Virat Kohli: ಸ್ಟಂಪ್ ಮೈಕ್ನಲ್ಲಿ ಸೆರೆಯಾಯ್ತು ಡಿಆರ್‌ಎಸ್ ನಿರ್ಧಾರದ ಬಗ್ಗೆ ಕೊಹ್ಲಿ-ರಾಹುಲ್ ಆಡಿದ ಮಾತು
Controversial DRS call South Africa vs India 3rd Test Match: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್ನ ಮೂರನೇ ದಿನದಾಟದ ವೇಳೆ ಡಿಆರ್‌ಎಸ್ ತೀರ್ಮಾನ ತಪ್ಪಾಗಿ ಕಂಡುಬಂತು. ಇದರಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಕೆಎಲ್ ರಾಹುಲ್ ಮೈದಾನದಲ್ಲೇ ಕೋಪಗೊಂಡರು.
ಕ್ರಿಕೆಟ್ನಲ್ಲಿ ಡಿಆರ್‌ಎಸ್ (DRS) ಎಂಬ ನಿಯಮ ಇಂದು ಸಾಕಷ್ಟು ವಿವಾದಗಳಿಗೆ ಎಡೆಮಾಡಿಕೊಡುತ್ತಿವೆ. ಚೆಂಡು ಬ್ಯಾಟ್ಗೆ ಟಚ್ ಆದರೂ ಡಿಆರ್ಎಸ್ನಲ್ಲಿ ವೀಕ್ಷಿಸಿದಾಗ ಟಚ್ ಆಗದಿರುವುದು ಕಂಡ ಬಂದ ತಪ್ಪು ದೃಶ್ಯಗಳು ಈಗಾಗಲೇ ಅನೇಕ ಬಾರಿ ನಡೆದಿವೆ. ಸದ್ಯ ಹರಿಣಗಳ ನಾಡಿನಲ್ಲಿ ಸಾಗುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಸರಣಿ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದಲ್ಲೂ ಡಿಆರ್‌ಎಸ್ ತೀರ್ಮಾನ ತಪ್ಪಾಗಿ ಕಂಡುಬಂತು. ಇದರಿಂದ ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಉಪ ನಾಯಕ ಕೆಎಲ್ ರಾಹುಲ್ (KL Rahul) ಮೈದಾನದಲ್ಲೇ ಕೋಪಗೊಂಡರು. ಅಷ್ಟೇ ಅಲ್ಲದೆ ಇವರು ಆಡಿದ ಮಾತುಗಳು ಸ್ಟಂಪ್ ಮೈಕ್ನಲ್ಲೂ ಸೆರೆಯಾಗಿದೆ. ಸರಿಯಾದ ನಿರ್ಧಾರ ಪ್ರಕಟಿಸಿದ್ದ ಅಂಪೈರ್ ಕೂಡ ಅಸಾಮಾಧಾನ ಹೊರಹಾಕಿದರು. ಅಷ್ಟಕ್ಕೂ ಏನಿದು ಘಟನೆ? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೂರನೇ ಟೆಸ್ಟ್ನ ಮೂರನೇ ದಿನದಾಟದಲ್ಲಿ ರಿಷಭ್ ಪಂತ್ ಅವರ ಆಕರ್ಷಕ ಶತಕದ ಫಲವಾಗಿ ಭಾರತ ತಂಡ ಆಫ್ರಿಕಾಕ್ಕೆ ಗೆಲ್ಲಲು 212 ರನ್ಗಳ ಟಾರ್ಗೆಟ್ ನೀಡಿತು. ಗುರಿ ಬೆನ್ನಟ್ಟಿದ ಆಫ್ರಿಕಾ ಆರಂಭದಲ್ಲಿ ಏಡನ್ ಮರ್ಕ್ರಮ್ ವಿಕೆಟ್ ಕಳೆದುಕೊಂಡಿತು. ಅವರು 8ನೇ ಓವರ್ನಲ್ಲಿ ಮೊಹಮ್ಮದ್ ಶಮಿ ಎಸೆತಕ್ಕೆ ಔಟಾದಾಗ ಭಾರತ ತಂಡದ ಪಾಳಯದಲ್ಲಿ ಮಿಂಚಿನ ಸಂಚಾರ ಆಯಿತು. ಆದರೆ, ನಂತರ ನಾಯಕ ಡೀನ್ ಎಲ್ಗರ್ ಮತ್ತು ಕೀಗನ್ ಪೀಟರ್ಸನ್ ಅವರಿಬ್ಬರು ಎಚ್ಚರಿಕೆಯ ಆಟಕ್ಕೆ ಮುಂದಾದರು. ಇವರ ಆಟಕ್ಕೆ ಬ್ರೇಕ್ ಹಾಕುವುದು ಭಾರತಕ್ಕೆ ಮುಖ್ಯವಾಗಿತ್ತು.
ಅದರಂತೆ 21ನೇ ಓವರ್‌ನ ಆರ್. ಅಶ್ವಿನ್ ಅವರ ನಾಲ್ಕನೇ ಎಸೆತದಲ್ಲಿ ಆಫ್ರಿಕಾ ನಾಯಕ ಡೀನ್ ಎಲ್ಗರ್ ಪ್ಲಂಬ್ ಎಲ್‌ಬಿಡಬ್ಲ್ಯು ಆದರು. ಸ್ಟ್ರೈಕ್ ಅಂಪೈರ್ ಮರಾಯಿಸ್ ಎರಾಸ್ಮಸ್ ಔಟ್ ಎಂದು ತೀರ್ಪು ಕೂಡ ನೀಡಿದರು. ಆದರೆ, ಎಲ್ಗರ್ಗೆ ಔಟ್ ಬಗ್ಗೆ ಅನುಮಾನ ಇದ್ದ ಕಾರಣ ಡಿಆರ್‌ಎಸ್ ಮೊರೆ ಹೋದರು. ಇಲ್ಲೆ ಆಗಿದ್ದು ಎಡವಟ್ಟು. 3ಡಿ ಸ್ಪಿನ್ ವಿಷನ್ ತಂತ್ರಜ್ಞಾನದಲ್ಲಿ ಚೆಂಡು ವಿಕೆಟ್‌ಗೆ ಬಡಿಯದೇ ಮೇಲೆ ಹೋಗುತ್ತಿದೆ ಎಂದು ತೋರಿಸಿತು. ಆದರೆ, ಚೆಂಡು ಎಲ್ಗರ್ ಅವರ ಮಂಡಿಗಿಂತಲೂ ಕೆಳಗೆ ಬಡಿದಿದ್ದ ಕಾರಣ ಅದು ಸ್ಪಷ್ಟವಾಗಿ ವಿಕೆಟ್‌ಗಿಂತ ಮೇಲೆ ಹೋಗಲು ಖಂಡಿತಾ ಸಾಧ್ಯವಿಲ್ಲ ಎಂಬಂತ್ತಿತ್ತು. ಇದರಿಂದ ಭಾರತೀಯ ಆಟಗಾರರು ಅಸಮಾಧಾನಗೊಂಡರು.
— Addicric (@addicric) January 13, 2022
ಥರ್ಡ್ ಅಂಪೈರ್ ಆನ್ ಫೀಲ್ಡ್ ಅಂಪೈರ್ ಮರಾಯಿಸ್ ಎರಾಸ್ಮಸ್ ಬಳಿ ನಿಮ್ಮ ನಿರ್ಧಾರವನ್ನು ಬದಲಿಸಿ ನಾಟೌಟ್ ತೀರ್ಪು ಪ್ರಕಟಿಸುವಂತೆ ಹೇಳಿದರು. ಅದರಂತೆ ಎರಾಸ್ಮನ್ ‘ಇದು ಅಸಾಧ್ಯ’ ಎಂದು ಹೇಳಿ ನಾಟೌಟ್ ತೀರ್ಪು ನೀಡಿದರು. ಇತ್ತ ಡಿಆರ್‌ಎಸ್ ತೀರ್ಪು ಕಂಡು ವಿರಾಟ್ ಕೊಹ್ಲಿ ಕೆಂಡಾಮಂಡಲವಾದರು. ಅಷ್ಟೇ ಅಲ್ಲದೆ ಸ್ಟಂಪ್ ಮೈಕ್ ಬಳಿ ತೆರಳಿ “ಕ್ಯಾಮೆರಾಮನ್‌ಗಳು ಮೊದಲು ನಿಮ್ಮ ತಂಡದ ಕಡೆಗೆ ಫೋಕಸ್ ಮಾಡಿ, ಎದುರಾಳಿ ತಂಡವನ್ನಲ್ಲ,” ಎಂದು ಕೋಪದಿಂದ ಗದರಿದರು. ಕೆಎಲ್ ರಾಹುಲ್ ಕೂಡ ಮಾತಿಗಳಿದು, “ಟೀಮ್ ಇಂಡಿಯಾದ 11 ಆಟಗಾರರ ವಿರುದ್ಧ ಇಡೀ ದಕ್ಷಿಣ ಆಫ್ರಿಕಾವೇ ಆಡುತ್ತಿದೆ,” ಎಂದು ಅಸಾಮಾಧನಗೊಂಡರು. ಎಲ್ಗರ್ ಅವರು ಈ ಸಂದರ್ಭ ಔಟಾಗುವುದರಿಂದ ಪಾರಾದರೂ ಕೊನೆಗೆ ಜಸ್‌ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ 30 ರನ್ ಗಳಿಸಿದ್ದಾಗ ಕಾಟ್ ಬಿಹೈಂಡ್ ಆದರು.
“Fcuking camera team” “Supersport is a joke” “focus on your team as well as they shine the ball eh not just the opposition. trying to catch people all the time” Kohli is angry as hell pic.twitter.com/KYFyM8BUPP
— S ? (@kollyscharm) January 13, 2022
ಸದ್ಯ ಇಂದು ಪಂದ್ಯದ 4ನೇ ದಿನದಾಟ ತೀವ್ರ ಕುತೂಹಲ ಕೆರಳಿಸಿದೆ. ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವಿಗೆ 8 ವಿಕೆಟ್ ಅಗತ್ಯವಿದ್ದರೆ, ಹರಿಣಗಳ ಗೆಲುವಿಗೆ ಇನ್ನೂ 111 ರನ್ ಬೇಕಿದೆ. ಪಂದ್ಯದಲ್ಲಿ ಸದ್ಯ 2 ದಿನಗಳ ಆಟ ಬಾಕಿ ಉಳಿದಿದ್ದರೂ, ಶುಕ್ರವಾರವೇ ಸರಣಿ ಯಾರವಶಕ್ಕೆ ಎಂಬುದು ಬಹಿರಂಗವಾಗಲಿದೆ.
ICC U19 World Cup 2022: ಇಂದಿನಿಂದ ಅಂಡರ್-19 ವಿಶ್ವಕಪ್: ಭಾರತದ ಪಂದ್ಯ ಯಾವಾಗ?, ಯಾವುದರಲ್ಲಿ ನೇರಪ್ರಸಾರ?
South Africa vs India: ಟೀಮ್ ಇಂಡಿಯಾ ಬೌಲರ್ಗಳು ಮಾಡ್ತಾರ ಪವಾಡ?: ಇಂದು ನಿರ್ಧಾರವಾಗಲಿದೆ ಸರಣಿ ಗೆಲುವಿನ ಭವಿಷ್ಯ