ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್​ಗೆ ಪಾಕ್ ತಂಡ ಎಂಟ್ರಿ; 3ನೇ ಆವೃತ್ತಿಗೆ ಇಂಗ್ಲೆಂಡ್ ಆತಿಥ್ಯ

|

Updated on: Aug 06, 2023 | 8:40 AM

Road Safety World Series 2023: ಮುಂಬರುವ ಆವೃತ್ತಿಯ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಜ್ಜಾಗಿವೆ.

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್​ಗೆ ಪಾಕ್ ತಂಡ ಎಂಟ್ರಿ; 3ನೇ ಆವೃತ್ತಿಗೆ ಇಂಗ್ಲೆಂಡ್ ಆತಿಥ್ಯ
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್
Follow us on

ಎರಡು ಯಶಸ್ವಿ ಆವೃತ್ತಿಗಳ ಬಳಿಕ ಇದೀಗ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್​ನ (Road Safety World Series) ಮೂರನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಈ ಲೀಗ್​ನಲ್ಲಿ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ ಆಟಗಾರರ ತಂಡಗಳು ಭಾಗವಹಿಸಲಿದ್ದು, ಈವರೆಗೆ ನಡೆದಿರುವ ಎರಡೂ ಆವೃತ್ತಿಗಳನ್ನು ಗೆದ್ದುಕೊಳ್ಳುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಇನ್ನು ಈ ಬಾರಿ ನಡೆಯಲ್ಲಿರುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್​ನ ಮೂರನೇ ಆವೃತ್ತಿಯಲ್ಲಿ ಪಾಕಿಸ್ತಾನ ತಂಡ (Pakistan Cricket Team) ಮೊದಲ ಬಾರಿಗೆ ಕಣಕ್ಕಿಳಿಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ವಾಸ್ತವವಾಗಿ 20220-21 ಮತ್ತು 2022 ರಲ್ಲಿ ನಡೆದ ಎರಡು ಆವೃತ್ತಿಗಳನ್ನು ಭಾರತದಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಕ್ಲಬ್‌ನಿಂದ (England) ಅನುಮೋದನೆ ಪಡೆದು ಇಂಗ್ಲೆಂಡ್‌ನಲ್ಲಿ ನಡೆಯಲಿದೆ ಎಂದು ESPNCricinfo ವರದಿ ಮಾಡಿದೆ.

ಕಣದಲ್ಲಿ ಒಂಬತ್ತು ತಂಡಗಳು

ಮೂರನೇ ಆವೃತ್ತಿಯ ವೇಳಾಪಟ್ಟಿ ಇದುವರೆಗೆ ಪ್ರಕಟಗೊಂಡಿಲ್ಲ. ಆದರೆ ಮಾಹಿತಿ ಪ್ರಕಾರ, ಈ ಟಿ20 ಲೀಗ್ ಅನ್ನು ಸೆಪ್ಟೆಂಬರ್ ಆರಂಭದಿಂದ ಕನಿಷ್ಠ ಮೂರು ವಾರಗಳವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಹಾಗೆಯೇ ಈ ಬಾರಿ ಪಾಕಿಸ್ತಾನ ಹೊಸದಾಗಿ ಲೀಗ್​ಗೆ ಎಂಟ್ರಿಕೊಡುತ್ತಿರುವುದರಿಂದ ತಂಡಗಳ ಸಂಖ್ಯೆಯು ಹೆಚ್ಚುತ್ತಿದ್ದು, 2022 ರಲ್ಲಿ ಎಂಟು ತಂಡಗಳು ಲೀಗ್​ನಲ್ಲಿ ಭಾಗವಹಿಸಿದ್ದವು. ಆದರೆ ಈ ಬಾರಿ ಒಂಬತ್ತು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ವರದಿಯಾಗಿದೆ.

6 ಎಸೆತಗಳಲ್ಲಿ 30 ರನ್ ಚಚ್ಚಿದ ಕ್ರಿಕೆಟ್ ದೇವರು..! ಅಬ್ಬರಿಸಿದ ಯುವಿ- ಯೂಸುಫ್; ವಿಡಿಯೋ

ಎರಡೂ ಸೀಸನ್​ನಲ್ಲಿ ಭಾರತ ಚಾಂಪಿಯನ್

ಪಂದ್ಯಾವಳಿಯ ಮೊದಲ ಸೀಸನ್ 2020 ಮತ್ತು 2021 ರಲ್ಲಿ ನಡೆದಿತ್ತು. ಕೊರೊನಾ ಸೋಂಕು ಹೆಚ್ಚಾಗಿದ್ದರಿಂದ ಪಂದ್ಯಾವಳಿಯನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು. ಆ ನಂತರ 2021 ರಲ್ಲಿ ಈ ಲೀಗ್​ ಅನ್ನು ಮರು ಆಯೋಜಿಸಲಾಗಿತ್ತು. ಬಳಿಕ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 14 ರನ್‌ಗಳಿಂದ ಸೋಲಿಸುವ ಮೂಲಕ ಭಾರತದ ಮೊದಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಬಳಿಕ 2022 ರಲ್ಲಿ ನಡೆದಿದ್ದ ಎರಡನೇ ಆವೃತ್ತಿಗೆ ಕಾನ್ಪುರ, ಇಂದೋರ್, ಡೆಹ್ರಾಡೂನ್ ಮತ್ತು ರಾಯ್ಪುರ್ ನಗರಗಳು ಆತಿಥ್ಯವಹಿಸಿದ್ದವು. ಈ ಸೀಸನ್​ನಲ್ಲಿ ಆಸ್ಟ್ರೇಲಿಯಾ ಸೇರಿದಂತೆ (ಕೋವಿಡ್ ಕಾರಣದಿಂದ ಆಸೀಸ್ ಮೊದಲ ಸೀಸನ್ ಆಡಿರಲಿಲ್ಲ) ಎಂಟು ತಂಡಗಳು ಕಣಕ್ಕಿಳಿದ್ದಿದ್ದವು. ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಶ್ರೀಲಂಕಾ ತಂಡವನ್ನು 33 ರನ್‌ಗಳಿಂದ ಮಣಿಸಿದ್ದ ಭಾರತ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿತ್ತು.

ಈ ಈವೆಂಟ್‌ನ ಕೊನೆಯ ಎರಡು ಆವೃತ್ತಿಗಳಲ್ಲಿ ಭಾಗವಹಿಸಿದ ತಂಡಗಳಲ್ಲಿ ಪಾಕಿಸ್ತಾನ ಇರಲಿಲ್ಲ. ಆದಾಗ್ಯೂ, ಮುಂಬರುವ ಆವೃತ್ತಿಯ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಜ್ಜಾಗಿವೆ.

ಟೂರ್ನಿಯಲ್ಲಿರುವ ಸ್ಟಾರ್ ಆಟಗಾರರು

ಈ ಟಿ20 ಪಂದ್ಯಾವಳಿಯಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಡ್ವೇನ್ ಸ್ಮಿತ್, ಕೆವಿನ್ ಪೀಟರ್ಸನ್, ಸನತ್ ಜಯಸೂರ್ಯ, ಶೇನ್ ವ್ಯಾಟ್ಸನ್, ಬ್ರೆಟ್ ಲೀ, ತಿಲಕರತ್ನೆ ದಿಲ್ಶನ್, ಸನತ್ ಜಯಸೂರ್ಯ ಮತ್ತು ತಿಸಾರ ಪೆರೇರಾ, ಬ್ರಿಯಾನ್ ಲಾರಾ, ಜಾಂಟಿ ರೋಡ್ಸ್, ಮಖಯಾ ಎನ್ಟಿನಿ, ರಾಸ್ ಟೇಲರ್ ಮತ್ತು ಇನ್ನೂ ಅನೇಕರು ಈವೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಉಪಸ್ಥಿತಿಯಿಂದಾಗಿ ಪ್ರಾರಂಭದಿಂದಲೂ ಲೀಗ್‌ನ ಜನಪ್ರಿಯತೆ ಹೆಚ್ಚಿದೆ. ಇದೀಗ ಪಾಕಿಸ್ತಾನದ ಸೇರ್ಪಡೆಯೊಂದಿಗೆ ಪಂದ್ಯಾವಳಿಯು ಮತ್ತಷ್ಟು ರೋಚಕತೆ ಪಡೆದುಕೊಳ್ಳಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ