Rishabh Pant: ಬೀಸಿದ ರಭಸಕ್ಕೆ ಬ್ಯಾಟ್ ಕೈಯಿಂದ ಜಾರಿ ಗಾಳಿಯಲ್ಲಿ ಹಾರಿತು: ಇದು ರಿಷಭ್ ಪಂತ್ ಆಟ

| Updated By: Vinay Bhat

Updated on: Jan 14, 2022 | 12:22 PM

South Africa vs India: ಭಾರತ ದಕ್ಷಿಣ ಆಫ್ರಿಕಾ ಮೂರನೇ ಟೆಸ್ಟ್​ನ 3ನೇ ದಿನದಾಟದಲ್ಲಿ ಡ್ಯೂನೆ ಒಲಿವರ್ ಅವರ ಬೌಲಿಂಗ್​ನಲ್ಲಿ ರಿಷಭ್ ಪಂತ್ ಎದುರು ಬಂದು ಸ್ಫೋಟಕ ಹೊಡೆತಕ್ಕೆ ಮುಂದಾದರು. ಆದರೆ, ಬ್ಯಾಟ್ ಕೈಯಿಂದ ಜಾರಿದ ಪರಿಣಾಮ ಚೆಂಡು ಬೌಂಡರಿಗಷ್ಟೆ ತಲುಪಿತು.

Rishabh Pant: ಬೀಸಿದ ರಭಸಕ್ಕೆ ಬ್ಯಾಟ್ ಕೈಯಿಂದ ಜಾರಿ ಗಾಳಿಯಲ್ಲಿ ಹಾರಿತು: ಇದು ರಿಷಭ್ ಪಂತ್ ಆಟ
Rishabh Pant Bat
Follow us on

ಭಾರತ ಹಾಗೂ ದಕ್ಷಿಣ ಆಪ್ರಿಕಾ (India vs South Africa) ನಡುವಿನ ಮೂರನೇ ಟೆಸ್ಟ್ ಸರಣಿಯ ಮೂರನೇ ದಿನ ಟೀಮ್ ಇಂಡಿಯಾ (Team India) ಪಾಲಿಗೆ ಆಸರೆಯಾಗಿದ್ದು ರಿಷಭ್ ಪಂತ್ (Risbah Pant). ಸತತ ಕಳಪೆ ಆಟದಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಪಂತ್ ಆಡಲೇ ಬೇಕಾದ ಪಂದ್ಯದಲ್ಲಿ ಅಬ್ಬರಿಸಿದರು. ಭಾರತದ ಇತರ ಎಲ್ಲಾ ಆಟಗಾರರು ಕೂಡ ರನ್‌ಗಳಿಸಲು ಪರದಾಡಿದ್ದರೆ ಪಂತ್ ಮಾತ್ರ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅಮೋಘ ಶತಕ ಸಿಡಿಸಿದರು. ಏಕಾಂಗಿ ಹೋರಾಟ ನಡೆಸಿದ ಪಂತ್‌ಗೆ ನಾಯಕ ವಿರಾಟ್ ಕೊಹ್ಲಿ (Virat Kohli) ಉತ್ತಮ ಸಾಥ್ ನೀಡಿದರು. ಪಂತ್ ನೀಡಿದ ಈ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 211 ರನ್‌ಗಳ ಗುರಿಯನ್ನು ನಿಗದಿಪಡಿಸಿತು. ಸೆಂಚುರಿ ಜೊತೆಗೆ ಪಂತ್ ವಿಶೇಷ ದಾಖಲೆಯನ್ನೂ ಬರೆದರು.

ಹೌದು ಆತಿಥೇಯರ ಬೌಲಿಂಗ್‌ ಪಂಥಾಹ್ವಾನವನ್ನು ದಿಟ್ಟ ರೀತಿಯಲ್ಲೇ ಸ್ವೀಕರಿಸಿದ ಪಂತ್‌ ಅಜೇಯ 100 ರನ್‌ ಬಾರಿಸಿದರು. ಉಳಿದವರಿಂದ ಒಟ್ಟುಗೂಡಿದ್ದು 98 ರನ್‌ ಮಾತ್ರ. ಇದರಲ್ಲಿ 28 ರನ್‌ ಎಕ್ಸ್‌ಟ್ರಾ. 139 ಎಸೆತಗಳಲ್ಲಿ ಪಂತ್ ಸಿಡಿಸಿದ್ದು 6 ಫೋರ್‌, 4 ಸಿಕ್ಸರ್‌. ಈ ನಡುವೆ ತಮ್ಮದೇ ಶೈಲಿಯ ಬಿರುಸಿನ ಆಟದ ನಡುವೆ ಪಂತ್ ಕೈಯಿಂದ ಬ್ಯಾಟ್ ಕೈ ತಪ್ಪಿ ಗಾಳಿಯಲ್ಲಿ ದೂರಕ್ಕೆ ಬಿದ್ದ ಘಟನೆ ಕೂಡ ನಡೆಯಿತು.

ಕೊಹ್ಲಿ ವಿಕೆಟ್ ಕಳೆದುಕೊಂಡ ಬಳಿಕ ಟೀಮ್ ಇಂಡಿಯಾ ಮತ್ತೊಮ್ಮೆ ಕುಸಿತವನ್ನು ಕಾಣುತ್ತಾ ಸಾಗಿತು. ಆದರೆ ಮತ್ತೊಂದು ತುದಿಯಲ್ಲಿದ್ದ ರಿಷಭ್ ಪಂತ್ ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ಪಂತ್ ಆಟ ಮತ್ತಷ್ಟು ಬಿರುಸುಗೊಂಡಿತು. 60ನೇ ಓವರ್​ನ ಡ್ಯೂನೆ ಒಲಿವರ್ ಅವರ ಬೌಲಿಂಗ್​ನಲ್ಲಿ ಪಂತ್ ಎದುರು ಬಂದು ಸ್ಫೋಟಕ ಹೊಡೆತಕ್ಕೆ ಮುಂದಾದರು. ಆದರೆ, ಬ್ಯಾಟ್ ಕೈಯಿಂದ ಜಾರಿದ ಪರಿಣಾಮ ಚೆಂಡು ಬೌಂಡರಿಗಷ್ಟೆ ತಲುಪಿತು. ಬ್ಯಾಟ್ ಗಾಳಿಯಲ್ಲಿ ತೇಲಿ ಒಂದಿಷ್ಟು ದೂರದಲ್ಲಿ ಬಿದ್ದಿತು.

 

ತನ್ನ ಸಹಜ ಶೈಲಿಯಂತೆ ನಿರ್ಭೀತವಾಗಿ ಬ್ಯಾಟ್ ಬೀಸಿದ ರಿಷಬ್ ಪಂತ್ ಭಾರತದ ಬ್ಯಾಟಿಂಗ್‌ನ ಹೀರೋ ಎನಿಸಿದರು. ಇವರ ಈ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಕ್ರಿಕೆಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಪಂತ್ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಸಿಡಿಸಿದ ಈ ಶತಕದೊಂದಿಗೆ ವಿಶೇಷ ಸಾಧನೆಯನ್ನೂ ಮಾಡಿದರು. ಭಾರತೀಯ ವಿಕೆಟ್‌ಕೀಪರ್ ಓರ್ವ ದಕ್ಷಿಣ ಆಫ್ರಿಕಾ ನೆಲದಲ್ಲಿ ಸಿಡಿಸಿದ ಪ್ರಥಮ ಶತಕ ಇದಾಗಿದೆ. ಇದಕ್ಕೂ ಮುನ್ನ ಭಾರತದ ಪರ ವಿಕೆಟ್ ಕೀಪರ್ ಓರ್ವ ದಕ್ಷಿಣ ಆಫ್ರಿಕಾ ನೆಲದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿತ್ತು 2010/11ರ ಪ್ರವಾಸದಲ್ಲಿ ಧೋನಿ 90 ರನ್‌ಗಳಿಸಿದ್ದು ಅತಿ ಹೆಚ್ಚಿನ ಸ್ಕೋರ್ ಆಗಿತ್ತು. ಇಷ್ಟೇ ಅಲ್ಲದೆ ಆಫ್ರಿಕಾ ನೆಲದಲ್ಲಿ ಏಷ್ಯಾದ ವಿಕೆಟ್ ಕೀಪರ್ ಸಿಡಿಸಿದ ಅತಿ ಹೆಚ್ಚಿನ ಸ್ಕೋರ್ ಕೂಡ ಇದೇ ಆಗಿದೆ.

Gautam Gambhir: ಹೀಗೆ ಮಾಡಿದ್ರೆ ನೀವು ಯುವಕರಿಗೆ ಮಾದರಿಯಾಗುವುದಿಲ್ಲ: ಕೊಹ್ಲಿಗೆ ಕ್ಲಾಸ್ ತೆಗೆದುಕೊಂಡ ಗಂಭೀರ್

South Africa vs India: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು ಬುಮ್ರಾ, ಶಮಿಗೆ ಬಹುದೊಡ್ಡ ಚಾಲೆಂಜ್: ಯಾಕೆ ಗೊತ್ತಾ?