IPL 2024 Schedule: ಐಪಿಎಲ್ ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲಿ ಸಿಎಸ್​ಕೆ- ಆರ್​ಸಿಬಿ ಮುಖಾಮುಖಿ

IPL 2024 Schedule: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ 17 ದಿನಗಳ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2 ಹಂತಗಳಲ್ಲಿ ವೇಳಾಪಟ್ಟಿ ಬಿಡುಗಡೆಯಾಗಲಿದ್ದು, ಮೊದಲ ಹಂತವನ್ನು ಈಗ ಪ್ರಕಟಿಸಲಾಗಿದೆ.

IPL 2024 Schedule: ಐಪಿಎಲ್ ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲಿ ಸಿಎಸ್​ಕೆ- ಆರ್​ಸಿಬಿ ಮುಖಾಮುಖಿ
ಐಪಿಎಲ್ 2024
Follow us
|

Updated on:Feb 22, 2024 | 6:26 PM

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ (IPL 2024) 17 ನೇ ಆವೃತ್ತಿ ಯಾವಾಗ ಪ್ರಾರಂಭವಾಗಲಿದೆ ಎಂಬುದರ ಕುರಿತು ಬಿಗ್ ಅಪ್ಡೇಟ್ ಹೊರಬಿದ್ದಿದೆ. ಅದರಂತೆ ಬಹು ನಿರೀಕ್ಷಿತ ಈ ಚುಟುಕು ಸಮರದ ಮೊದಲ 17 ದಿನಗಳ ಅಂದರೆ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ ಈ ಟೂರ್ನಿ ಮುಂದಿನ ತಿಂಗಳು ಅಂದರೆ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು (CSK vs RCB) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಸಿಎಸ್​ಕೆಯ ತವರು ನೆಲ ತಮಿಳುನಾಡಿನ ಎಂ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ.​

2 ಹಂತದಲ್ಲಿ ಐಪಿಎಲ್

ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2 ಹಂತಗಳಲ್ಲಿ ವೇಳಾಪಟ್ಟಿ ಬಿಡುಗಡೆಯಾಗಲಿದ್ದು, ಮೊದಲ ಹಂತವನ್ನು ಈಗ ಪ್ರಕಟಿಸಲಾಗಿದೆ. ಅದರಂತೆ ಮಾರ್ಚ್​ 22 ರಿಂದ ಆರಂಭವಾಗಲಿರುವ ಐಪಿಎಲ್​ನ ಮೊದಲ ಹಂತ ಏಪ್ರಿಲ್ 7 ರ ವರೆಗೆ ನಡೆಯಲ್ಲಿದೆ. ಅಂದರೆ ಮೊದಲ ಹಂತದ ಐಪಿಎಲ್ 17 ದಿನಗಳವರೆಗೆ ನಡೆಯಲ್ಲಿದೆ. ಈ ಅವದಿಯಲ್ಲಿ 21 ಪಂದ್ಯಗಳು ನಡೆಯಲ್ಲಿವೆ. ಐಪಿಎಲ್​ನ ದ್ವಿತೀಯಾರ್ಧದ ವೇಳಾಪಟ್ಟಿಯನ್ನು ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ನಂತರವಷ್ಟೇ ನಿರ್ಧಾರವಾಗಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಈ ಹಿಂದೆಯೇ ತಿಳಿಸಿದ್ದರು. ಅದರಂತೆ ಐಪಿಎಲ್​ನ ಉಳಿದಾರ್ಧದ ವೇಳಾಪಟ್ಟಿ ಲೋಕಸಬೆ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಹೊರಬರಲಿದೆ.

ವೇಳಾಪಟ್ಟಿ ಹೀಗಿದೆ

ಪಂದ್ಯ ಸಂಖ್ಯೆ ದಿನಾಂಕ ಮುಖಾಮುಖಿ ಸಮಯ ಸ್ಥಳ
1 ಮಾರ್ಚ್​ 22 ಸಿಎಸ್​ಕೆ vs ಆರ್​ಸಿಬಿ ಸಂಜೆ 7:30 ಚೆನ್ನೈ
2 ಮಾರ್ಚ್​ 23 ಪಂಜಾಬ್ vs ಡೆಲ್ಲಿ ಮಧ್ಯಾಹ್ನ 3:30 ಮೊಹಾಲಿ
3 ಮಾರ್ಚ್​ 23 ಕೋಲ್ಕತ್ತಾ vs ಹೈದರಾಬಾದ್ ಸಂಜೆ 7:30 ಕೋಲ್ಕತ್ತಾ
4 ಮಾರ್ಚ್​ 24 ರಾಜಸ್ಥಾನ್ vs ಲಕ್ನೋ ಮಧ್ಯಾಹ್ನ 3:30 ಜೈಪುರ
5 ಮಾರ್ಚ್​ 24 ಗುಜರಾತ್ vs ಮುಂಬೈ ಸಂಜೆ 7:30 ಅಹಮದಾಬಾದ್
6 ಮಾರ್ಚ್​ 25 ಆರ್​ಸಿಬಿ vs ಪಂಜಾಬ್ ಸಂಜೆ 7:30 ಬೆಂಗಳೂರು
7 ಮಾರ್ಚ್​ 26 ಚೆನ್ನೈ vs ಗುಜರಾತ್ ಸಂಜೆ 7:30 ಚೆನ್ನೈ
8 ಮಾರ್ಚ್​ 27 ಹೈದರಾಬಾದ್ vs ಮುಂಬೈ ಸಂಜೆ 7:30 ಹೈದರಾಬಾದ್
9 ಮಾರ್ಚ್​ 28 ರಾಜಸ್ಥಾನ್ vs ಡೆಲ್ಲಿ ಸಂಜೆ 7:30 ಜೈಪುರ
10 ಮಾರ್ಚ್​ 29 ಆರ್​ಸಿಬಿ vs ಕೋಲ್ಕತ್ತಾ ಸಂಜೆ 7:30 ಬೆಂಗಳೂರು
11 ಮಾರ್ಚ್​ 30 ಲಕ್ನೋ vs ಪಂಜಾಬ್ ಸಂಜೆ 7:30 ಲಕ್ನೋ
12 ಮಾರ್ಚ್​ 31 ಗುಜರಾತ್ vs ಹೈದರಾಬಾದ್ ಮಧ್ಯಾಹ್ನ 3:30 ಅಹಮದಾಬಾದ್
13 ಮಾರ್ಚ್​ 31 ಡೆಲ್ಲಿ vs ಚೆನ್ನೈ ಸಂಜೆ 7:30 ವೈಜಾಗ್
14 ಏಪ್ರಿಲ್​ 1 ಮುಂಬೈ vs ರಾಜಸ್ಥಾನ್ ಸಂಜೆ 7:30 ಮುಂಬೈ
15 ಏಪ್ರಿಲ್​ 2 ಆರ್​ಸಿಬಿ vs ಲಕ್ನೋ ಸಂಜೆ 7:30 ಬೆಂಗಳೂರು
16 ಏಪ್ರಿಲ್​ 3 ಡೆಲ್ಲಿ vs ಕೆಕೆಆರ್ ಸಂಜೆ 7:30 ವೈಜಾಗ್
17 ಏಪ್ರಿಲ್​ 4 ಗುಜರಾತ್ vs ಪಂಜಾಬ್ ಸಂಜೆ 7:30 ಅಹಮದಾಬಾದ್
18 ಏಪ್ರಿಲ್​ 5 ಹೈದರಾಬಾದ್ vs ಚೆನ್ನೈ ಸಂಜೆ 7:30 ಹೈದರಾಬಾದ್
19 ಏಪ್ರಿಲ್​ 6 ರಾಜಸ್ಥಾನ್ vs ಆರ್​ಸಿಬಿ ಸಂಜೆ 7:30 ಜೈಪುರ
20 ಏಪ್ರಿಲ್​ 7 ಮುಂಬೈ vs ಡೆಲ್ಲಿ ಮಧ್ಯಾಹ್ನ 3:30 ಮುಂಬೈ
21 ಏಪ್ರಿಲ್​ 7 ಲಕ್ನೋ vs ಗುಜರಾತ್ ಸಂಜೆ 7:30 ಲಕ್ನೋ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Thu, 22 February 24

ತಾಜಾ ಸುದ್ದಿ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ದರ್ಶನ್​ ಮಾಡಿದ್ದೇ ಸರಿ ಎನ್ನುವ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಸುಮಲತಾ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ