India vs Bangladesh: ಒಂದು ಬದಲಾವಣೆ ಸಾಧ್ಯತೆ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
India's Predicted Playing XI: ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಬ್ಯಾಟ್ ಬೀಸಲಿದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಿದ್ರೆ, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ.
India vs Bangladesh 2nd ODI: ಭಾರತ-ಬಾಂಗ್ಲಾದೇಶ್ ನಡುವಣ 2ನೇ ಏಕದಿನ ಪಂದ್ಯ ಬುಧವಾರ ಢಾಕಾದಲ್ಲಿ ನಡೆಯಲಿದೆ. ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದು, ಹೀಗಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ನೊಂದಿಗೆ ಕಣಕ್ಕಿಳಿಯಲಿದೆ. ಏಕೆಂದರೆ 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 1 ವಿಕೆಟ್ನಿಂದ ರೋಚಕ ಜಯ ಸಾಧಿಸಿತು. ಇದೀಗ 2ನೇ ಪಂದ್ಯವನ್ನು ಗೆದ್ದುಕೊಂಡರೆ ಸರಣಿ ಬಾಂಗ್ಲಾ ಪಾಲಾಗಲಿದೆ. ಅಂದರೆ ಇದು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಸಮತೋಲನದಿಂದ ಕೂಡಿದ ತಂಡವನ್ನೇ ಕಣಕ್ಕಿಳಿಸಿತ್ತು. ಹೀಗಾಗಿ ಅದೇ ಬಳಗವನ್ನೇ 2ನೇ ಪಂದ್ಯದಲ್ಲೂ ಆಡಿಸಲಿದೆ.
ಇದಾಗ್ಯೂ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಶಾರ್ದೂಲ್ ಠಾಕೂರ್ ತಂಡದಿಂದ ಹೊರಗುಳಿದರೆ ಉಮ್ರಾನ್ ಮಲಿಕ್ಗೆ ಅವಕಾಶ ಸಿಗಬಹುದು. ಅದೇ ರೀತಿ ಅಕ್ಷರ್ ಪಟೇಲ್ 2ನೇ ಪಂದ್ಯಕ್ಕೆ ಸಂಪೂರ್ಣ ಫಿಟ್ ಆದರೆ ಮಾತ್ರ ಶಹಬಾಜ್ ಅಹ್ಮದ್ ಅವಕಾಶ ಕಳೆದುಕೊಳ್ಳಲಿದ್ದಾರೆ.
ಅಂದರೆ ಇಲ್ಲಿ ಇಬ್ಬರು ಆಟಗಾರರ ಫಿಟ್ನೆಸ್ ಮೇಲೆ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆಯಾಗಬಹುದು. ಆದರೆ ಮುಂಬರುವ ಪಂದ್ಯಗಳ ಹಿತದೃಷ್ಟಿಯಿಂದ ಶಾರ್ದೂಲ್ ಠಾಕೂರ್ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇದರಿಂದ ಆಡುವ ಬಳಗದಲ್ಲಿ ಉಮ್ರಾನ್ ಮಲಿಕ್ ಎಂಟ್ರಿ ಕೊಡಬಹುದು. ಈ ಒಂದು ಬದಲಾವಣೆ ಹೊರತಾಗಿ ಟೀಮ್ ಇಂಡಿಯಾದಲ್ಲಿ ಬೇರೆ ಚೇಂಜಸ್ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.
ಅದರಂತೆ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಬ್ಯಾಟ್ ಬೀಸಲಿದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಿದ್ರೆ, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. 6ನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂರ್, 7ನೇ ಕ್ರಮಾಂಕದಲ್ಲಿ ಶಹಬಾಜ್ ಅಹ್ಮದ್ ಆಲ್ರೌಂಡರ್ಗಳಾಗಿ ಕಣಕ್ಕಿಳಿಯಲಿದ್ದಾರೆ.
ಇನ್ನುಳಿದಂತೆ ದೀಪಕ್ ಚಹರ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಸೇನ್ ಹಾಗೂ ಶಾರ್ದೂಲ್ ಠಾಕೂರ್ ಅಥವಾ ಉಮ್ರಾನ್ ಮಲಿಕ್ ವೇಗಿಗಳಾಗಿ ತಂಡದಲ್ಲಿ ಇರಲಿದ್ದಾರೆ. ಅದರಂತೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ..
ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11:
- ರೋಹಿತ್ ಶರ್ಮಾ (ನಾಯಕ)
- ಶಿಖರ್ ಧವನ್
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಕೆಎಲ್ ರಾಹುಲ್ (ವಿಕೆಟ್ ಕೀಪರ್)
- ವಾಷಿಂಗ್ಟನ್ ಸುಂದರ್
- ಶಹಬಾಜ್ ಅಹ್ಮದ್
- ದೀಪಕ್ ಚಹಾರ್
- ಮೊಹಮ್ಮದ್ ಸಿರಾಜ್
- ಕುಲ್ದೀಪ್ ಸೇನ್
- ಶಾರ್ದೂಲ್ ಠಾಕೂರ್/ ಉಮ್ರಾನ್ ಮಲಿಕ್
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್, ರಜತ್ ಪಾಟಿದಾರ್, ಇಶಾನ್ ಕಿಶನ್ , ರಾಹುಲ್ ತ್ರಿಪಾಠಿ, ಅಕ್ಷರ್ ಪಟೇಲ್.