AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: 12 ತಂಡಗಳು, 33 ಪಂದ್ಯಗಳು; ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ

ICC Women's T20 World Cup 2026 Schedule: ಐಸಿಸಿ 2026ರ ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಜೂನ್ 12 ರಿಂದ ಜುಲೈ 5 ರವರೆಗೆ ನಡೆಯಲಿದೆ. ಒಟ್ಟು 12 ತಂಡಗಳು ಭಾಗವಹಿಸಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 14 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಭಾರತ, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ, ಆಸ್ಟ್ರೇಲಿಯಾ ತಂಡಗಳನ್ನು ಸಹ ಎದುರಿಸಲಿದೆ. ಸೆಮಿಫೈನಲ್ ಜೂನ್ 30, ಜುಲೈ 2 ರಂದು, ಫೈನಲ್ ಜುಲೈ 5 ರಂದು ನಡೆಯಲಿದೆ.

T20 World Cup: 12 ತಂಡಗಳು, 33 ಪಂದ್ಯಗಳು; ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ
Womens T20 World Cup
ಪೃಥ್ವಿಶಂಕರ
|

Updated on:Feb 24, 2026 | 4:19 PM

Share

ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ 2026 ರ ಪುರುಷರ ಟಿ20 ವಿಶ್ವಕಪ್​ನ ಸೂಪರ್ 8 ಸುತ್ತು ರೋಚಕಘಟ್ಟ ತಲುಪಿದೆ. ಸೆಮಿಫೈನಲ್‌ಗೇರಲು 8 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಮುಂಬರುವ ಮಹಿಳಾ ಟಿ20 ವಿಶ್ವಕಪ್​ನ (Women’s T20 World Cup 2026) ಅಧಿಕೃತ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆ ಮಾಡಿದೆ. ಅದರಂತೆ ಈ ಪಂದ್ಯಾವಳಿಯು ಜೂನ್ 12 ರಿಂದ ಆರಂಭವಾಗಿ ಜುಲೈ 5, 2026 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿದೆ. ಒಟ್ಟು 12 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಸೆಮಿಫೈನಲ್‌ ಹಾಗೂ ಫೈನಲ್ ಸೇರಿದ್ದಂತೆ ಒಟ್ಟು 33 ಪಂದ್ಯಗಳು ನಡೆಯಲಿವೆ.

ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ

ಈ ಪಂದ್ಯಾವಳಿಯು ಎರಡು ಗುಂಪುಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಗುಂಪು ಆರು ತಂಡಗಳನ್ನು ಒಳಗೊಂಡಿದೆ. ಗುಂಪು 1 ರಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಸೇರಿದ್ದರೆ, ಗುಂಪು 2 ರಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ (ಆತಿಥೇಯರು), ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಸೇರಿವೆ. ಗುಂಪು ಹಂತದಿಂದ ಅಗ್ರ ಎರಡು ತಂಡಗಳು ಜೂನ್ 30 ಮತ್ತು ಜುಲೈ 2 ರಂದು ದಿ ಓವಲ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಫೈನಲ್ ಜುಲೈ 5 ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಟೀಂ ಇಂಡಿಯಾ ವೇಳಾಪಟ್ಟಿ

ಈ ಟೂರ್ನಿಯ ಮೊದಲ ಪಂದ್ಯ ಜೂನ್ 12 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 14 ರಂದು ಪಾಕಿಸ್ತಾನದ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ಆಡಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಉಳಿದ ಗುಂಪು ಹಂತದ ಪಂದ್ಯಗಳಲ್ಲಿ ಭಾರತ ತಂಡವು ನೆದರ್ಲ್ಯಾಂಡ್ಸ್ (ಜೂನ್ 17, ಹೆಡಿಂಗ್ಲೆ), ಬಾಂಗ್ಲಾದೇಶ (ಜೂನ್ 25, ಓಲ್ಡ್ ಟ್ರಾಫರ್ಡ್) ಮತ್ತು ಆಸ್ಟ್ರೇಲಿಯಾ (ಜೂನ್ 28, ಲಾರ್ಡ್ಸ್) ತಂಡವನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ಟೀಂ ಇಂಡಿಯಾಕ್ಕೆ ನಿರ್ಣಾಯಕವಾಗುತ್ತವೆ, ವಿಶೇಷವಾಗಿ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಿರುವ ಲಾರ್ಡ್ಸ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆಡುವುದು.

ಮಹಿಳಾ ಟಿ20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ

ದಿನಾಂಕ

ಮುಖಾಮುಖಿ

ಸ್ಥಳ

12-06-2026

ಇಂಗ್ಲೆಂಡ್ vs ಶ್ರೀಲಂಕಾ

ಎಡ್ಜ್‌ಬಾಸ್ಟನ್

13-06-2026

ಸ್ಕಾಟ್ಲೆಂಡ್ vs ಐರ್ಲೆಂಡ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

13-06-2026

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ,

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

13-06-2026

ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್

ಹ್ಯಾಂಪ್‌ಶೈರ್ ಬೌಲ್

14-06-2026

ಬಾಂಗ್ಲಾದೇಶ vs ನೆದರ್ಲ್ಯಾಂಡ್ಸ್

ಎಡ್ಜ್‌ಬಾಸ್ಟನ್

14-06-2026

ಭಾರತ vs. ಪಾಕಿಸ್ತಾನ

ಎಡ್ಜ್‌ಬಾಸ್ಟನ್

16-06-2026

ನ್ಯೂಜಿಲೆಂಡ್ vs ಶ್ರೀಲಂಕಾ

ಹ್ಯಾಂಪ್‌ಶೈರ್ ಬೌಲ್

16-06-2026

ಇಂಗ್ಲೆಂಡ್ vs ಐರ್ಲೆಂಡ್

ಹ್ಯಾಂಪ್‌ಶೈರ್ ಬೌಲ್

17-06-2026

ಆಸ್ಟ್ರೇಲಿಯಾ vs ಬಾಂಗ್ಲಾದೇಶ

ಹೆಡಿಂಗ್ಲೆ

17-06-2026

ಭಾರತ vs ನೆದರ್ಲ್ಯಾಂಡ್ಸ್

ಹೆಡಿಂಗ್ಲೆ

17-06-2026

ದಕ್ಷಿಣ ಆಫ್ರಿಕಾ vs ಪಾಕಿಸ್ತಾನ

ಎಡ್ಜ್‌ಬಾಸ್ಟನ್

18-06-2026

ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್

ಹೆಡಿಂಗ್ಲೆ

19-06-2026

ನ್ಯೂಜಿಲೆಂಡ್ vs ಐರ್ಲೆಂಡ್

ಹ್ಯಾಂಪ್‌ಶೈರ್ ಬೌಲ್

20-06-2026

ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್

ಹ್ಯಾಂಪ್‌ಶೈರ್ ಬೌಲ್

20-06-2026

ಪಾಕಿಸ್ತಾನ vs ಬಾಂಗ್ಲಾದೇಶ

ಹ್ಯಾಂಪ್‌ಶೈರ್ ಬೌಲ್

20-06-2026

ಇಂಗ್ಲೆಂಡ್ vs ಸ್ಕಾಟ್ಲೆಂಡ್

ಹೆಡಿಂಗ್ಲೆ

21-06-2026

ವೆಸ್ಟ್ ಇಂಡೀಸ್ vs ಶ್ರೀಲಂಕಾ

ಬ್ರಿಸ್ಟಲ್ ಕೌಂಟಿ ಮೈದಾನ

21-06-2026

ದಕ್ಷಿಣ ಆಫ್ರಿಕಾ vs ಭಾರತ

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

23-06-2026

ನ್ಯೂಜಿಲೆಂಡ್ vs ಸ್ಕಾಟ್ಲೆಂಡ್

ಬ್ರಿಸ್ಟಲ್ ಕೌಂಟಿ ಮೈದಾನ

23-06-2026

ಶ್ರೀಲಂಕಾ vs ಐರ್ಲೆಂಡ್

ಬ್ರಿಸ್ಟಲ್ ಕೌಂಟಿ ಮೈದಾನ

23-06-2026

ಆಸ್ಟ್ರೇಲಿಯಾ vs. ಪಾಕಿಸ್ತಾನ

ಹೆಡಿಂಗ್ಲೆ

24-06-2026

ಇಂಗ್ಲೆಂಡ್ vs ವೆಸ್ಟ್ ಇಂಡೀಸ್

ಲಾರ್ಡ್ಸ್ ಕ್ರಿಕೆಟ್ ಮೈದಾನ

25-06-2026

ಭಾರತ vs ಬಾಂಗ್ಲಾದೇಶ

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

25-06-2026

ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್

ಬ್ರಿಸ್ಟಲ್ ಕೌಂಟಿ ಮೈದಾನ

26-06-2026

ಶ್ರೀಲಂಕಾ vs ಸ್ಕಾಟ್ಲೆಂಡ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

27-06-2026

ಪಾಕಿಸ್ತಾನ vs ನೆದರ್ಲ್ಯಾಂಡ್ಸ್

ಬ್ರಿಸ್ಟಲ್ ಕೌಂಟಿ ಮೈದಾನ

27-06-2026

ವೆಸ್ಟ್ ಇಂಡೀಸ್ vs ಐರ್ಲೆಂಡ್

ಬ್ರಿಸ್ಟಲ್ ಕೌಂಟಿ ಮೈದಾನ

27-06-2026

ಇಂಗ್ಲೆಂಡ್ vs ನ್ಯೂಜಿಲೆಂಡ್

ದಿ ಓವಲ್

28-06-2026

ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ

ಲಾರ್ಡ್ಸ್ ಕ್ರಿಕೆಟ್ ಮೈದಾನ

28-06-2026

ಆಸ್ಟ್ರೇಲಿಯಾ vs ಭಾರತ

ಲಾರ್ಡ್ಸ್ ಕ್ರಿಕೆಟ್ ಮೈದಾನ

30-06-2026

ಸೆಮಿಫೈನಲ್ 1

ದಿ ಓವಲ್

02-07-2026

ಸೆಮಿಫೈನಲ್ 2

ದಿ ಓವಲ್

05-07-2026

ಫೈನಲ್

ಲಾರ್ಡ್ಸ್ ಕ್ರಿಕೆಟ್ ಮೈದಾನ

Published On - 4:11 pm, Tue, 24 February 26

Follow Us
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ
ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ
ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ
ಶಾಸಕನ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ!
ಶಾಸಕನ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ!