IND vs PAK: ರೋಹಿತ್ ಶರ್ಮಾ ಸುದ್ದಿಗೋಷ್ಠಿ: ಪಾಕ್ ವಿರುದ್ಧ ಗಿಲ್ ಆಡ್ತಾರಾ ಪ್ರಶ್ನೆಗೆ ಹಿಟ್ಮ್ಯಾನ್ ಏನಂದ್ರು ನೋಡಿ
Rohit Sharma Press Conference, IND vs PAK: ಅಹ್ಮದಾಬಾದ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, "ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಶುಭ್ಮನ್ ಗಿಲ್ 99% ಲಭ್ಯವಿದ್ದಾರೆ, ಆದರೆ ಪಂದ್ಯದ ದಿನದಂದು ಅವರ ಲಭ್ಯತೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾಳೆ ನೋಡೋಣ," ಎಂದು ಹೇಳಿದ್ದಾರೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಶನಿವಾರದ ಹೈ-ವೋಲ್ಟೇಜ್ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯಕ್ಕೆ ಸ್ಟಾರ್ ಓಪನರ್ ಶುಭ್ಮನ್ ಗಿಲ್ ಲಭ್ಯತೆ ಬಗ್ಗೆ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು, ಗಿಲ್ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಾಕಷ್ಟು ಫಿಟ್ ಆಗಿದ್ದಾರೆ. ಶೇ. 99 ರಷ್ಟು ಅವರು ಆಡುವ ಸಾಧ್ಯತೆ ಇದೆ ಎಂದು ಖಚಿತಪಡಿಸಿದರು.
“ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಶುಭ್ಮನ್ ಗಿಲ್ 99% ಲಭ್ಯವಿದ್ದಾರೆ, ಆದರೆ ಪಂದ್ಯದ ದಿನದಂದು ಅವರ ಲಭ್ಯತೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾಳೆ ನೋಡೋಣ,” ಎಂದು ರೋಹಿತ್ ಹೇಳಿದ್ದಾರೆ. ಡೆಂಗ್ಯೂ ಕಾರಣದಿಂದಾಗಿ ಗಿಲ್ ವಿಶ್ವಕಪ್ನ ಮೊದಲ ಎರಡೂ ಪಂದ್ಯಗಳನ್ನು ಕಳೆದುಕೊಂಡಿದ್ದರು. ಆದರೆ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೊದಲು ಶುಕ್ರವಾರ ಅಭ್ಯಾಸಕ್ಕೆ ಮರಳಿದ್ದಾರೆ.
India vs Pakistan: ನಾಳೆಯ ಪಂದ್ಯಕ್ಕೆ ಅಭಿಮಾನಿಗಳು ನಮಗೆ ಬೆಂಬಲ ನೀಡುತ್ತಾರೆ: ಬಾಬರ್ ಅಝಂ
ಗಿಲ್ ಸದ್ಯ ರೆಡ್-ಹಾಟ್ ಫಾರ್ಮ್‌ನಲ್ಲಿದ್ದಾರೆ. ಜೊತೆಗೆ ಇಂದು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಕೂಡ ಬಾಚಿಕೊಂಡಿದ್ದಾರೆ. ಗಿಲ್ ಪಾಕಿಸ್ತಾನದ ನಿರ್ಣಾಯಕ ಪಂದ್ಯವನ್ನು ಸಹ ಕಳೆದುಕೊಳ್ಳಬಹುದು ಎಂಬ ಊಹಾಪೋಹಗಳು ಇದ್ದವು. ಆದರೆ, ಇದೀಗ ರೋಹಿತ್ ಅವರು ಗಿಲ್ 99 ಪ್ರತಿಶತ ಲಭ್ಯವಿರುವುದನ್ನು ಖಚಿತಪಡಿಸಿದ್ದಾರೆ. ಗಿಲ್ ಪ್ಲೇಯಿಂಗ್ ಇಲೆವೆನ್ಗೆ ಬಂದರೆ ಇಶಾನ್ ಕಿಶನ್ ಬೆಂಚ್ ಕಾಯಬೇಕಿದೆ.
ಇದೇವೇಳೆ ಮಾತನಾಡಿದ ರೋಹಿತ್ ಶರ್ಮಾ, ”ದೊಡ್ಡ ಕ್ರೀಡಾಂಗಣದ ಜನಸಮೂಹದ ಮುಂದೆ ಆಡುವುದು ಹೇಗೆ ಎಂದು ತಮ್ಮ ಆಟಗಾರರಿಗೆ ತಿಳಿದಿದೆ. ಜೊತೆಗೆ ತವರಿನ ಬೆಂಬಲವು ನಮಗೆ ಹೆಚ್ಚು ಪ್ರಯೋಜನವಾಗುತ್ತದೆ. ಸ್ಟೇಡಿಯಂ ಫುಲ್ ಇದ್ದರೆ ನಮ್ಮ ಆಟಗಾರರು ಆನಂದಿಸುತ್ತಾರೆ. ನಾವು ಎಲ್ಲಿಗೆ ಹೋದರೂ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ, ಖುಷಿ ಆಗುತ್ತದೆ,” ಎಂದು ರೋಹಿತ್ ಹೇಳಿದ್ದಾರೆ.
ಇನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಹಿಂದೆ ಏನಾಯಿತು ಎಂಬುದು ಮುಖ್ಯವಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಈಗ ಏನಿದೆ ಅದರ ಕಡೆಗೆ ಮಾತ್ರ ಗಮನ ಹರಿಸುತ್ತೇವೆ. ನಾವು ಈ ಬಾರಿ ಚೆನ್ನಾಗಿ ಆಡುತ್ತೇವೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮವಾಗಿ ಆಡುವ ಭರವಸೆ ಇದೆ. 2021 ರಲ್ಲಿ ನಾವು T20 ವಿಶ್ವಕಪ್ನಲ್ಲಿ ಭಾರತವನ್ನು ಸೋಲಿಸಿದ್ದೇವೆ. ನಾವು ಅದನ್ನು ಇಲ್ಲಿಯೂ ಮಾಡಬಹುದು ಎಂಬ ನಂಬಿಕೆಯಿದೆ ಎಂದು ಬಾಬರ್ ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ