Rohit Sharma: ರೋಹಿತ್ ಶರ್ಮಾಗೆ ಗಂಭೀರ ಗಾಯ: ಮೈದಾನದಿಂದ ಹೊರಕ್ಕೆ
India vs Bangladesh 2nd ODI: ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿ ಮಿಂಚಿದರು. ಮೊದಲಿಗೆ ಶಕೀಬ್ ಅಲ್ ಹಸನ್ (8) ವಿಕೆಟ್ ಪಡೆದ ಸುಂದರ್, ಆ ಬಳಿಕ ಮುಶ್ಪಿಕುರ್ ರಹೀಮ್ (12) ಹಾಗೂ ಅಫಿಫ್ ಹೊಸೈನ್ (0) ಸ್ಪಿನ್ ಬಲೆಗೆ ಬೀಳಿಸಿದರು.
India vs Bangladesh 2nd ODI: ಢಾಕಾದ ಶೇರೆ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್ನ 4ನೇ ಎಸೆತದಲ್ಲಿ ಚೆಂಡು ಅನಾಮುಲ್ ಹಕ್ ಅವರ ಬ್ಯಾಟ್ ಸವರಿ ಸ್ಲಿಪ್ನತ್ತ ಚಿಮ್ಮಿತ್ತು. ಅಲ್ಲೇ ಫೀಲ್ಡಿಂಗ್ನಲ್ಲಿದ್ದ ರೋಹಿತ್ ಶರ್ಮಾ ಕ್ಯಾಚ್ ಹಿಡಿಯುವ ಯತ್ನ ಮಾಡಿದ್ದರು. ಆದರೆ ಚೆಂಡು ನೇರವಾಗಿ ಹಿಟ್ಮ್ಯಾನ್ ಅವರ ಹೆಬ್ಬೆರಳಿಗೆ ತಾಗಿ ಕೆಳಗೆ ಬಿದ್ದಿದೆ. ಇದರಿಂದ ಹೆಬ್ಬೆರಳಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ರೋಹಿತ್ ಶರ್ಮಾ ಮೈದಾನ ತೊರೆದರು. ಇದೀಗ ಗಾಯವನ್ನು ಪರಿಶೀಲಿಸಿರುವ ಫಿಸಿಯೋ ಸ್ಕ್ಯಾನಿಂಗ್ ಮಾಡಲು ಸೂಚಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ಗೆ ಇಳಿಯುವುದು ಅನುಮಾನ. ಸದ್ಯ ಟೀಮ್ ಇಂಡಿಯಾವನ್ನು ಉಪ ನಾಯಕ ಕೆಎಲ್ ರಾಹುಲ್ ಮುನ್ನಡೆಸಿದ್ದಾರೆ.
pic.twitter.com/SoOLqQYLn1#RohitSharma
ಇದನ್ನೂ ಓದಿ— Shivam Rajvanshi (@social_timepass) December 7, 2022
ಇದಕ್ಕೂ ಮುನ್ನ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಟೀಮ್ ಇಂಡಿಯಾ ಬೌಲರ್ಗಳ ಕರಾರುವಾಕ್ ದಾಳಿ ಮುಂದೆ ರನ್ಗಳಿಸಲು ಬಾಂಗ್ಲಾ ಬ್ಯಾಟರ್ಗಳು ಪರದಾಡಿದರು. 2ನೇ ಓವರ್ನ 5ನೇ ಎಸೆತದಲ್ಲಿ ಅನಾಮುಲ್ ಹಕ್ (11) ಅವರ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು.
ಇದಾದ ಬಳಿಕ 10ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಸಿರಾಜ್ ಲಿಟನ್ ದಾಸ್ (7) ಕ್ಲೀನ್ ಬೌಲ್ಡ್ ಮಾಡಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜ್ಮುಲ್ ಹೊಸೈನ್ರನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಕ್ಲೀನ್ ಬೌಲ್ಡ್ ಮಾಡಿ ಉಮ್ರಾನ್ ಮಲಿಕ್ ಪೆವಿಲಿಯನ್ಗೆ ಕಳುಹಿಸಿದರು.
ಇದರ ನಡುವೆ ದಾಳಿಗಿಳಿದ ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿ ಮಿಂಚಿದರು. ಮೊದಲಿಗೆ ಶಕೀಬ್ ಅಲ್ ಹಸನ್ (8) ವಿಕೆಟ್ ಪಡೆದ ಸುಂದರ್, ಆ ಬಳಿಕ ಮುಶ್ಪಿಕುರ್ ರಹೀಮ್ (12) ಹಾಗೂ ಅಫಿಫ್ ಹೊಸೈನ್ (0) ಸ್ಪಿನ್ ಬಲೆಗೆ ಬೀಳಿಸಿದರು. ಪರಿಣಾಮ 20 ಓವರ್ ಮುಕ್ತಾಯದ ವೇಳೆಗೆ ಬಾಂಗ್ಲಾದೇಶ್ ತಂಡವು 6 ವಿಕೆಟ್ ಕಳೆದುಕೊಂಡಿತು. ಅಲ್ಲದೆ ಕಲೆಹಾಕಿದ್ದು ಕೇವಲ 71 ರನ್ಗಳು ಮಾತ್ರ.
ಭಾರತ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಬಾಂಗ್ಲಾದೇಶ (ಪ್ಲೇಯಿಂಗ್ ಇಲೆವೆನ್): ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಇಬಾದತ್ ಹೊಸೈನ್, ಮುಸ್ತಫಿಜುರ್ ರೆಹಮಾನ್