South Africa vs India: ಟೀಮ್ ಇಂಡಿಯಾ ಬೌಲರ್ಗಳು ಮಾಡ್ತಾರ ಪವಾಡ?: ಇಂದು ನಿರ್ಧಾರವಾಗಲಿದೆ ಸರಣಿ ಗೆಲುವಿನ ಭವಿಷ್ಯ
India vs South Africa 3rd Test: ದಿನದ ಕೊನೆಯಲ್ಲಿ ಬುಮ್ರಾ ಅವರು ಎಲ್ಗರ್ ವಿಕೆಟ್ ಪಡೆದದ್ದು ಭಾರತಕ್ಕೆ ತುಸು ನಿರಾಳ ತಂದಿತು. ಆಫ್ರಿಕಾ 3ನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಗೆಲುವಿಗೆ ಇನ್ನೂ 111 ರನ್ ಅಗತ್ಯವಿದ್ದು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ (India vs South Africa) ಸೋಲಿನ ಸುಳಿಯಲ್ಲಿದೆ. ರಿಷಭ್ ಪಂತ್ (Rishabh Pant) ಅವರ ಅಮೋಘ ಅಜೇಯ ಶತಕದ ಹೊರತಾಗಿಯೂ ಸಂಕಷ್ಟಕ್ಕೆ ಸಿಲುಕಿರುವ ಟೀಮ್ ಇಂಡಿಯಾದ (Team India) ಸರಣಿ ಗೆಲುವಿನ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸೌತ್ ಆಫ್ರಿಕಾಕ್ಕೆ ಗೆಲ್ಲಲು 111 ರನ್ಗಳು ಬೇಕಾಗಿವೆಯಷ್ಟೆ. ಭಾರತ ಹರಿಣಗಳ 8 ವಿಕೆಟ್ ಕೀಳಬೇಕಿದೆ. ಕೊಹ್ಲಿ (Virat Kohli) ಬೌಲರ್ಗಳು ಪವಾಡ ಮಾಡ್ತಾರ?, ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಡುತ್ತಾರ ಎಂಬುದು ಕಾದುನೋಡಬೇಕಿದೆ. ಒಟ್ಟಾರೆ ಇಂದು ನಾಲ್ಕನೇ ದಿನ ರೋಚಕ ಕದನವನ್ನು ನಿರೀಕ್ಷಿಸಲಾಗಿದೆ. ಅಪಾಯಕಾರಿ ಬ್ಯಾಟರ್ ಆಫ್ರಿಕಾ ನಾಯಕ ಡೇನ್ ಎಲ್ಗರ್ ವಿಕೆಟ್ ಪಡೆದುಕೊಂಡಿರುವುದು ಭಾರತಕ್ಕೆ ಕೊಂಚ ನಿರಾಳವಷ್ಟೆ.
70 ರನ್ ಮುನ್ನಡೆಯೊಂದಿಗೆ ಗುರುವಾರ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಮತ್ತೆ ಕಳಪೆ ಬ್ಯಾಟಿಂಗ ಪ್ರದರ್ಶಿಸಿತು.ಚೇತೇಶ್ವರ್ ಪೂಜಾರ(9) ಮೂರನೇ ದಿನದಾಟ ಆರಂಭವಾದ ಕೆಲ ನಿಮಿಷಗಳಲ್ಲಿಯೇ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದರು. ನಂತರ ಬಂದ ಅಜಿಂಕ್ಯಾ ರಹಾನೆ (1) ಕೂಡ ಕಳಪೆ ಆಟವನ್ನು ಮುಂದುವರಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಭಾರತದ ಅನುಭವಿ ಆಟಗಾರರಿಬ್ಬರಿಂದಲೂ ಮತ್ತೊಂದು ಹೀನಾಯ ಪ್ರದರ್ಶನ ಬಂದಿತು.
ಈ ಸಂಕಷ್ಟದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಜೊತೆಯಾಗಿ ನಿಂತು ಇನ್ನಿಂಗ್ಸ್ ಬೆಳೆಸಿದರು. ಈ ಜೋಡಿ ಭಾರತ ತಂಡದ ಕುಸಿತವನ್ನು ಒಂದು ಹಂತಕ್ಕೆ ತಡೆಯುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ತಂಡದ ರನ್ ಹೆಚ್ಚಳಕ್ಕೂ ಕಾರಣವಾದರು. ಪಂತ್ ಹಾಗೂ ಕೊಹ್ಲಿ ಜೋಡಿ ಭರ್ಜರಿ 94 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು. ಮೊದಲ ಇನ್ನಿಂಗ್ಸಲ್ಲಿ 201 ಎಸೆತಗಳಲ್ಲಿ 79 ರನ್ ಗಳಿಸಿ ಸಂಯಮದ ಮೂರ್ತಿಯಾಗಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸಲ್ಲೂ ಅಷ್ಟೇ ಸಂಯಮ ತೋರಿದರು. 29 ರನ್ ಗಳಿಸಲು ಅವರು 143 ರನ್ ಆಡಿದರು.
ಕೊಹ್ಲಿ ವಿಕೆಟ್ ಕಳೆದುಕೊಂಡ ಬಳಿಕ ಟೀಮ್ ಇಂಡಿಯಾ ಮತ್ತೊಮ್ಮೆ ಕುಸಿತವನ್ನು ಕಾಣುತ್ತಾ ಸಾಗಿತು. ಆದರೆ ಮತ್ತೊಂದು ತುದಿಯಲ್ಲಿದ್ದ ರಿಷಭ್ ಪಂತ್ ತಮ್ಮ ಹೋರಾಟವನ್ನು ಮುಂದುವರಿಸಿದ್ದರು. ಅಂತಿಮ ವಿಕೆಟ್ ರೂಪದಲ್ಲಿ ಬೂಮ್ರಾ ಕ್ರೀಸ್‌ನಲ್ಲಿದ್ದಾಗ ಪಂತ್ ತಮ್ಮ ಶತಕವನ್ನು ಪೂರೈಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ ತಂಡ 200ರ ಸನಿಹಕ್ಕೆ ತಲುಪಿತ್ತು. ಆದರೆ ಪಂತ್ ಶತಕದ ಬಳಿಕ ಬೂಮ್ರಾ ಕೂಡ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತ 198 ರನ್‌ಗಳಿಗೆ ಆಲೌಟ್ ಆಯಿತು. ಪಂತ್ 139 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಿಡಿಸಿ 100 ರನ್ಗೆ ಅಜೇಯರಾದರು. ಆಫ್ರಿಕಾ ಪರ ಮ್ಯಾಕ್ರೊ ಜಾನ್ಸನ್ 4 ಹಾಗೂ ಲುಂಗು ಎನ್ಗಿಡಿ 3 ವಿಕೆಟ್ ಕಿತ್ತರು.
ಗೆಲ್ಲಲು 212 ರನ್ ಗುರಿ ಪಡೆದ ಸೌತ್ ಆಫ್ರಿಕಾಗೆ ಉತ್ತಮ ಆರಂಭ ಸಿಗಲಿಲ್ಲ. ಏಡನ್ ಮರ್ಕ್ರಮ್ ಅವರು 8ನೇ ಓವರ್ನಲ್ಲಿ ಮೊಹಮ್ಮದ್ ಶಮಿ ಎಸೆತಕ್ಕೆ ಔಟಾದಾಗ ಭಾರತ ತಂಡದ ಪಾಳಯದಲ್ಲಿ ಮಿಂಚಿನ ಸಂಚಾರ ಆಯಿತು. ಆದರೆ ಈ ಖುಷಿ ಸಾಕಷ್ಟು ಕಾಲ ಇರಲಿಲ್ಲ. ನಾಯಕ ಡೀನ್ ಎಲ್ಗರ್ ಮತ್ತು ಕೀಗನ್ ಪೀಟರ್ಸನ್ ಅವರಿಬ್ಬರು 2ನೇ ವಿಕೆಟ್ಗೆ 78 ರನ್ ಜೊತೆಯಾಟ ಆಡಿದರು. ದಿನದ ಕೊನೆಯಲ್ಲಿ ಬುಮ್ರಾ ಅವರು ಎಲ್ಗರ್ ವಿಕೆಟ್ ಪಡೆದದ್ದು ಭಾರತಕ್ಕೆ ತುಸು ನಿರಾಳ ತಂದಿತು. ಆಫ್ರಿಕಾ 3ನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಗೆಲುವಿಗೆ ಇನ್ನೂ 111 ರನ್ ಅಗತ್ಯವಿದ್ದು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
Pro Kabaddi 2021-22: ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್: ಯಾರು ಬಲಿಷ್ಠ?