Rishabh Pant Car Accident: ರಿಷಭ್ ಪಂತ್ ಭೀಕರ ರಸ್ತೆ ಅಪಘಾತಕ್ಕೆ ಒಂದು ವರ್ಷ: ಅಂದು ಏನೆಲ್ಲ ಆಯಿತು ನೋಡಿ

|

Updated on: Dec 30, 2023 | 7:14 AM

Rishabh Pant: 2022ನೇ ವರ್ಷಕ್ಕೆ ವಿದಾಯ ಹೇಳಿ 2023 ಹೊಸ ವರ್ಷವನ್ನು ಆಚರಿಸಲು ರಿಷಭ್ ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು. ಆದರೆ, ಅವರ ಕಾರು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಯಿತು. ಪಂತ್ ಅತಿವೇಗದಲ್ಲಿ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತವಾಯಿತು.

Rishabh Pant Car Accident: ರಿಷಭ್ ಪಂತ್ ಭೀಕರ ರಸ್ತೆ ಅಪಘಾತಕ್ಕೆ ಒಂದು ವರ್ಷ: ಅಂದು ಏನೆಲ್ಲ ಆಯಿತು ನೋಡಿ
Rishabh Pant Car Accident
Follow us on

ಕಳೆದ ವರ್ಷ ಇದೇ ದಿನ ಬೆಳ್ಳಂ ಬೆಳಗ್ಗೆ ಇಡೀ ಭಾರತವೇ ಆಘಾತಕ್ಕೊಳಗಾಗುವ ಅಪಘಾತವೊಂದು ಸಂಭವಿಸಿತು. ಇಂದಿನ ದಿನಾಂಕ ಅಂದರೆ ಡಿಸೆಂಬರ್ 30 ರಂದು, ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (Rishabh Pant) ಕಾರು ಆ್ಯಕ್ಸಿಡೆಂಟ್ ಆಯಿತು. ಇದರಿಂದ ತೀವ್ರವಾಗಿ ಗಾಯಗೊಂಡ ಪಂತ್ ಇಂದು ಕ್ರಿಕೆಟ್‌ ಆಡಲು ಸಾಧ್ಯವಾಗದೆ ಮೈದಾನದಿಂದ ದೂರ ಉಳಿದಿದ್ದಾರೆ. ಡಿ. 30ರ ಮುಂಜಾನೆ ಪಂತ್​ಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್​ನಲ್ಲಿ ಆಗಷ್ಟೆ ಯಶಸ್ಸು ಸಾಧಿಸುತ್ತಿದ್ದ ಪಂತ್​ಗೆ ಈ ಒಂದು ಅಪಘಾತ ಹಲವು ಕನಸುಗಳನ್ನು ನುಚ್ಚುನೂರು ಮಾಡಿತು. ಒಂದು ವರ್ಷ ಕಳೆದರೂ ಪಂತ್ ಈ ಅಪಘಾತದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

ಆ ದಿನ ಏನಾಯಿತು?

2022ನೇ ವರ್ಷಕ್ಕೆ ವಿದಾಯ ಹೇಳಿ 2023 ಹೊಸ ವರ್ಷವನ್ನು ಆಚರಿಸಲು ರಿಷಭ್ ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು. ಆದರೆ, ಅವರ ಕಾರು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಯಿತು. ಪಂತ್ ಅತಿವೇಗದಲ್ಲಿ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಅಪಘಾತವಾಯಿತು. ಅವರ ಕಾರು ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಹಳ ದೂರ ಸಾಗಿ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಬೆಂಕಿ ತೀವ್ರವಾಗಿ ಕಾಣಿಸಿಕೊಂಡಿತ್ತಂತೆ. ಕಾರಿನಿಂದ ಹೊರಬರುವುದು ಕೂಡ ಕಷ್ಟವಾಗಿತ್ತು, ಆದರೆ ಹೇಗೋ ಕಾರಿನಿಂದ ಇಳಿಯುವಲ್ಲಿ ಪಂತ್ ಯಶಸ್ವಿಯಾಗಿದ್ದರು.

ಭಾರತದ್ದು ಕಳಪೆ ಬ್ಯಾಟಿಂಗ್ ಎಂದವರ ಮೈಚಳಿ ಬಿಡಿಸಿದ ರೋಹಿತ್ ಶರ್ಮಾ: ಏನಂದ್ರು ನೋಡಿ

ಇದನ್ನೂ ಓದಿ
ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ಬಿಗ್ ಶಾಕ್
76 ರನ್ ಗಳಿಸಿ ಪೆವಿಲಿಯನ್​ಗೆ ಬಂದ ಕೊಹ್ಲಿಗೆ ರೋಹಿತ್ ಏನು ಮಾಡಿದ್ರು ನೋಡಿ
ಭಾರತಕ್ಕೆ ಬಂತು ಆನೆಬಲ: 2ನೇ ಟೆಸ್ಟ್​ಗು ಮುನ್ನ ತಂಡ ಸೇರಿದ ಹೊಸ ಆಟಗಾರ
ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ?

ಟ್ರಕ್ ಚಾಲಕನ ಸಹಾಯ

ಕಾರು ಅಪಘಾತವಾದ ಸಂದರ್ಭ ಅಲ್ಲೆ ನಿಂತಿದ್ದವರು ಪಂತ್​ಗೆ ಸಹಾಯ ಮಾಡಿದರು. ವರದಿಗಳ ಪ್ರಕಾರ, ಟ್ರಕ್‌ನ ಚಾಲಕ ಸುಶೀಲ್ ಎಂಬವರು ಪಂತ್ ಅವರನ್ನು ರಕ್ಷಿಸಲು ಮೊದಲು ಓಡಿ ಹೋದರು. ಸುಶೀಲ್ ಕಾರಿನ ಗಾಜು ಒಡೆದು ಪಂತ್ ಹೊರಬರಲು ಸಹಾಯ ಮಾಡಿದರಂತೆ. ಈ ಅಪಘಾತದಿಂದ ಪಂತ್ ಅವರ ಹಣೆಗೆ, ಕಾಲುಗಳಿಗೆ ಗಂಭೀರ ಗಾಯಗೊಂಡವು.

ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು

ಪಂತ್ ಅವರನ್ನು ತಕ್ಷಣವೇ ಹರಿದ್ವಾರದ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಹಣೆಯ ಹೊರತಾಗಿ ಬೆನ್ನಿನ ಭಾಗಕ್ಕೂ ಗಾಯಗಳಾಗಿದ್ದವು. ನಂತರ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಯಿತು. ಬಳಿಕ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗಾಗಿ, ಪಂತ್ ಮುಂಬೈಗೆ ಹೋಗಬೇಕಾಯಿತು. ಅಲ್ಲಿ ಡಾ. ದಿನೇಶ್ ಪಾರ್ದಿವಾಲಾ ಅವರು ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು. ಶಸ್ತ್ರಚಿಕಿತ್ಸೆಯ ಆರಂಭದಲ್ಲಿ ಪಂತ್‌ಗೆ ನಡೆಯಲು ಕೂಡ ಕಷ್ಟವಾಗಿತ್ತು. ಈ ಗಾಯದಿಂದಾಗಿ ಪಂತ್ ಕ್ರಿಕೆಟ್‌ನಿಂದ ಬಹಳ ಕಾಲ ದೂರ ಉಳಿದಿದ್ದರು. ಅವರು ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಔಟ್ ಆದರು. ಈ ಕಾರಣದಿಂದ ಏಕದಿನ ವಿಶ್ವಕಪ್‌ನಲ್ಲಿ ಕೂಡ ಆಡಲಿಲ್ಲ. ಸದ್ಯ ಪಂತ್ ನಡೆಯಲು ಆರಂಭಿಸಿದ್ದಾರೆ. ಆದರೆ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಪಂತ್ ಮೈದಾನಕ್ಕೆ ಮರಳಲು ಸಾಕಷ್ಟು ಸಮಯ ಬೇಕಾಗಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ