Gautam Gambhir: ಹೀಗೆ ಮಾಡಿದ್ರೆ ನೀವು ಯುವಕರಿಗೆ ಮಾದರಿಯಾಗುವುದಿಲ್ಲ: ಕೊಹ್ಲಿಗೆ ಕ್ಲಾಸ್ ತೆಗೆದುಕೊಂಡ ಗಂಭೀರ್
Stump-mic Controversy: ಡಿಆರ್‌ಎಸ್ ತೀರ್ಪು ಕಂಡು ವಿರಾಟ್ ಕೊಹ್ಲಿ ಕೆಂಡಾಮಂಡಲವಾದರು. ಅಷ್ಟೇ ಅಲ್ಲದೆ ಸ್ಟಂಪ್ ಮೈಕ್ ಬಳಿ ತೆರಳಿ ಕೋಪದಿಂದ ಗದರಿದರು. ಇದೇ ವಿಚಾರಕ್ಕೆ ಗೌತಮ್ ಗಂಭೀರ್ ಹೇಳಿಕೆ ನೀಡಿದ್ದು, ಕೊಹ್ಲಿ ಈರೀತಿಯ ವರ್ತನೆ ತೋರಿದರೆ ಎಂದಿಗೂ ಯುವಕರಿಗೆ ಮಾದರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಗೌತಮ್ ಗಂಭೀರ್ (Gautam Gambhir) ಅವರು ನಾಯಕ ವಿರಾಟ್ ಕೊಹ್ಲಿ (Virat Kohli) ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ಮೂರನೇ ಟೆಸ್ಟ್ನ ಮೂರನೇ ದಿನದಾಟದ ವೇಳೆ ಡಿಆರ್‌ಎಸ್ (DRS) ನಿಯಮಕ್ಕೆ ಕೊಹ್ಲಿ ನೀಡಿದ ಪ್ರತಿಕ್ರಿಯೆ ಕುರಿತು ಗಂಭೀರ್ ಕಿಡಿಕಾರಿದ್ದಾರೆ. ವಿಶ್ವದ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಈರೀತಿಯ ವರ್ತನೆ ತೋರಿದರೆ ಎಂದಿಗೂ ಯುವಕರಿಗೆ ಮಾದರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. “ಟೀಮ್ ಇಂಡಿಯಾ ನಾಯಕನಾಗಿ ಕೊಹ್ಲಿ ಎಲ್ಲರಿಗೂ ಮಾದರಿಯಾಗಬೇಕು. ಪ್ರಬುದ್ಧ ವ್ಯಕ್ತಿಯಂತೆ ವರ್ತಿಸಬೇಕು” ಎಂದು ಗಂಭಿರ್ ಖಾಸಗಿ ಸಂದರ್ಶನವೊಂದರಲ್ಲಿ ಹೇಳಿಕೆನೀಡಿದ್ದಾರೆ.
ಏನಿದು ಘಟನೆ?:
ಮೂರನೇ ಟೆಸ್ಟ್ನ ಮೂರನೇ ಭಾರತ ತಂಡ ಆಫ್ರಿಕಾಕ್ಕೆ ಗೆಲ್ಲಲು 212 ರನ್ಗಳ ಟಾರ್ಗೆಟ್ ನೀಡಿತು. ಅದರಂತೆ 21ನೇ ಓವರ್‌ನ ಆರ್. ಅಶ್ವಿನ್ ಅವರ 4ನೇ ಎಸೆತದಲ್ಲಿ ನಾಯಕ ಡೀನ್ ಎಲ್ಗರ್ ಪ್ಲಂಬ್ ಎಲ್‌ಬಿಡಬ್ಲ್ಯು ಆದರು. ಸ್ಟ್ರೈಕ್ ಅಂಪೈರ್ ಮರಾಯಿಸ್ ಎರಾಸ್ಮಸ್ ಔಟ್ ಎಂದು ತೀರ್ಪು ಕೂಡ ನೀಡಿದರು. ಆದರೆ, ಎಲ್ಗರ್ಗೆ ಔಟ್ ಬಗ್ಗೆ ಅನುಮಾನ ಇದ್ದ ಕಾರಣ ಡಿಆರ್‌ಎಸ್ ಮೊರೆ ಹೋದರು.
ಡಿಆರ್ಎಸ್ನಲ್ಲಿ ವೀಕ್ಷಿಸಿದಾಗ 3ಡಿ ಸ್ಪಿನ್ ವಿಷನ್ ತಂತ್ರಜ್ಞಾನದಲ್ಲಿ ಚೆಂಡು ವಿಕೆಟ್‌ಗೆ ಬಡಿಯದೇ ಮೇಲೆ ಹೋಗುತ್ತಿದೆ ಎಂದು ತೋರಿಸಿತು. ಆದರೆ, ಚೆಂಡು ಎಲ್ಗರ್ ಅವರ ಮಂಡಿಗಿಂತಲೂ ಕೆಳಗೆ ಬಡಿದಿದ್ದ ಕಾರಣ ಅದು ಸ್ಪಷ್ಟವಾಗಿ ವಿಕೆಟ್‌ಗಿಂತ ಮೇಲೆ ಹೋಗಲು ಖಂಡಿತಾ ಸಾಧ್ಯವಿಲ್ಲ ಎಂಬಂತ್ತಿತ್ತು. ಥರ್ಡ್ ಅಂಪೈರ್ ಆನ್ ಫೀಲ್ಡ್ ಅಂಪೈರ್ ಮರಾಯಿಸ್ ಎರಾಸ್ಮಸ್ ಬಳಿ ನಿಮ್ಮ ನಿರ್ಧಾರವನ್ನು ಬದಲಿಸಿ ನಾಟೌಟ್ ತೀರ್ಪು ಪ್ರಕಟಿಸುವಂತೆ ಹೇಳಿದರು.
ಇತ್ತ ಡಿಆರ್‌ಎಸ್ ತೀರ್ಪು ಕಂಡು ವಿರಾಟ್ ಕೊಹ್ಲಿ ಕೆಂಡಾಮಂಡಲವಾದರು. ಅಷ್ಟೇ ಅಲ್ಲದೆ ಸ್ಟಂಪ್ ಮೈಕ್ ಬಳಿ ತೆರಳಿ “ಕ್ಯಾಮೆರಾಮನ್‌ಗಳು ಮೊದಲು ನಿಮ್ಮ ತಂಡದ ಕಡೆಗೆ ಫೋಕಸ್ ಮಾಡಿ, ಎದುರಾಳಿ ತಂಡವನ್ನಲ್ಲ,” ಎಂದು ಕೋಪದಿಂದ ಗದರಿದರು. ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಗಂಭೀರ್ ಹೇಳಿಕೆ ನೀಡಿದ್ದು, ಕೊಹ್ಲಿ ಈರೀತಿಯ ವರ್ತನೆ ತೋರಿದರೆ ಎಂದಿಗೂ ಯುವಕರಿಗೆ ಮಾದರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇವೇಳೆ ಕೆಎಲ್ ರಾಹುಲ್ ಕೂಡ ಮಾತಿಗಳಿದು, “ಟೀಮ್ ಇಂಡಿಯಾದ 11 ಆಟಗಾರರ ವಿರುದ್ಧ ಇಡೀ ದಕ್ಷಿಣ ಆಫ್ರಿಕಾವೇ ಆಡುತ್ತಿದೆ,” ಎಂದು ಅಸಾಮಾಧನಗೊಂಡರು. ಆರ್ ಅಶ್ವಿನ್ ಕೂಡ ಪ್ರತಿಕ್ರಿಯೆ ನೀಡಿ, “ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ಗೆಲ್ಲಲು ನೀವು ಇನ್ನು ಒಳ್ಳೆಯ ಮಾರ್ಗ ಕಂಡುಕೊಳ್ಳಬೇಕಿತ್ತು,” ಎಂದು ಹೇಳುವುದು ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದ ಫಲಿತಾಂಶ ಇಂದು ಹೊರಬೀಳಲಿದೆ. ಆಫ್ರಿಕಾ ಗೆಲುವಿಗೆ 111 ರನ್ಗಳ ಅವಶ್ಯಕತೆಯಿದ್ದರೆ, ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವಿಗೆ 8 ವಿಕೆಟ್ಗಳು ಬೇಕಾಗಿದೆ. ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿಗೆ ಮೇಲೆ ಸಾಕಷ್ಟು ಒತ್ತಡವಿದ್ದು 111 ರನ್ಗಳ ಒಳಗೆ ಹರಿಣಗಳ 8 ವಿಕೆಟ್ ಕೀಳುವ ಮಹತ್ವದ ಜವಾಬ್ದಾರಿ ಇವರಿಬ್ಬರ ಮೇಲಿದೆ.
South Africa vs India: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು ಬುಮ್ರಾ, ಶಮಿಗೆ ಬಹುದೊಡ್ಡ ಚಾಲೆಂಜ್: ಯಾಕೆ ಗೊತ್ತಾ?
Virat Kohli: ಸ್ಟಂಪ್ ಮೈಕ್ನಲ್ಲಿ ಸೆರೆಯಾಯ್ತು ಡಿಆರ್‌ಎಸ್ ನಿರ್ಧಾರದ ಬಗ್ಗೆ ಕೊಹ್ಲಿ-ರಾಹುಲ್ ಆಡಿದ ಮಾತು