ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ವೇಳಾಪಟ್ಟಿಯನ್ನು (IPL 2024 Schedule) ಪ್ರಕಟಿಸಲಾಗಿದೆ. ಈ ಬಾರಿ ಲೋಕಸಭೆ ಚುನಾವಣೆಯ ಕಾರಣ, ಮೊದಲ 21 ದಿನಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರ ನಡುವೆ ರಿಷಭ್ ಪಂತ್ ಅಭಿಮಾನಿಗಳಿಗೆ ಶುಭಸುದ್ದಿ ಕೂಡ ಸಿಕ್ಕಿದೆ. ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲ ಪಂದ್ಯದಲೇ ರಿಷಭ್ ಪಂತ್ ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ಫ್ರಾಂಚೈಸ್‌ನ ಸಹ-ಮಾಲೀಕ ಪಾರ್ಥ್ ಜಿಂದಾಲ್ ESPNcricinfo ಗೆ ತಿಳಿಸಿದ್ದಾರೆ. ಹಾಗೆಯೆ ಅನ್ರಿಚ್ ನಾರ್ಟ್ಜೆ ಐಪಿಎಲ್‌ನಲ್ಲಿ ಪುನರಾಗಮನ ಮಾಡಲಿದ್ದಾರೆ ಎಂದು ಜಿಂದಾಲ್ ಖಚಿತ ಪಡಿಸಿದ್ದಾರೆ.
ಟಾಸ್ ಗೆದ್ದ ಇಂಗ್ಲೆಂಡ್: ಆಕಾಶ್ ದೀಪ್ ಪದಾರ್ಪಣೆ, ಇಲ್ಲಿದೆ ಭಾರತದ ಪ್ಲೇಯಿಂಗ್ XI
ಪಂತ್ ತಮ್ಮ ವಿಕೆಟ್ ಕೀಪಿಂಗ್ ಕಸರತ್ತನ್ನು ಪ್ರಾರಂಭಿಸಿದ್ದಾರೆ. ಬ್ಯಾಟಿಂಗ್ ಮಾಡುತ್ತಿದ್ದಾರೆ. ರನ್ಗೆಂದು ಓಡುತ್ತಿದ್ದಾರೆ ಎಂದು ಪಾರ್ಥ್ ಹೇಳಿದ್ದಾರೆ. ಆದಾಗ್ಯೂ, ಅವರು ಐಪಿಎಲ್ 2024ರ ಮೊದಲಾರ್ಧದಲ್ಲಿ ವಿಕೆಟ್ ಕೀಪಿಂಗ್ ಮಾಡುವುದಿಲ್ಲ, ಅವರ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
“ರಿಷಭ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಐಪಿಎಲ್‌ಗೆ ಸಂಪೂರ್ಣವಾಗಿ ಫಿಟ್ ಆಗುವ ಸಾಧ್ಯತೆಯಿದೆ. ಅವರು ಐಪಿಎಲ್ ಆಡುತ್ತಾರೆ, ಮೊದಲ ಪಂದ್ಯದಿಂದಲೇ ತಂಡವನ್ನು ಮುನ್ನಡೆಸುತ್ತಾರೆ. ಮೊದಲ ಏಳು ಪಂದ್ಯಗಳಲ್ಲಿ ಅವರು ಬ್ಯಾಟರ್ ಆಗಿ ಮತ್ತು ನಾಯಕನಾಗಿ ಮಾತ್ರ ಕಾಣಿಸಲಿದ್ದಾರೆ. ನಂತರ ಅವರ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಆಧಾರದ ಮೇಲೆ ನಿರ್ಧಾರ ಮಾಡುತ್ತೇವೆ,” ಎಂದು ಪಾರ್ಥ್ ಜಿಂದಾಲ್ ಹೇಳಿದ್ದಾರೆ.
ಹಾಗೆಯೆ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನಾರ್ಟ್ಜೆ ಫಿಟ್ ಮತ್ತು ಐಪಿಎಲ್‌ನಲ್ಲಿ ಪುನರಾಗಮನ ಮಾಡಲಿದ್ದಾರೆ ಎಂದಿದ್ದಾರೆ. ಅವರು 80% ಫಿಟ್ ಆಗಿದ್ದಾರೆ. ಮುಂದಿನ ವಾರ, ಶೇ. 100 ರಷ್ಟು ಫಿಟ್ ಆಗಿ ಬೌಲಿಂಗ್ ಮಾಡುತ್ತಾರೆ. ಅವರು IPL ನಲ್ಲಿ ಪುನರಾಗಮನವನ್ನು ಮಾಡಲಿದ್ದಾರೆ ಎಂದು ಜಿಂದಾಲ್ ಹೇಳಿದರು.
ಮಹಿಳಾ ಪ್ರೀಮಿಯರ್ ಲೀಗ್ಗೆ ಇಂದು ಚಾಲನೆ: ಮೊದಲ ಪಂದ್ಯದಲ್ಲಿ ಮುಂಬೈ-ಡೆಲ್ಲಿ ಸೆಣೆಸಾಟ
ಇದರ ನಡುವೆ ಡೆಲ್ಲಿ ಅಭಿಮಾನಿಗಳಿಗೆ ಬೇಸರದ ಸಂಗತಿ ಎಂದರೆ ಡೆಲ್ಲಿ ಕ್ಯಾಪಿಟಲ್ಸ್‌ನ ತವರು ಮೈದಾನ ಬದಲಾಗಿದೆ, ಅವರ ಆರಂಭಿಕ ಪಂದ್ಯಗಳನ್ನು ದೆಹಲಿಯಲ್ಲಿ ಆಡುವ ಬದಲು ವಿಶಾಖಪಟ್ಟಣಂ ಮೈದಾನದಲ್ಲಿ ಆಯೋಜಿಸಲಾಗಿದೆ. ಕ್ರಿಕ್‌ಬಜ್ ಪ್ರಕಾರ, ಐಪಿಎಲ್‌ಗಿಂತ ಮೊದಲು ದೆಹಲಿಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆಡುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಭಾಗವು ಈ ಬಾರಿ ದೆಹಲಿಯಲ್ಲಿ ನಡೆಯುತ್ತಿದ್ದು, ಅಲ್ಲಿಯವರೆಗೆ ಅರುಣ್ ಜೇಟ್ಲಿ ಸ್ಟೇಡಿಯಂ ಡಬ್ಲ್ಯುಪಿಎಲ್‌ನಲ್ಲಿ ನಿರತವಾಗಿರುತ್ತದೆ.
ಡಬ್ಲ್ಯುಪಿಎಲ್ ಮುಗಿದ ತಕ್ಷಣ ಇಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಏಕೆಂದರೆ ಇಷ್ಟು ಪಂದ್ಯಗಳ ನಂತರ ಕ್ರೀಡಾಂಗಣಕ್ಕೆ ಸ್ವಲ್ಪ ಸಮಯ ನೀಡಬೇಕು, ಇಲ್ಲದಿದ್ದರೆ ಪಿಚ್ ಮತ್ತು ಮೈದಾನವನ್ನು ನಿರೀಕ್ಷೆಗೆ ತಕ್ಕಂತೆ ನಿರ್ಮಿಸಲಾಗುವುದಿಲ್ಲ ಎಂದು ಐಪಿಎಲ್ ತಂಡಗಳಿಂದ ಕೂಡ ಹೇಳಲಾಗಿದೆ. ಈ ಕಾರಣಕ್ಕಾಗಿ, ವಿಶಾಖಪಟ್ಟಣವನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೋಮ್‌ಗ್ರೌಂಡ್ ಮಾಡಲಾಗಿದೆ. ಹೀಗಾಗಿ ಐಪಿಎಲ್‌ನ ಎರಡನೇ ಹಂತದಲ್ಲಿ ದೆಹಲಿಯ ಕ್ರೀಡಾಂಗಣ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ