ್ಕೀಡಾದ ಬಳಿಕ ಮೊದಲ ಪ್ರತಿಕ್ರಿಯ ನೀಡಿದ್ದ ಉತ್ತರಾಖಂಡ್ ಪೊಲೀಸರು, ಪಂತ್ ನಿದ್ರೆ ಮಂಪರಿನಲ್ಲಿದಿದ್ದೆ ಅಪಘಾತಕ್ಕೆ ಕಾರಣ ಎಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಪಂತ್​ರನ್ನು ಭೇಟಿಯಾಗಿದ್ದ ಡಿಡಿಸಿಎ ನಿರ್ದೇಶಕರು, ರಸ್ತೆಯಲ್ಲಿದ್ದ ಗುಂಡಿಗಳನ್ನು ತಪ್ಪಿಸಲು ಹೋಗಿ ಈ ಅವಘಡ ಸಂಭವಿಸಿತು ಎಂದು ಪಂತ್ ಹೇಳಿದ್ದಾರೆ ಎಂದಿದ್ದರು.

‘ಪಂತ್ ಜೀವ ಉಳಿಸಿದ ಚಾಲಕ ಮತ್ತು ಕಂಡಕ್ಟರ್​ಗೆ ಜನವರಿ 26 ರಂದು ಸನ್ಮಾನ’; ಉತ್ತರಾಖಂಡ್ ಮುಖ್ಯಮಂತ್ರಿ

ಗುಂಡಿಗಳಿಂದ ಸಂಭವಿಸಿತಾ ಅಪಘಾತ?

ಅಲ್ಲದೆ ಪಂತ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ‘ಕತ್ತಲೆಯಲ್ಲಿ ಇದ್ದಕ್ಕಿದ್ದಂತೆ ಗುಂಡಿಗಳು ಕಾಣಿಸಿಕೊಂಡವು, ಹಾಗಾಗಿ ಅದನ್ನು ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆಯಿತು ಎಂದು ಪಂತ್ ಹೇಳಿಕೆ ನೀಡಿದ್ದಾರೆ ಎಂದಿದ್ದರು.

ಗುಂಡಿಗಳೇ ಅಪಘಾತಕ್ಕೆ ಪ್ರಮುಖ ಕಾರಣ- ಸ್ಥಳೀಯ

ಪಂತ್ ಅವರನ್ನು ಭೇಟಿಯಾದ ನಂತರ ಮುಖ್ಯಮಂತ್ರಿ ಯಾವ ಹೇಳಿಕೆ ನೀಡಿದ್ದರೋ ಅದೇ ರೀತಿಯ ಹೇಳಿಕೆಗಳನ್ನು ಸ್ಥಳೀಯ ಜನರು ಕೂಡ ಹೇಳಿದ್ದಾರೆ. ಸ್ಥಳಿಯರ ಪ್ರಕಾರ, ಪಂತ್ ಕಾರು ಅಪಘಾತವಾದ ಜಾಗದಲ್ಲಿ ತುಂಬ ಗುಂಡಿಗಳಿವೆ. ಹೀಗಾಗಿ ಆ ರಸ್ತೆ ಸಾವಿನ ತಾಣವಾಗಿದೆ. ಇಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ರಾತ್ರೋರಾತ್ರಿ ಗುಂಡಿಗಳನ್ನು ಮುಚ್ಚಿದ NHAI

ಆದರೆ, ಈವರೆಗೆ ಯಾರೂ ಕೂಡ ಆ ಹೊಂಡಗಳನ್ನು ಮುಚ್ಚುವ ಕೆಲಸ ಮಾಡಿರಲಿಲ್ಲ. ಆದರೆ, ಪಂತ್ ಅಪಘಾತಕ್ಕೀಡಾದ ನಂತರ ಈ ಗುಂಡಿಗಳ ಬಗ್ಗೆ ಸುದ್ದಿ ಹರಡಿದ ತಕ್ಷಣ, NHAI ರಾತ್ರೋರಾತ್ರಿ ಅವುಗಳನ್ನು ಮುಚ್ಚಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:44 am, Mon, 2 January 23