AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರೋಹಿತ್ ಶರ್ಮಾ: ಏನಂದ್ರು ಗೊತ್ತೇ?

India vs Bangladesh 2nd ODI: 5 ರನ್​ಗಳ ರೋಚಕ ಜಯದೊಂದಿಗೆ ಬಾಂಗ್ಲಾದೇಶ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಕೆಲ ಮಾಹಿತಿಗಳನ್ನು ಹಂಚಿಕೊಂಡರು.

Rohit Sharma: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರೋಹಿತ್ ಶರ್ಮಾ: ಏನಂದ್ರು ಗೊತ್ತೇ?
Rohit Sharma
TV9 Web
| Edited By: |

Updated on: Dec 08, 2022 | 8:17 AM

Share

ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ (India vs Bangladesh) ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಮೊದಲ ಏಕದಿನದಲ್ಲಿ ಭಾರತೀಯ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರೆ, ಢಾಕಾದ ಶೇರೆ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಬೌಲರ್​ಗಳು ಯಶಸ್ಸು ಸಾಧಿಸಲಿಲ್ಲ. 69 ರನ್​ಗೆ ಬಾಂಗ್ಲಾದ 6 ವಿಕೆಟ್ ಕಬಳಿಸಲು ಯಶಸ್ಸಿಯಾದ ಬೌಲರ್​ಗಳು ನಂತರದ ಒಂದು ವಿಕೆಟ್ ಕೀಳಲು ಪರದಾಡಿದರು. ಬ್ಯಾಟಿಂಗ್​ನಲ್ಲಿ ಶ್ರೇಯಸ್ ಅಯ್ಯರ್ (Shreyas Iyer), ಅಕ್ಷರ್ ಪಟೇಲ್ ಹಾಗೂ ನಾಯಕ ರೋಹಿತ್ ಶರ್ಮಾ (Rohit Sharma) ಹೋರಾಟಕ್ಕೆ ಫಲ ಸಿಗಲಿಲ್ಲ. 5 ರನ್​ಗಳ ರೋಚಕ ಜಯದೊಂದಿಗೆ ಬಾಂಗ್ಲಾ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಕೆಲ ಮಾಹಿತಿಗಳನ್ನು ಹಂಚಿಕೊಂಡರು.

ತಮ್ಮ ಇಂಜುರಿಗೆ ಬಗ್ಗೆ ಅಪ್ಡೇಟ್ ನೀಡಿದ ಹಿಟ್​ಮ್ಯಾನ್, ”ಎಡಗೈ ಹೆಬ್ಬೆರಳು ಗಾಯವಾಗಿದ್ದು ಒಳ್ಳೆಯ ಸುದ್ದಿಯಲ್ಲ. ಚಿಕಿತ್ಸೆ ನೀಡಲಾಗುತ್ತಿದೆ. ಮೂಳೆ ಮುರಿದಿಲ್ಲ. ಹೀಗಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು,” ಎಂದು ಹೇಳಿದ್ದಾರೆ. ಪಂದ್ಯದ ಬಗ್ಗೆ ಮಾತನಾಡಿದ ರೋಹಿತ್, ”ಒಂದು ಪಂದ್ಯವನ್ನು ಸೋತಾಗ ಅಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎಂಬ ಎರಡು ವಿಚಾರಗಳು ಹುಟ್ಟಿಗೊಳ್ಳುತ್ತದೆ. 69 ರನ್​ಗೆ 6 ವಿಕೆಟ್​ಗಳನ್ನು ನಾವು ಪಡೆದು ಎದುರಾಳಿಯ ಮೊತ್ತವನ್ನು 270 ಆಗುವಂತೆ ಮಾಡಿದೆವು. ನಮ್ಮ ಬೌಲರ್​ಗಳಿಂದ ನಂತರದಲ್ಲಿ ಉತ್ತಮ ಹೋರಾಟ ಕಂಡುಬರಲಿಲ್ಲ. ಅತ್ಯುತ್ತಮ ಆರಂಭ ಮಾಡಿದ್ದೆವು, ಮಧ್ಯಮ ಓವರ್ ಮತ್ತು ಅಂತ್ಯದಲ್ಲಿ ನಡೆದ ಘಟನೆ ನಮಗೆ ಬೇಸರ ತಂದಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
Shreyas Iyer: ಕೆಎಲ್ ರಾಹುಲ್ ದಾಖಲೆ ಉಡೀಸ್ ಮಾಡಿದ ಶ್ರೇಯಸ್ ಅಯ್ಯರ್
Image
IND vs BAN: 7 ವರ್ಷಗಳ ಬಳಿಕ ಹೀನಾಯ ಸೋಲು: 2ನೇ ಬಾರಿ ಬಾಂಗ್ಲಾ ವಿರುದ್ಧ ಸರಣಿ ಸೋತ ಭಾರತ..!
Image
KL Rahul: ಸೂಪರ್​ಮ್ಯಾನ್ ಕ್ಯಾಚ್ ಹಿಡಿದು ಎಲ್ಲರನ್ನು ದಂಗಾಗಿಸಿದ ಕೆಎಲ್ ರಾಹುಲ್
Image
IND vs BAN: ರೋಹಿತ್ ಶರ್ಮಾ ಹೋರಾಟ ವ್ಯರ್ಥ: ಟೀಮ್ ಇಂಡಿಯಾಗೆ ಸೋಲುಣಿಸಿ ಸರಣಿ ಗೆದ್ದ ಬಾಂಗ್ಲಾದೇಶ್

”ಇದೇರೀತಿ ಕಳೆದ ಪಂದ್ಯದಲ್ಲಿ ಕೂಡ ನಡೆಯಿತು. ನಾವು ಕಂಡಿತವಾಗಿಯು ಕೆಲವು ತಪ್ಪುಗಳ ಬಗ್ಗೆ ಕೆಲಸ ಮಾಡಬೇಕಿದೆ. ಮೆಹ್ದಿ ಮತ್ತು ಮೊಹಮ್ಮದುಲ್ಲ ಅವರಿಂದ ಅತ್ಯುತ್ತಮ ಜೊತೆಯಾಟ ಮೂಡಿಬಂತು. ನಾವು ಅವರ ಜೊತೆಯಾಟವನ್ನು ಮುರುಯಲು ಬೇರೆ ದಾರಿ ಹುಡುಕಬೇಕಿತ್ತು. ಏಕದಿನ ಪಂದ್ಯ ಅಂದ ಮೇಲೆ ಜೊತೆಯಾಟ ಮುಖ್ಯವಾಗುತ್ತದೆ. ಇವರದ್ದು ಮ್ಯಾಚ್ ವಿನ್ನಿಂಗ್ ಪ್ರದರ್ಶನವಾಯಿತು. ನೀವು 70 ರನ್​ಗಳ ಸ್ಟ್ಯಾಂಡ್ ಪಡೆದು ಹೊಸ ಬ್ಯಾಟರ್ ಬಂದು 110-120 ರನ್​ಗಳ ಜೊತೆಯಾಟ ಆಡಿದರೆ ಅದು ಪಂದ್ಯದ ಜಯಕ್ಕೆ ಕಾರಣವಾಗುತ್ತದೆ. ನಮ್ಮ ಮಧ್ಯಮ ಕ್ರಮಾಂಕ ಇನ್ನಷ್ಟು ಬಲಿಷ್ಠವಾಗಬೇಕು. ನಮ್ಮ ತಂಡದಲ್ಲಿ ಕೆಲವು ಇಂಜುರಿಗಳಾಗಿವೆ. ಇದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ,” ಎಂದು ಹೇಳಿದ್ದಾರೆ.

ಗೆದ್ದ ತಂಡದ ನಾಯಕ ಲಿಟನ್ ದಾಸ್ ಮಾತನಾಡಿ, ”ನಾಯಕನಾಗಿ ಮೊದಲ ಏಕದಿನ ಸರಣಿ ಗೆದ್ದುರುವುದಕ್ಕೆ ತುಂಬಾ ಸಂತವಾಗಿದೆ. 240-250 ರನ್ ಗಳಿಸಿದರೆ ಅದು ಉತ್ತಮ ಸ್ಕೋರ್ ಎಂದು ಅಂದುಕೊಂಡಿದ್ದೆವು. ನಾವು ಸಾಕಷ್ಟು ಒತ್ತಡದಲ್ಲಿದ್ದೆವು. ಆದರೆ, ಮೊಹಮ್ಮದುಲ್ಲ ಮತ್ತು ಮೆಹ್ದಿ ಅದ್ಭುತ ಆಟ ಆಡಿದರು. ಅವರ ನಡುವೆ ಏನು ಮಾತುಕತೆ ನಡೆಯಿತು ಎಂದು ತಿಳಿದಿಲ್ಲ. ಎರಡನೇ ಅವಧಿ ವೇಳೆ ಈ ಪಿಚ್ ಬೌಲರ್​ಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದಿತ್ತು. ಹೀಗಾಗಿ ನಮ್ಮ ಮುಖ್ಯ ಬೌಲರ್​ಗಳನ್ನು ರೊಟೇಟ್ ಮಾಡುತ್ತಿದ್ದೆ. ಅನುಭವಿ ಬೌಲರ್​ಗಳನ್ನು ಆರಂಭದಲ್ಲೇ ಕರೆತರಲಿಲ್ಲ. ಮುಂದಿನ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸವಿದೆ,” ಎಂದು ಹೇಳಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ