ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ T20 ಸರಣಿ (India vs West Indies, 1st T20I ) ಬುಧವಾರದಿಂದ ಶುರುವಾಗಲಿದೆ. ಸರಣಿಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma) , ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ವಾಪಸಾತಿ ಮತ್ತು ಅವರ ಪಾತ್ರದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಕಂಬ್ಯಾಕ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹಿಟ್ಮಾನ್, ಅತ್ಯುತ್ತಮ ಫಾರ್ಮ್ ಮೂಲಕ ಪಾಂಡ್ಯ ತಂಡಕ್ಕೆ ಮರಳುವ ವಿಶ್ವಾಸವಿದೆ ಎಂದಿದ್ದಾರೆ.
‘ಹಾರ್ದಿಕ್ ಪಾಂಡ್ಯ ಬಹಳ ಪ್ರಮುಖ ಆಟಗಾರ. ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಕೊಡುಗೆ ನೀಡುತ್ತಾರೆ. ಪಾಂಡ್ಯ ಬ್ಯಾಟ್ಸ್‌ಮನ್ ಆಗಿ ಆಡಬಹುದೇ ಅಥವಾ ಇಲ್ಲವೇ ಎಂಬುದರ ಕುರಿತು ಟೀಮ್ ಮ್ಯಾನೇಜ್‌ಮೆಂಟ್ ತೀರ್ಮಾನ ಮಾಡುತ್ತೆ. ಆದರೆ ಪ್ರತಿಯೊಬ್ಬ ಆಟಗಾರನು ಸಂಪೂರ್ಣವಾಗಿ ಫಿಟ್ ಆಗಿರಬೇಕು. ಹೀಗಾಗಿ ಸಂಪೂರ್ಣ ಫಿಟ್ನೆಸ್ನೊಂದಿಗೆ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಬಹುದು ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಇದೇ ವೇಳೆ ಮುಂಬರುವ ಟಿ20 ವಿಶ್ವಕಪ್‌ಗಾಗಿ ತಂಡದ ಆಯ್ಕೆ ಬಗ್ಗೆ ಮಾತನಾಡಿದ ಹಿಟ್ಮ್ಯಾನ್ ‘ವಿಶ್ವಕಪ್‌ಗಾಗಿ ನಾವು ತ್ವರಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ವಿಶ್ವಕಪ್‌ಗೆ ನಾವು ಸರಿಯಾದ ತಂಡದ ಸಂಯೋಜನೆಯನ್ನು ಕಂಡುಕೊಳ್ಳಬೇಕಿದೆ. ಆಸ್ಟ್ರೇಲಿಯಾದ ಪ್ರತಿಯೊಂದು ಮೈದಾನದ ಪರಿಸ್ಥಿತಿಗಳು ವಿಭಿನ್ನವಾಗಿವೆ. ಆದ್ದರಿಂದ, ತಂಡದ ಸಂಯೋಜನೆಯನ್ನು ಪ್ರತಿಯೊಬ್ಬರ ಪ್ರಕಾರ ನೋಡಬೇಕಾಗುತ್ತದೆ. ನಮ್ಮಲ್ಲಿ ಎಷ್ಟು ಸ್ಪಿನ್ ಮತ್ತು ಪೇಸ್ ಆಲ್ ರೌಂಡರ್ಗಳಿದ್ದಾರೆ, ಅವರಲ್ಲಿ ಯಾರೆಲ್ಲಾ ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವವರಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಬೌಲರ್‌ಗಳ ವಿಷಯದಲ್ಲೂ ಅಷ್ಟೇ, ಪರಿಸ್ಥಿತಿಗೆ ಅನುಗುಣವಾಗಿ ಅವರನ್ನು ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಈ ಎಲ್ಲಾ ಲೆಕ್ಕಾಚಾರಗಳ ಮೂಲಕ ತಂಡದ ಆಯ್ಕೆ ನಡೆಯಲಿದೆ ಎಂದರು.
‘ನಾವು ಎಲ್ಲಾ ಆಟಗಾರರಿಗೆ ಅವರ ಪಾತ್ರವನ್ನು ಹೇಳಿದ್ದೇವೆ. ಈಗ ಅವರು ತಮ್ಮ ಕೌಶಲ್ಯವನ್ನು ಹೇಗೆ ತೋರಿಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ಯಾವುದೇ ಆಟಗಾರನ ಸ್ಥಾನವನ್ನು ಪಡೆದುಕೊಳ್ಳುವ ಬ್ಯಾಕ್‌ಅಪ್ ಆಟಗಾರರ ಅಗತ್ಯವಿದೆ. ಇದೀಗ ಯುಜ್ವೇಂದ್ರ ಚಹಾಲ್ ಲಯದಲ್ಲಿದ್ದು, ಕೆಲ ಸಮಯ ಗಾಯಗೊಂಡಿದ್ದ ಕುಲದೀಪ್ ಲಯ ಮರಳಿ ಪಡೆಯಲು ಸಮಯ ಹಿಡಿಯುತ್ತದೆ. ರಿಸ್ಟ್ ಸ್ಪಿನ್ನರ್ ಲಯಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತದೆ, ನಾವು ಕಾಯಬೇಕಾಗಿದೆ. ಅದರಂತೆ ಇಬ್ಬರು ಜೊತೆಯಾಗಿ ಕಣಕ್ಕಿಳಿಯುವುದನ್ನು ಎದುರು ನೋಡುತ್ತಿದ್ದೇವೆ ಎಂದು ರೋಹಿತ್ ಶರ್ಮಾ ತಿಳಿಸಿದರು.
ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ
ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..!
(Rohit sharma big comments on hardik pandya t20 world cup india vs west indies 1st t20i)