KL Rahul: ಸೂಪರ್ಮ್ಯಾನ್ ಕ್ಯಾಚ್ ಹಿಡಿದು ಎಲ್ಲರನ್ನು ದಂಗಾಗಿಸಿದ ಕೆಎಲ್ ರಾಹುಲ್
KL Rahul Catch Video: ಕೆಲ್ ರಾಹುಲ್ ಹಿಡಿದ ವಂಡರ್ಫುಲ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಕೆಎಲ್ಆರ್ ಅವರ ಸೂಪರ್ ಮ್ಯಾನ್ ಕ್ಯಾಚ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
India vs Bangladesh 2nd ODI: ಢಾಕಾದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ವಿಕೆಟ್ ಕೀಪರ್ ಕೆಎಲ್ ರಾಹುಲ್ (KL Rahul) ಅತ್ಯಾದ್ಭುತ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದರು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 71 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಮಹಮ್ಮದುಲ್ಲಾ ಹಾಗೂ ಮೆಹದಿ ಹಸನ್ ಮಿರಾಜ್ ಅತ್ಯುತ್ತಮ ಜೊತೆಯಾಟವಾಡಿದರು.
ಈ ಜೋಡಿಯನ್ನು ಬೇರ್ಪಡಿಸಲು ಟೀಮ್ ಇಂಡಿಯಾ ಬೌಲರ್ಗಳು ಹರಸಾಹಸಪಡಬೇಕಾಯಿತು. ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತು ಆಡಿದ ಈ ಜೋಡಿ ಬರೋಬ್ಬರಿ 146 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಅಲ್ಲದೆ ಅಂತಿಮ ಓವರ್ಗಳಲ್ಲಿ ಟೀಮ್ ಇಂಡಿಯಾಗೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.
ಈ ಹಂತದಲ್ಲಿ ಟೀಮ್ ಇಂಡಿಯಾದ ಹಂಗಾಮಿ ನಾಯಕ ಕೆಎಲ್ ರಾಹುಲ್ ಬೌಲಿಂಗ್ನಲ್ಲಿ ಬದಲಾವಣೆ ತಂದರು. ಅದರಂತೆ ಚೆಂಡನ್ನು ಉಮ್ರಾನ್ ಮಲಿಕ್ಗೆ ನೀಡಿದರು. 47ನೇ ಓವರ್ನ ಮೊದಲ ಎಸೆತವನ್ನು ಒಳ ನುಗ್ಗುವಂತೆ ಎಸೆದರು. ಅತ್ತ ಸ್ಟ್ರೈಕ್ನಲ್ಲಿದ್ದ ಮಹಮ್ಮದುಲ್ಲಾ ಅವರ ಬ್ಯಾಟ್ ಸವರಿ ಚೆಂಡು ಸ್ಲಿಪ್ನತ್ತ ಚಿಮ್ಮಿತ್ತು. ಈ ವೇಳೆ ಸರಿಯಾಗಿ ಚೆಂಡನ್ನು ಗುರುತಿಸಿದ ಕೆಎಲ್ ರಾಹುಲ್ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದರು.
Fabulous catch by KL Rahul – Umran Malik has another wicket.#KLRahul #UmranMalik #INDvsBAN pic.twitter.com/D8gCIsfwj8
— CRICKET KA YARAANA (@A__A__MALIK) December 7, 2022
ಇದೀಗ ಕೆಲ್ ರಾಹುಲ್ ಹಿಡಿದ ವಂಡರ್ಫುಲ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಕೆಎಲ್ಆರ್ ಅವರ ಸೂಪರ್ ಮ್ಯಾನ್ ಕ್ಯಾಚ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಕೆಟ್ ಕಳೆದುಕೊಂಡ ಹೊರತಾಗಿಯೂ ಅಂತಿಮವಾಗಿ ಬಾಂಗ್ಲಾದೇಶ್ ತಂಡವು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಕಲೆಹಾಕಿತು.
What a catch it was by KL Rahul. pic.twitter.com/0gcTgNZQxy
— Mufaddal Vohra (@mufaddal_vohra) December 7, 2022
ಕ್ಯಾಚ್ ಕೈಬಿಟ್ಟಿದ್ದ ಕೆಎಲ್ ರಾಹುಲ್:
ಬಾಂಗ್ಲಾದೇಶ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೆಹದಿ ಹಸನ್ ಮಿರಾಜ್ ಅವರು ನೀಡಿದ ಸುಲಭ ಕ್ಯಾಚ್ ಅನ್ನು ಕೆಎಲ್ ರಾಹುಲ್ ಕೈಚೆಲ್ಲಿದ್ದರು. ಹೀಗೆ ಸಿಕ್ಕ ಜೀವದಾನವನ್ನು ಬಳಸಿಕೊಂಡ ಮಿರಾಜ್ ಬಾಂಗ್ಲಾದೇಶ್ ತಂಡಕ್ಕೆ 1 ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿದ್ದರು.
Published On - 8:03 pm, Wed, 7 December 22