IND vs SA 2nd Test: ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ಬಿಗ್ ಶಾಕ್: 2ನೇ ಟೆಸ್ಟ್ಗು ಮುನ್ನ ದೊಡ್ಡ ಹಿನ್ನಡೆ
Temba Bavuma Ruled Out: ಸೆಂಚುರಿಯನ್ ಟೆಸ್ಟ್‌ನಲ್ಲಿ ತೆಂಬಾ ಬವುಮಾ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದರು. ಆದಾಗ್ಯೂ, ಅವರು ಗಾಯಗೊಂಡು ಪಂದ್ಯದ ಮೊದಲ ದಿನದಂದು ಮೈದಾನಕ್ಕೆ ಇಳಿಯಲಿಲ್ಲ. ಇದೀಗ ಇವರು ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
ಸೆಂಚುರಿಯನ್ ಮೈದಾನದಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ (South Africa vs India) ಗೆದ್ದುಬೀಗಿದೆ. ಕೇವಲ 3 ದಿನಗಳಲ್ಲಿ ಭಾರತವನ್ನು ಸೋಲಿಸಿದ ತಂಡವು ಎರಡು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. ಇದೀಗ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಹರಿಣಗಳಿಗೆ ದೊಡ್ಡ ಆಘಾತ ಉಂಟಾಗಿದೆ. ಸೆಂಚುರಿಯನ್ ಟೆಸ್ಟ್‌ನಲ್ಲಿ ತೆಂಬಾ ಬವುಮಾ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದರು. ಆದಾಗ್ಯೂ, ಅವರು ಗಾಯಗೊಂಡು ಪಂದ್ಯದ ಮೊದಲ ದಿನದಂದು ಮೈದಾನಕ್ಕೆ ಇಳಿಯಲಿಲ್ಲ. ಇದೀಗ ಇವರು ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಬವುಮಾ ಅಲಭ್ಯತೆ ನಡುವೆ ಡೀನ್ ಎಲ್ಗರ್ ನಾಯಕತ್ವದ ಅಧಿಕಾರವನ್ನು ವಹಿಸಿಕೊಂಡರು. ಅವರು ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದೀಗ ಎರಡನೇ ಟೆಸ್ಟ್‌ನಲ್ಲೂ ಡೀನ್ ಎಲ್ಗರ್ ದಕ್ಷಿಣ ಆಫ್ರಿಕಾದ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಅಂತಿಮ ಟೆಸ್ಟ್ ಜನವರಿ 3 ರಿಂದ ಕೇಪ್ ಟೌನ್‌ನಲ್ಲಿ ನಡೆಯಲಿದೆ. ಆ ಟೆಸ್ಟ್‌ನಲ್ಲೂ ಎಲ್ಗರ್ ದಕ್ಷಿಣ ಆಫ್ರಿಕಾದ ನಾಯಕರಾಗಿರುತ್ತಾರೆ.
ಸೆಂಚುರಿಯನ್ ಟೆಸ್ಟ್‌ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡ ಬವುಮಾ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಲಿದೆಯಂತೆ. ಗಾಯದ ನಂತರ ಇವರನ್ನು ಸ್ಕ್ಯಾನ್ಗೆ ಕರೆದುಕೊಂಡು ಹೋಗಲಾಗಿದ್ದು, ಸ್ಥಿತಿ ಕೊಂಚ ಗಂಭೀರವಾಗಿದೆ. ಹೀಗಾಗಿ ಇವರನ್ನು ಎರಡನೇ ಟೆಸ್ಟ್ನಿಂದ ಕೈಬಿಡಲಾಗಿದೆ. ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಡೀನ್ ಎಲ್ಗರ್ ನಾಯಕರಾಗಿದ್ದಾರೆ.
🟢TEMBA BAVUMA UPDATE🟡
Following continuous medical assessments, it was determined that there was too much of a risk of aggravating his left hamstring injury had he gone out to bat at this stage of the game 🏏 🇿🇦
The medical team are managing him to give him the best chance to… pic.twitter.com/Bx3bZVhUB3
— Proteas Men (@ProteasMenCSA) December 28, 2023
ಬವುಮಾ ಬದಲಿಗೆ ಜುಬೇರ್ ಹಮ್ಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 28 ವರ್ಷದ ಜುಬೇರ್ ಹಮ್ಜಾ 2019 ರಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಇದುವರೆಗೆ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಅರ್ಧಶತಕ ಸೇರಿದಂತೆ 212 ರನ್ ಗಳಿಸಿದ್ದಾರೆ. ಕಳೆದ ವರ್ಷ ರಾಂಚಿಯಲ್ಲಿ ನಡೆದ ಟೆಸ್ಟ್‌ನಲ್ಲಿ ಅವರು ಭಾರತ ವಿರುದ್ಧ ಅರ್ಧಶತಕ ಸಿಡಿಸಿದ್ದರು.
ಏತನ್ಮಧ್ಯೆ, ಗಾಯದ ಕಾರಣ, ತೆಂಬಾ ಬಾವುಮಾ ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಆಡುವ ಬಗ್ಗೆಯೂ ಅನುಮಾನವಿದೆ. ಅವರು ಈ ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಅನ್ನು ಪ್ರತಿನಿಧಿಸುತ್ತಾರೆ. ಟೂರ್ನಿ ಆರಂಭಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಬಾವುಮಾ ಇಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ