ಪಾಕ್ ಕ್ರಿಕೆಟರ್ ಮನೆಗೆ ನುಗ್ಗಿ ಲಕ್ಷಲಕ್ಷ ದೋಚಿದ ಖದೀಮರು..!
ವರದಿಗಳ ಪ್ರಕಾರ, ಕಳ್ಳರು ಹಫೀಜ್ ಅವರ ಮನೆಯಲ್ಲಿದ್ದ 20000 ಯುಎಸ್ ಡಾಲರ್ ಅಂದರೆ ಸುಮಾರು 56 ಲಕ್ಷ ಪಾಕಿಸ್ತಾನಿ ರೂಪಾಯಿಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಮೊಹಮ್ಮದ್ ಹಫೀಜ್ (Mohammad Hafeez) ಮನೆಯಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯರಾತ್ರಿ ಹಫೀಜ್ ಮನೆಗೆ ನುಗ್ಗಿದ ಕಳ್ಳರು ಸುಮಾರು 56 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಕಳ್ಳತನ ನಡೆದ ಸಂದರ್ಭದಲ್ಲಿ ಮೊಹಮ್ಮದ್ ಹಫೀಜ್ ಮನೆಗೆ ಬೀಗ ಹಾಕಲಾಗಿದ್ದು, ಮನೆಯಲ್ಲಿ ಯಾರು ಇರದನ್ನು ಗಮನಿಸಿದ ಕಳ್ಳರು ಮಧ್ಯರಾತ್ರಿ ಮನೆಗೆ ನುಗ್ಗಿ ಲಕ್ಷಲಕ್ಷ ದೋಚಿದ್ದಾರೆ. ಕ್ರಿಕೆಟರ್ ಮೊಹಮ್ಮದ್ ಹಫೀಜ್ ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (Pakistan Super League) ಆಡುತ್ತಿದ್ದು ಕ್ವೆಟ್ಟಾ ಗ್ಲಾಡಿಯೇಟರ್ಸ್ ( Quetta Gladiators) ಪರ ಕಣಕ್ಕಿಳಿಯುತ್ತಾರೆ. ಕಳ್ಳತನವಾಗಿರುವ ಸಮಯದಲ್ಲಿ ಅವರ ಪತ್ನಿ ಕೂಡ ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಕಳ್ಳರು ಮಧ್ಯರಾತ್ರಿ ಮೊಹಮ್ಮದ್ ಹಫೀಜ್ ಮನೆಗೆ ನುಗಿದ್ದು, ಹಣ ಕದ್ದು ಪರಾರಿಯಾಗಿದ್ದಾರೆ. ಕಳ್ಳರು ಮನೆಗೆ ನುಗ್ಗಿದ್ದ ವೇಳೆ ಕ್ರಿಕೆಟಿಗ ಹಫೀಜ್ ಆಗಲಿ, ಅವರ ಪತ್ನಿಯಾಗಲಿ ಅವರ ಮನೆಯಲ್ಲಿ ಇರಲಿಲ್ಲ. ಪ್ರಸ್ತುತ ಹಫೀಜ್ ಅವರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ನಿರತರಾಗಿರುವುದರಿಂದಾಗಿ ಅವರ ಪತ್ನಿಯ ಚಿಕ್ಕಪ್ಪ ಶಾಹಿದ್ ಇಕ್ಬಾಲ್ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
IND vs AUS: ಸುಲಭದ ಕ್ಯಾಚ್ ಕೈಚೆಲ್ಲಿ ಮಕ್ಕಳಂತೆ ನಕ್ಕ ಭರತ್! ಮೌನಕ್ಕೆ ಶರಣಾದ ರೋಹಿತ್; ವಿಡಿಯೋ
ಹಫೀಜ್ ಮನೆಯಲ್ಲಿ 56 ಲಕ್ಷ ರೂ. ಕಳುವು
ವರದಿಗಳ ಪ್ರಕಾರ, ಕಳ್ಳರು ಹಫೀಜ್ ಅವರ ಮನೆಯಲ್ಲಿದ್ದ 20000 ಯುಎಸ್ ಡಾಲರ್ ಅಂದರೆ ಸುಮಾರು 56 ಲಕ್ಷ ಪಾಕಿಸ್ತಾನಿ ರೂಪಾಯಿಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಹಫೀಜ್ ಅನುಪಸ್ಥಿತಿಯಲ್ಲಿ ಮನೆಯಲ್ಲಿ ನಡೆದ ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳರನ್ನು ಹಿಡಿಯವುದಕ್ಕೆ ಈ ದೃಶ್ಯಾವಳಿಗಳು ನೆರವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಸ್‌ಎಲ್‌ನಲ್ಲಿ ಹಫೀಜ್ ಅದ್ಭುತ ಆಟ
ಇನ್ನು ಪಿಎಸ್‌ಎಲ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುತ್ತಿರುವ ಮೊಹಮ್ಮದ್ ಹಫೀಜ್ ಮಾರ್ಚ್ 8 ರಂದು ನಡೆದ ಪಂದ್ಯದಲ್ಲಿ 41 ರನ್‌ಗಳ ಅಜೇಯ ಮತ್ತು ಪಂದ್ಯ-ವಿಜೇತ ಇನ್ನಿಂಗ್ಸ್ ಆಡಿದರು. ಪೇಶಾವರ್ ಝಲ್ಮಿ ತಂಡ ನೀಡಿದ್ದ 241 ರನ್‌ಗಳ ದೊಡ್ಡ ಗುರಿಯನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ ಹಫೀಜ್ ಅವರ ಸ್ಫೋಟಕ ಇನ್ನಿಂಗ್ಸ್ನಿಂದಾಗಿ ಇನ್ನು 10 ಎಸೆತಗಳು ಬಾಕಿ ಇರುವಂತೆಯೆ ಎಂಟು ವಿಕೆಟ್‌ಗಳಿಂದ ಜಯ ಸಾಧಿಸಿತು.
ಇನ್ನು ಈ ಲೀಗ್‌ನಲ್ಲಿ ಮೊಹಮ್ಮದ್ ಹಫೀಜ್ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು ಅದರಲ್ಲಿ ಅವರು 152 ಸ್ಟ್ರೈಕ್ ರೇಟ್‌ನಲ್ಲಿ 134 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 48 ರನ್ ಆಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
