Rohit Sharma Record: ಬ್ಯಾಂಡೇಜ್‌ ತೊಟ್ಟು ಮೈದಾನಕ್ಕಿಳಿದು ಸಿಕ್ಸರ್​ಗಳ ದಾಖಲೆ ಬರೆದ ರೋಹಿತ್ ಶರ್ಮಾ

| Updated By: Vinay Bhat

Updated on: Dec 08, 2022 | 10:34 AM

India vs Bangladesh: ರೋಹಿತ್​ ಶರ್ಮಾ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ 3ನೇ ಸಿಕ್ಸರ್​ ಬಾರಿಸಿದಾಗ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 500 ಸಿಕ್ಸರ್​ ಸಿಡಿಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಭಾರತದ ಮೊದಲ​ ಹಾಗೂ ವಿಶ್ವದ ಎರಡನೇ ಆಟಗಾರ ಆಗಿದ್ದಾರೆ.

Rohit Sharma Record: ಬ್ಯಾಂಡೇಜ್‌ ತೊಟ್ಟು ಮೈದಾನಕ್ಕಿಳಿದು ಸಿಕ್ಸರ್​ಗಳ ದಾಖಲೆ ಬರೆದ ರೋಹಿತ್ ಶರ್ಮಾ
Rohit Sharma Record
Follow us on

ಏಕದಿನ ಕ್ರಿಕೆಟ್​ನಲ್ಲಿ ಗೆಲುವಿನ ಓಟವನ್ನು ಕಾಣುತ್ತಿದ್ದ ಭಾರತ ಇದೀಗ ಒಂದರ ಹಿಂದೆ ಒಂದರಂತೆ ಸೋಲಿನ ಆಘಾತ ಅನುಭವಿಸುತ್ತಿದೆ. ಢಾಕಾದ ಶೇರೆ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ (India vs Bangladesh) ತೀವ್ರ ಮುಜುಗರ ಉಂಟಾಗಿದೆ. ಸರಣಿ ಕಳೆದುಕೊಂಡಿದ್ದರೂ ಭಾರತೀಯ ಅಭಿಮಾನಿಗಳ ಹೃದಯ ಗೆದ್ದಿದ್ದು ಹಿಟ್​ಮ್ಯಾನ್ ರೋಹಿತ್ ಶರ್ಮಾ (Rohit Sharma). ಗಾಯದ ಸಮಸ್ಯೆ ನಡುವೆಯೂ ಕೊನೆಯಲ್ಲಿ ಕೈಗೆ ಬ್ಯಾಂಡೇಜ್ ತೊಟ್ಟು ಸ್ಫೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ತಂಡದ ಗೆಲುವಿಗೆ ಹೋರಾಟ ನಡೆಸಿದರು. 28 ಎಸೆತಗಳಲ್ಲಿ 3 ಫೋರ್‌ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 51 ರನ್‌ ಸಿಡಿಸಿದರು. ಆದರೆ, ಟೀಮ್ ಇಂಡಿಯಾ (Team India) ಕೊನೆಗೆ 5 ರನ್‌ಗಳ ಅಂತರದ ವೀರೋಚಿತ ಸೋಲು ಕಂಡಿತು.

ಇದರ ನಡುವೆ ಹಿಟ್​ಮ್ಯಾನ್ ಕ್ರಿಕೆಟ್ ಲೋಕದಲ್ಲಿ ನೂತನ ದಾಖಲೆ ಬರೆದಿದ್ದಾರೆ. ರೋಹಿತ್​ ಶರ್ಮಾ ಈ ಪಂದ್ಯದಲ್ಲಿ 3 ನೇ ಸಿಕ್ಸರ್​ ಬಾರಿಸಿದಾಗ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 500 ಸಿಕ್ಸರ್​ ಸಿಡಿಸಿದ ಸಾಧನೆ ಮಾಡಿದರು. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್​ ಹಾಗೂ ವಿಶ್ವದ ಎರಡನೇ ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದಾರೆ.

ವೆಸ್ಟ್​ಇಂಡೀಸ್​ನ ದೈತ್ಯ ಬ್ಯಾಟ್ಸ್​​ಮನ್​​ ಕ್ರಿಸ್​ಗೇಲ್​ 553 ಸಿಕ್ಸರ್​ ಸಿಡಿಸಿದ ಮೊದಲಿಗರಾಗಿದ್ದು, ಈ ದಾಖಲೆ ಮುರಿಯಲು ರೋಹಿತ್​​ ಇನ್ನೂ 51 ಸಿಕ್ಸರ್​ ಬಾರಿಸಬೇಕಿದೆ. ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ 476, ನ್ಯೂಜಿಲೆಂಡ್​ನ ಮಾಜಿ ಆಟಗಾರ ಬ್ರೆಂಡನ್ ಮೆಕಲಮ್ 398, ಮತ್ತೊಬ್ಬ ಕಿವೀಸ್​ ಬ್ಯಾಟರ್​ ಮಾರ್ಟಿನ್ ಗಪ್ಟಿಲ್ 383 ಸಿಕ್ಸರ್ ಬಾರಿಸಿದ ಮೊದಲ ಐವರಾಗಿದ್ದಾರೆ.

ಇದನ್ನೂ ಓದಿ
Rohit Sharma Injury: ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಕ್ಕೆ ತ್ರಿಬಲ್ ಶಾಕ್: ಮೂವರು ಪ್ಲೇಯರ್ಸ್ ತಂಡದಿಂದ ಔಟ್
Rohit Sharma: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರೋಹಿತ್ ಶರ್ಮಾ: ಏನಂದ್ರು ಗೊತ್ತೇ?
Shreyas Iyer: ಕೆಎಲ್ ರಾಹುಲ್ ದಾಖಲೆ ಉಡೀಸ್ ಮಾಡಿದ ಶ್ರೇಯಸ್ ಅಯ್ಯರ್
IND vs BAN: 7 ವರ್ಷಗಳ ಬಳಿಕ ಹೀನಾಯ ಸೋಲು: 2ನೇ ಬಾರಿ ಬಾಂಗ್ಲಾ ವಿರುದ್ಧ ಸರಣಿ ಸೋತ ಭಾರತ..!

Virat Kohli: 8 ವರ್ಷಗಳ ನಂತರ ಆರಂಭಿಕನಾದ ವಿರಾಟ್ ಕೊಹ್ಲಿ: ಫಲಿತಾಂಶ ಒಂದೇ..!

ಬೌಲರ್​ಗಳಿಂದ ಹೋರಾಟ ಕಂಡುಬರಲಿಲ್ಲ: ರೋಹಿತ್

ಪಂದ್ಯ ಮುಗಿದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಬೌಲರ್​ಗಳಿಂದ ಉತ್ತಮ ಹೋರಾಟ ಕಂಡುಬರಲಿಲ್ಲ ಎಂದು ಹೇಳಿದ್ದಾರೆ. ”ಒಂದು ಪಂದ್ಯವನ್ನು ಸೋತಾಗ ಅಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎಂಬ ಎರಡು ವಿಚಾರಗಳು ಹುಟ್ಟಿಗೊಳ್ಳುತ್ತದೆ. 69 ರನ್​ಗೆ 6 ವಿಕೆಟ್​ಗಳನ್ನು ನಾವು ಪಡೆದು ಎದುರಾಳಿಯ ಮೊತ್ತವನ್ನು 270 ಆಗುವಂತೆ ಮಾಡಿದೆವು. ನಮ್ಮ ಬೌಲರ್​ಗಳಿಂದ ನಂತರದಲ್ಲಿ ಉತ್ತಮ ಹೋರಾಟ ಕಂಡುಬರಲಿಲ್ಲ. ಅತ್ಯುತ್ತಮ ಆರಂಭ ಮಾಡಿದ್ದೆವು, ಮಧ್ಯಮ ಓವರ್ ಮತ್ತು ಅಂತ್ಯದಲ್ಲಿ ನಡೆದ ಘಟನೆ ನಮಗೆ ಬೇಸರ ತಂದಿದೆ ಇದೇರೀತಿ ಕಳೆದ ಪಂದ್ಯದಲ್ಲಿ ಕೂಡ ನಡೆಯಿತು. ನಾವು ಕಂಡಿತವಾಗಿಯು ಕೆಲವು ತಪ್ಪುಗಳ ಬಗ್ಗೆ ಕೆಲಸ ಮಾಡಬೇಕಿದೆ. ನಮ್ಮ ಮಧ್ಯಮ ಕ್ರಮಾಂಕ ಇನ್ನಷ್ಟು ಬಲಿಷ್ಠವಾಗಬೇಕು. ನಮ್ಮ ತಂಡದಲ್ಲಿ ಕೆಲವು ಇಂಜುರಿಗಳಾಗಿವೆ. ಇದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ,” ಎಂದು ಹೇಳಿದ್ದಾರೆ.

ಮುಂದಿನ ಪಂದ್ಯಕ್ಕಿಲ್ಲ ಮೂವರು ಪ್ಲೇಯರ್ಸ್:

ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ, ದೀಪಕ್ ಚಹರ್ ಮತ್ತು ಕುಲ್ದೀಪ್ ಸೇನ್ ಹೊರಬಿದ್ದಿದ್ದಾರೆ. ಇಂಜುರಿಗೆ ತುತ್ತಾಗಿರುವವರು ತೃತೀಯ ಏಕದಿನಕ್ಕೆ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಫೀಲ್ಡಿಂಗ್‌ ವೇಳೆ ಸ್ಲಿಪ್‌ ವಿಭಾಗದಲ್ಲಿ ಕ್ಯಾಚ್‌ ತೆಗೆದುಕೊಳ್ಳುವಾಗ ಎಡಗೈ ಹೆಬ್ಬೆರಳು ಮುರಿದು ಕೊಂಡ ರೋಹಿತ್‌ ಶರ್ಮಾ ಪಂದ್ಯದ ಬಹುಪಾಲು ಪೆವಿಲಿಯನ್‌ನಲ್ಲೇ ಇದ್ದರು. ದೀಪಕ್ ಚಹರ್ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಪಂದ್ಯದ ಮಧ್ಯೆ ನೋವು ಜೋರಾಗಿ ಕಾಣಿಸಿಕೊಂಡ ಕಾರಣ ಇವರು ಕೇವಲ ಮೂರು ಓವರ್​ಗಳನ್ನಷ್ಟೆ ಬಾಲ್ ಮಾಡಿದರು. ಹೀಗಾಗಿ ಇವರು ಕೂಡ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಇತ್ತ ಕುಲ್ದೀಪ್ ಸೇನ್ ಬೆನ್ನು ನೋವಿನಿ ಗಾಯದಿಂದ ಔಟಾಗಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ