
ಟೀಂ ಇಂಡಿಯಾದ ಮಾಜಿ ಟೆಸ್ಟ್ ನಾಯಕ ರೋಹಿತ್ ಶರ್ಮಾ (Rohit Sharma) 2 ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ದೂರವಿದ್ದಾರೆ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರಿಂದ, ಇತ್ತೀಚಿನ ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಟೀಂ ಇಂಡಿಯಾ ಜೊತೆ ಇರಲಿಲ್ಲ. ಆದರೆ ಇದರ ಹೊರತಾಗಿಯೂ, ಸ್ಟಾರ್ ಬ್ಯಾಟ್ಸ್‌ಮನ್ ವಿವಿಧ ಕಾರಣಗಳಿಗಾಗಿ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ರೋಹಿತ್ ಕಳೆದ ಹಲವು ವಾರಗಳಿಂದ ಯುರೋಪ್‌ನಲ್ಲಿ ರಜೆಯಲ್ಲಿದ್ದರು. ಈಗ ಭಾರತಕ್ಕೆ ಮರಳಿರುವ ಹಿಟ್‌ಮ್ಯಾನ್ ಬರೋಬ್ಬರಿ 5 ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತದ ದುಬಾರಿ ಕಾರನ್ನು ಖರೀದಿಸಿದ್ದಾರೆ. ಅಲ್ಲದೆ ಈ ಕಾರಿನಲ್ಲಿರುವ ಅತ್ಯಂತ ವಿಶೇಷವಾದ ವಿಷಯವೆಂದರೆ ಅದರ ನೋಂದಣಿ ಸಂಖ್ಯೆ, ಇದು ಅಂತಹ ದುಬಾರಿ ಕಾರನ್ನು ಇನ್ನಷ್ಟು ವಿಶೇಷವಾಗಿಸಿದೆ.
ರೋಹಿತ್ ಅವರ ಗ್ಯಾರೇಜ್‌ನಲ್ಲಿ ಈಗಾಗಲೇ ಸ್ಪೋರ್ಟ್ಸ್ ಕಾರುಗಳು ಸೇರಿದಂತೆ ಹಲವು ದುಬಾರಿ ಕಾರುಗಳಿವೆ. ಇದೀಗ ರೋಹಿತ್ ಪ್ರಸಿದ್ಧ ಇಟಾಲಿಯನ್ ಕಾರು ತಯಾರಕ ಕಂಪನಿಯಾದ ಲ್ಯಾಂಬೋರ್ಘಿನಿಯಿಂದ ಸೂಪರ್ ಕಾರನ್ನು ಖರೀದಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕಾರಿನ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ವೈರಲ್ ಆಗಿದ್ದವು. ಅದರಂತೆ ರೋಹಿತ್ ಕಿತ್ತಳೆ ಬಣ್ಣದ ಲ್ಯಾಂಬೋರ್ಘಿನಿ ಉರುಸ್ ಎಸ್ಇ ಕಾರನ್ನು ಖರೀದಿಸಿದ್ದಾರೆ, ಇದರ ಎಕ್ಸ್ ಶೋ ರೂಂ ಬೆಲೆ ಭಾರತದಲ್ಲಿ 4.57 ಕೋಟಿ ರೂ. ಆಗಿದೆ. ಮುಂಬೈನಲ್ಲಿ ಇದರ ಆನ್-ರೋಡ್ ಬೆಲೆ ಸುಮಾರು 5.25 ಕೋಟಿ ರೂ. ಆಗುತ್ತದೆ.
🚨NEW ORANGE LAMBORGHINI OF ROHIT SHARMA🚨
“Rohit Sharma bought a new orange colour Lamborghini Urus Se which has been delivered in Mumbai and bRO will be seen driving it soon.” pic.twitter.com/vY0aWTzGZZ
— 𝐑𝐮𝐬𝐡𝐢𝐢𝐢⁴⁵ (@rushiii_12) August 9, 2025
ಅಲ್ಲದೆ ರೋಹಿತ್ ತನ್ನ ಹೊಸ ಲ್ಯಾಂಬೋರ್ಘಿನಿ ಕಾರಿಗೆ ನೋಂದಣಿ ಸಂಖ್ಯೆ 3015 ಅನ್ನು ತೆಗೆದುಕೊಂಡಿದ್ದಾರೆ. ಈ ಸಂಖ್ಯೆಯ ವಿಶೇಷತೆ ಏನೆಂದರೆ, ಅದು ಅವರ ಇಬ್ಬರೂ ಮಕ್ಕಳ ಜನ್ಮ ದಿನಾಂಕವಾಗಿದೆ. ಅವರ ಮಗಳು ಸಮೈರಾ ಡಿಸೆಂಬರ್ 30 ರಂದು ಜನಿಸಿದರೆ, ಮಗ ಅಹಾನ್ ನವೆಂಬರ್ 15 ರಂದು ಜನಿಸಿದ್ದರು. ಅಂದಹಾಗೆ, ರೋಹಿತ್ ಬಳಿ ಈ ಹಿಂದೆಯೂ ಲ್ಯಾಂಬೋರ್ಘಿನಿ ಉರುಸ್ ಕಾರು ಇತ್ತು, ಅದು ನೀಲಿ ಬಣ್ಣದ್ದಾಗಿತ್ತು. ಅದರ ನಂಬರ್ ಪ್ಲೇಟ್ ಕೂಡ ತುಂಬಾ ವಿಶೇಷವಾಗಿತ್ತು. ರೋಹಿತ್ ಅದಕ್ಕಾಗಿ 264 ಸಂಖ್ಯೆಯನ್ನು ತೆಗೆದುಕೊಂಡಿದ್ದರು, ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ ಅತ್ಯಧಿಕ ಸ್ಕೋರ್‌ನ ವಿಶ್ವ ದಾಖಲೆಯ ಸಂಕೇತವಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ