South Africa vs India: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು ಬುಮ್ರಾ, ಶಮಿಗೆ ಬಹುದೊಡ್ಡ ಚಾಲೆಂಜ್: ಯಾಕೆ ಗೊತ್ತಾ?
India vs South Africa Day 4: ಇಂದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿಗೆ ಬಹುದೊಡ್ಡ ದಿನವಾಗಿದೆ. 111 ರನ್‌ಗಳ ಒಳಗೆ ಹರಿಣಗಳ 8 ವಿಕೆಟ್ ಕೀಳುವ ಮಹತ್ವದ ಜವಾಬ್ದಾರಿ ಇವರಿಬ್ಬರ ಮೇಲಿದ್ದು, ಭಾರತಕ್ಕೆ ಗೆಲುವು ತಂದುಕೊಡುತ್ತಾರ ಎಂಬುದು ಕುತೂಹಲ.
ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ನಿರ್ಣಾಯಕ ಮೂರನೇ ಟೆಸ್ಟ್ (3rd Test) ಪಂದ್ಯದ ಫಲಿತಾಂಶ ಇಂದು ಹೊರಬೀಳಲಿದೆ. ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನ ರೋಚಕ ನಾಲ್ಕನೇ ದಿನದಾಟಕ್ಕೆ ಸಜ್ಜಾಗುತ್ತಿದೆ. ದಕ್ಷಿಣ ಆಫ್ರಿಕಾ ಗೆಲುವಿಗೆ 111 ರನ್‌ಗಳ ಅವಶ್ಯಕತೆಯಿದ್ದರೆ, ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವಿಗೆ 8 ವಿಕೆಟ್ಗಳು ಬೇಕಾಗಿದೆ. ಇಂದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಮೊಹಮ್ಮದ್ ಶಮಿಗೆ (Mohammed Shami) ಬಹುದೊಡ್ಡ ದಿನವಾಗಿದೆ. 111 ರನ್‌ಗಳ ಒಳಗೆ ಹರಿಣಗಳ 8 ವಿಕೆಟ್ ಕೀಳುವ ಮಹತ್ವದ ಜವಾಬ್ದಾರಿ ಇವರಿಬ್ಬರ ಮೇಲಿದ್ದು, ಭಾರತಕ್ಕೆ ಗೆಲುವು ತಂದುಕೊಡುತ್ತಾರ ಎಂಬುದು ಕುತೂಹಲ. ಟೀಮ್ ಇಂಡಿಯಾ (Team India) ಬೌಲಿಂಗ್ ಕೋಚ್ ವೇಗಿಗಳಿಗೆ ಸಾಕಷ್ಟು ಟಿಪ್ಸ್ ನೀಡಿದ್ದು ಬೌನ್ಸ್, ಲೆಂತ್ ಮೇಲೆ ಗಮನ ಹರಿಸುವಂತೆ ಸಲಹೆ ನೀಡುತ್ತಿದ್ದಾರೆ.
ಗೆಲ್ಲಲು 212 ರನ್ ಗುರಿ ಪಡೆದ ಸೌತ್ ಆಫ್ರಿಕಾಗೆ ಉತ್ತಮ ಆರಂಭ ಸಿಗಲಿಲ್ಲ. ಏಡನ್ ಮರ್ಕ್ರಮ್ ಅವರು 8ನೇ ಓವರ್ನಲ್ಲಿ ಮೊಹಮ್ಮದ್ ಶಮಿ ಎಸೆತಕ್ಕೆ ಔಟಾದಾಗ ಭಾರತ ತಂಡದ ಪಾಳಯದಲ್ಲಿ ಮಿಂಚಿನ ಸಂಚಾರ ಆಯಿತು. ಆದರೆ ಈ ಖುಷಿ ಸಾಕಷ್ಟು ಕಾಲ ಇರಲಿಲ್ಲ. ನಾಯಕ ಡೀನ್ ಎಲ್ಗರ್ ಮತ್ತು ಕೀಗನ್ ಪೀಟರ್ಸನ್ ಅವರಿಬ್ಬರು 2ನೇ ವಿಕೆಟ್ಗೆ 78 ರನ್ ಜೊತೆಯಾಟ ಆಡಿದರು. ದಿನದ ಕೊನೆಯಲ್ಲಿ ಬುಮ್ರಾ ಅವರು ಎಲ್ಗರ್ ವಿಕೆಟ್ ಪಡೆದದ್ದು ಭಾರತಕ್ಕೆ ತುಸು ನಿರಾಳ ತಂದಿತು. ಆಫ್ರಿಕಾ 3ನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಗೆಲುವಿಗೆ ಇನ್ನೂ 111 ರನ್ ಅಗತ್ಯವಿದ್ದು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
ಇದಕ್ಕೂ ಮುನ್ನ 70 ರನ್ ಮುನ್ನಡೆಯೊಂದಿಗೆ ಗುರುವಾರ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಮತ್ತೆ ಕಳಪೆ ಬ್ಯಾಟಿಂಗ ಪ್ರದರ್ಶಿಸಿತು.ಚೇತೇಶ್ವರ್ ಪೂಜಾರ(9) ಮೂರನೇ ದಿನದಾಟ ಆರಂಭವಾದ ಕೆಲ ನಿಮಿಷಗಳಲ್ಲಿಯೇ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದರು. ನಂತರ ಬಂದ ಅಜಿಂಕ್ಯಾ ರಹಾನೆ (1) ಕೂಡ ಕಳಪೆ ಆಟವನ್ನು ಮುಂದುವರಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಭಾರತದ ಅನುಭವಿ ಆಟಗಾರರಿಬ್ಬರಿಂದಲೂ ಮತ್ತೊಂದು ಹೀನಾಯ ಪ್ರದರ್ಶನ ಬಂದಿತು.
ಈ ಸಂಕಷ್ಟದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಜೊತೆಯಾಗಿ ನಿಂತು ಇನ್ನಿಂಗ್ಸ್ ಬೆಳೆಸಿದರು. ಈ ಜೋಡಿ ಭಾರತ ತಂಡದ ಕುಸಿತವನ್ನು ಒಂದು ಹಂತಕ್ಕೆ ತಡೆಯುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ತಂಡದ ರನ್ ಹೆಚ್ಚಳಕ್ಕೂ ಕಾರಣವಾದರು. ಪಂತ್ ಹಾಗೂ ಕೊಹ್ಲಿ ಜೋಡಿ ಭರ್ಜರಿ 94 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು. ಮೊದಲ ಇನ್ನಿಂಗ್ಸಲ್ಲಿ 201 ಎಸೆತಗಳಲ್ಲಿ 79 ರನ್ ಗಳಿಸಿ ಸಂಯಮದ ಮೂರ್ತಿಯಾಗಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸಲ್ಲೂ ಅಷ್ಟೇ ಸಂಯಮ ತೋರಿದರು. 29 ರನ್ ಗಳಿಸಲು ಅವರು 143 ರನ್ ಆಡಿದರು.
ಕೊಹ್ಲಿ ವಿಕೆಟ್ ಕಳೆದುಕೊಂಡ ಬಳಿಕ ಟೀಮ್ ಇಂಡಿಯಾ ಮತ್ತೊಮ್ಮೆ ಕುಸಿತವನ್ನು ಕಾಣುತ್ತಾ ಸಾಗಿತು. ಆದರೆ ಮತ್ತೊಂದು ತುದಿಯಲ್ಲಿದ್ದ ರಿಷಭ್ ಪಂತ್ ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ಅಂತಿಮ ವಿಕೆಟ್ ರೂಪದಲ್ಲಿ ಬೂಮ್ರಾ ಕ್ರೀಸ್‌ನಲ್ಲಿದ್ದಾಗ ಪಂತ್ ತಮ್ಮ ಶತಕವನ್ನು ಪೂರೈಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ ತಂಡ 200ರ ಸನಿಹಕ್ಕೆ ತಲುಪಿತ್ತು. ಆದರೆ ಪಂತ್ ಶತಕದ ಬಳಿಕ ಬೂಮ್ರಾ ಕೂಡ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತ 198 ರನ್‌ಗಳಿಗೆ ಆಲೌಟ್ ಆಯಿತು. ಪಂತ್ 139 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಿಡಿಸಿ 100 ರನ್ಗೆ ಅಜೇಯರಾದರು. ಆಫ್ರಿಕಾ ಪರ ಮ್ಯಾಕ್ರೊ ಜಾನ್ಸನ್ 4 ಹಾಗೂ ಲುಂಗು ಎನ್ಗಿಡಿ 3 ವಿಕೆಟ್ ಕಿತ್ತರು.
Virat Kohli: ಸ್ಟಂಪ್ ಮೈಕ್ನಲ್ಲಿ ಸೆರೆಯಾಯ್ತು ಡಿಆರ್ಎಸ್ ನಿರ್ಧಾರದ ಬಗ್ಗೆ ಕೊಹ್ಲಿ-ರಾಹುಲ್ ಆಡಿದ ಮಾತು
ICC U19 World Cup 2022: ಇಂದಿನಿಂದ ಅಂಡರ್-19 ವಿಶ್ವಕಪ್: ಭಾರತದ ಪಂದ್ಯ ಯಾವಾಗ?, ಯಾವುದರಲ್ಲಿ ನೇರಪ್ರಸಾರ?