6 6 6 4 6.. ಒಂದೇ ಓವರ್‌ನಲ್ಲಿ 28 ರನ್! 35 ಎಸೆತಗಳಲ್ಲಿ 74 ರನ್ ಚಚ್ಚಿದ ಮಾಜಿ ಆರ್ಸಿಬಿ ಆಟಗಾರ
Big Bash League: ಪ್ರಸ್ತುತ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುತ್ತಿರುವ ಸ್ಟೋಯ್ನಿಸ್ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್‌ತಂಡದ ಪರ 211 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಕೇವಲ 35 ಎಸೆತಗಳಲ್ಲಿ 74 ರನ್ ಗಳಿಸಿದರು.
6 6 6 4 6.. ಇದು ಮೊಬೈಲ್ ಸಂಖ್ಯೆ ಅಲ್ಲ.. ಮಾಜಿ ಆರ್ಸಿಬಿ ಆಟಗಾರನೊಬ್ಬ ಒಂದೇ ಓವರ್‌ನಲ್ಲಿ ಬಾರಿಸಿದ ರನ್ಗಳಿವು. ಹಿಂದೆ ಐಪಿಎಲ್‌ನಲ್ಲಿ (IPL) ರಿಷಬ್ ಪಂತ್ ತಂಡದಲ್ಲಿ ಆಡಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ (Marcus Stoinis), ಇದೀಗ ಕೆ.ಎಲ್.ರಾಹುಲ್ (KL Rahul) ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಬಿಗ್ಬ್ಯಾಷ್ ಲೀಗ್ (Big Bash League) ನಡೆಯುತ್ತಿದ್ದು, ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿರುವ ಸ್ಟೋಯ್ನಿಸ್, ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 35 ಎಸೆತಗಳನ್ನು ಎದುರಿಸಿದ ಸ್ಟೋಯ್ನಿಸ್ ಸ್ಫೋಟಕ 74 ರನ್ ಬಾರಿಸಿದ್ದಾರೆ.
ವಾಸ್ತವವಾಗಿ ಮಾರ್ಕಸ್ ಸ್ಟೋಯ್ನಿಸ್ ಈ ಹಿಂದೆ ಐಪಿಎಲ್‌ನಲ್ಲಿ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. 2021ನೇ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಪರ ಆಡಿದ್ದ ಸ್ಟೋಯ್ನಿಸ್ ಅವರನ್ನು 2022ರ ಮೆಗಾ ಹರಾಜಿನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ರೂ. 9 ಕೋಟಿ 20 ಲಕ್ಷ ಪಾವತಿಸುವ ಮೂಲಕ ಖರೀದಿಸಿತ್ತು. ಪ್ರಸ್ತುತ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುತ್ತಿರುವ ಸ್ಟೋಯ್ನಿಸ್ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್‌ತಂಡದ ಪರ 211 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಕೇವಲ 35 ಎಸೆತಗಳಲ್ಲಿ 74 ರನ್ ಗಳಿಸಿದರು. ಆದರೆ ಈ ಇನ್ನಿಂಗ್ಸ್‌ಗೂ ಮುನ್ನ ಅಂಪೈರ್ ಅವರ ಅಜಾಗರೂಕತೆಯಿಂದ ಸ್ಟೋಯ್ನಿಸ್ ಮೈದಾನಕ್ಕಿಳಿಯದೆ ಔಟಾಗುವುದರಿಂದ ಪಾರಾದರು.
Finn Allen: 37 ಎಸೆತಗಳಲ್ಲಿ 78 ರನ್; ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದ ಆರ್ಸಿಬಿ ಆಟಗಾರ!
ಟೈಮ್ ಔಟ್ನಿಂದ ಪಾರಾದ ಸ್ಟೋಯ್ನಿಸ್
ವಾಸ್ತವವಾಗಿ ಈ ಪಂದ್ಯದಲ್ಲಿ ಮಾರ್ಕಸ್ ಸ್ಟೋಯ್ನಿಸ್ ಮೈದಾನಕ್ಕಿಳಿಯದೆ ಔಟಾಗಬೇಕಿತ್ತು. ಆದರೆ ಫೀಲ್ಡ್ ಅಂಪೈರ್ ಸರಿಯಾಗಿ ಗಮನ ಹರಿಸದ ಕಾರಣ ಸ್ಟೋಯ್ನಿಸ್ ಔಟಾಗುವುದರಿಂದ ಪಾರಾದರು. ವಾಸ್ತವವಾಗಿ, ಯಾವುದೇ ಬ್ಯಾಟ್ಸ್‌ಮನ್ 75 ಸೆಕೆಂಡುಗಳಲ್ಲಿ ಕ್ರೀಸ್‌ಗೆ ಬಂದ ನಂತರ ಆಡಲು ಸಿದ್ಧರಾಗಬೇಕು ಎಂಬುದು ನಿಯಮ. ಒಂದು ವೇಳೆ ಹೊಸದಾಗಿ ಬಂದ ಬ್ಯಾಟ್ಸ್‌ಮನ್ ಈ ಸಮಯದೊಳಗೆ ಬ್ಯಾಟಿಂಗ್ಗೆ ಸಿದ್ಧವಾಗದಿದ್ದರೆ, ಫೀಲ್ಡಿಂಗ್ ತಂಡದಿಂದ ಮನವಿಯ ಮೇರೆಗೆ, ಅಂಪೈರ್ ಆ ಆಟಗಾರನನ್ನು ಟೈಮ್ ಔಟ್ ನಿಯಮದಡಿ ಔಟ್ ಎಂದು ಘೋಷಿಸಬಹುದು. ಆದರೆ, ಅಂಪೈರ್ ಈ ಬಗ್ಗೆ ಗಮನ ಹರಿಸದ ಕಾರಣ ಸ್ಟೊಯ್ನಿಸ್ ಟೈಮ್ ಔಟ್ನಿಂದ ಪಾರಾದರು. ಆ ಬಳಿಕ ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದ ಸ್ಟೋಯ್ನಿಸ್ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಸೋಲಿಗೆ ಕಾರಣವಾದರು.
ಒಂದೇ ಓವರ್‌ನಲ್ಲಿ 28 ರನ್
ಈ ಪಂದ್ಯದಲ್ಲಿ ಕೇವಲ 35 ಎಸೆತಗಳನ್ನು ಎದುರಿಸಿದ ಮಾರ್ಕಸ್ ಸ್ಟೊಯ್ನಿಸ್, 6 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 74 ರನ್ ಗಳಿಸಿ ಬಿರುಸಿನ ಆಟವಾಡಿದರು. ಅಲ್ಲದೆ ಕೇವಲ ಒಂದು ಓವರ್‌ನಲ್ಲಿ 4 ಸಿಕ್ಸರ್ ಹೊಡೆದಿದ್ದಲ್ಲದೆ, ಆ ಓವರ್‌ನಿಂದ ಒಟ್ಟು 28 ರನ್ ಕಲೆ ಹಾಕಿದರು.
6 6 6 4 6 ?
This was insane from @MStoinis smashing 28 runs off an over! #BBL12 pic.twitter.com/fIoQvnJIzX
— Melbourne Stars (@StarsBBL) December 31, 2022
ಪಂದ್ಯದ ನಂತರ ಕೋಲಾಹಲ
ಆಸ್ಟ್ರೇಲಿಯಾದ ಆಲ್‌ರೌಂಡರ್‌ನ ಈ ಅಬ್ಬರದ ಬ್ಯಾಟಿಂಗ್ನಿಂದ ಅಡಿಲೇಡ್ ಸ್ಟ್ರೈಕರ್ಸ್ ತಂಡ ಸೋಲಿಗೆ ತುತ್ತಾಗಬೇಕಾಯಿತು. ಪಂದ್ಯದ ನಂತರ, ಈ ಟೈಮ್ ಔಟ್ ಬಗ್ಗೆ ಮಾತನಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡದ ಆಟಗಾರ ಆಡಮ್ ಹೋಶ್, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿಗದಿತ ಸಮಯದ ನಂತರ ಸ್ಟೊಯ್ನಿಸ್ ಕ್ರೀಸ್ ತಲುಪಿದರು. ಅಲ್ಲದೆ 75 ಸೆಕೆಂಡ್‌ಗಳ ಒಳಗೆ ಬ್ಯಾಟಿಂಗ್ ಮಾಡಲು ಸಿದ್ಧವಾಗಲಿಲ್ಲ. ಇದರ ಬಗ್ಗೆ ನಾವು ಸಹ ಅಂಪೈರ್ ಬಳಿ ಮನವಿ ಮಾಡಿದ್ದೇವು. ಆದರೆ ಅಂಪೈರ್ ಔಟ್ ನೀಡಲಿಲ್ಲ’ ಎಂದಿದ್ದಾರೆ.
ಸ್ಟೊಯ್ನಿಸ್ ಹೇಳಿದ್ದೇನು?
ಹೋಶ್ ಹೇಳಿಕೆಯ ನಂತರ, ಇದರ ಬಗ್ಗೆ ಪ್ರತಿಕ್ರಿಯಿಸಿದ ಸ್ಟೊಯ್ನಿಸ್, ನಾನು ನಿಗದಿತ ಸಮಯಕ್ಕೆ ಬ್ಯಾಟಿಂಗ್ ಮಾಡಲು ಸಿದ್ಧನಾಗಿದ್ದೆ. ಆದರೆ ಫೀಲ್ಡರ್‌ಗಳು ತಮ್ಮ ಸ್ಥಳಗಳನ್ನು ಬದಲಾಯಿಸುತ್ತಿದ್ದರಿಂದ ನಾನು ಮೊದಲ ಚೆಂಡನ್ನು ಎದುರಿಸಲು ತಡವಾಯಿತು. ಅಲ್ಲದೆ, ಮೊದಲು ಎಲ್ಲೆಲ್ಲಿ ಫಿಲ್ಡರ್ ನಿಂತಿದ್ದಾರೆ ಎಂಬುದನ್ನು ನೋಡಿದ ನಂತರವೇ ಒಬ್ಬ ಬ್ಯಾಟರ್ ಫಿಲ್ಡಿಂಗ್ಗೆ ತಕ್ಕಂತೆ ಆಡುವುದು ಎಂದಿದ್ದಾರೆ.
ಸ್ಟೊಯಿನಿಸ್ ಅವರ ಇನ್ನಿಂಗ್ಸ್ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 186 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, 187 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಡಿಲೇಡ್ ಸ್ಟ್ರೈಕರ್ಸ್ ತಂಡವು 178 ರನ್‌ಗಳನಷ್ಟೇ ಗಳಿಸಲು ಶಕ್ತವಾಗಿ 8 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Mon, 2 January 23