ನನ್ನನ್ನು ಭಾರತ ಗಡಿಪಾರು ಮಾಡಿಲ್ಲ: ಸ್ಪಷ್ಟನೆ ನೀಡಿದ ಪಾಕಿಸ್ತಾನ ನಿರೂಪಕಿ ಝೈನಾಬ್ ಅಬ್ಬಾಸ್

"ನಾನು ಕ್ರಿಕೆಟ್​​ ಲೋಕವನ್ನು ತುಂಬಾ ಇಷ್ಟಪಡುತ್ತೇನೆ, ಕ್ರಿಕೆಟ್​​ ಕ್ಷೇತ್ರ ನನಗೆ ತುಂಬಾ ಅವಕಾಶವನ್ನು ನೀಡಿದೆ. ಇನ್ನು ಮುಂದಕ್ಕೂ ನಾನು ಇದರಲ್ಲಿಯೇ ಮುಂದುವರಿಯುವೆ. ಅದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿ ಮತ್ತು ಈ ಕಾರಣಕ್ಕೆ ಕೃತಜ್ಞತೆಯನ್ನು ಹೊಂದಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಇನ್ನು ನನ್ನನ್ನು ಭಾರತ ಗಡಿಪಾರು ಮಾಡಿಲ್ಲ ಅಥವಾ ಭಾರತದಿಂದ ಹೊರಹೋಗುವಂತೆ ಹೇಳಿಲ್ಲ ಎಂದು ಜೈನಾಬ್ ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ.

ನನ್ನನ್ನು ಭಾರತ ಗಡಿಪಾರು ಮಾಡಿಲ್ಲ: ಸ್ಪಷ್ಟನೆ ನೀಡಿದ ಪಾಕಿಸ್ತಾನ ನಿರೂಪಕಿ ಝೈನಾಬ್ ಅಬ್ಬಾಸ್
ಝೈನಾಬ್ ಅಬ್ಬಾಸ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 13, 2023 | 12:49 PM

2023ರ ವಿಶ್ವಕಪ್​​ನ ಐಸಿಸಿ ಡಿಜಿಟಲ್ ತಂಡದ ಭಾಗವಾಗಿದ್ದ ಪಾಕಿಸ್ತಾನ ನಿರೂಪಕಿ ಝೈನಾಬ್ ಅಬ್ಬಾಸ್ (Zainab Abbas) ಅವರನ್ನು ಇದರಿಂದ ಹೊರ ಹಾಕಲಾಗಿದೆ ಎಂದು ಹೇಳಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರತ ವಿರೋಧಿ ಪೋಸ್ಟ್​ಗಳನ್ನು ಹಾಕಿದಕ್ಕಾಗಿ ಅವರನ್ನು ವಿಶ್ವಕಪ್​​ನ ಐಸಿಸಿ ಡಿಜಿಟಲ್ ತಂಡದಿಂದ ಹೊರಹಾಕಲಾಗಿದೆ. ಇದೀಗ ಝೈನಾಬ್ ಅಬ್ಬಾಸ್ ಈ ಬಗ್ಗೆ Xನಲ್ಲಿ (ಹಿಂದಿನ ಟ್ವಿಟರ್​​) ಮೊದಲು ಬಾರಿ ಹೇಳಿಕೆ ನೀಡಿದ್ದಾರೆ. “ನಾನು ಕ್ರಿಕೆಟ್​​ ಲೋಕವನ್ನು ತುಂಬಾ ಇಷ್ಟಪಡುತ್ತೇನೆ, ಕ್ರಿಕೆಟ್​​ ಕ್ಷೇತ್ರ ನನಗೆ ತುಂಬಾ ಅವಕಾಶವನ್ನು ನೀಡಿದೆ. ಇನ್ನು ಮುಂದಕ್ಕೂ ನಾನು ಇದರಲ್ಲಿಯೇ ಮುಂದುವರಿಯುವೆ. ಅದಕ್ಕಾಗಿ ನಾನು ತುಂಬಾ ಅದೃಷ್ಟಶಾಲಿ ಮತ್ತು ಈ ಕಾರಣಕ್ಕೆ ಕೃತಜ್ಞತೆಯನ್ನು ಹೊಂದಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಇನ್ನು ನನ್ನನ್ನು ಭಾರತ ಗಡಿಪಾರು ಮಾಡಿಲ್ಲ ಅಥವಾ ಭಾರತದಿಂದ ಹೊರಹೋಗುವಂತೆ ಹೇಳಿಲ್ಲ ಎಂದು ಝೈನಾಬ್ ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ.

ಝೈನಾಬ್ ಅಬ್ಬಾಸ್ ಅವರು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನದ ಮೂರು ವಿಶ್ವಕಪ್ ಪಂದ್ಯದಲ್ಲಿ ಭಾಗವಹಿಸಿದರು. ಆದರೆ ಭಾರತದ ವಿರೋಧ ಪೋಸ್ಟ್​ಗಳನ್ನು ಹಾಕಿದ್ದರು ಎಂದು ಅವರನ್ನು ಭಾರತದಿಂದ ಹೊರಹಾಕಲಾಗಿದೆ ಎಂಬ ಸುದ್ದಿ ಹರಡಿತ್ತು. ಇನ್ನು ಈ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಝೈನಾಬ್ ಅಬ್ಬಾಸ್ ಅವರನ್ನು ಭಾರತದಿಂದ ಗಡಿಪಾರು ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅವರನ್ನು ಭಾರತದಿಂದ ಕಳುಹಿಸಲಾಗಿಲ್ಲ, ಅವರೇ ವೈಯಕ್ತಿಕ ಕಾರಣದಿಂದ ಹೊರಗೆ ಹೋಗಿದ್ದಾರೆ ಎಂದು ಐಸಿಸಿ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಲಕ್ಷ ರೂ. ಜೇಬಿನಲ್ಲಿರಲಿ; ಭಾರತ- ಪಾಕ್ ಪಂದ್ಯ ನೋಡಲು ಅಹಮದಾಬಾದ್​ಗೆ ಪ್ರಯಾಣಿಸುವವರ ಗಮನಕ್ಕೆ

ಜೈನಾಬ್ ಅಬ್ಬಾಸ್ ಅವರು ಮಾಡಿ ಪೋಸ್ಟ್​ ಏನು?

ಭಾರತದಲ್ಲಿ ಹಿಂದೂಗಳು ಪೂಜೆ ಮಾಡುವ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ 2014ರಲ್ಲಿ ಪೋಸ್ಟ್​​ ಮಾಡಿದರು. ಈ ವಿಚಾರವಾಗಿ ವಕೀಲ ವಿನೀತ್​​ ಜಿಂದಾಲ್​​, ಝೈನಾಬ್ ಅಬ್ಬಾಸ್ ಅವರ ವಿರುದ್ಧ ದೂರ ದಾಖಲಿಸಿದ್ದರು. ಸೈಬರ್​ ಕ್ರೈಂನಲ್ಲಿ ದೂರು ದಾಖಲಾದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಇದೀಗ ಜೈನಾಬ್ ಅಬ್ಬಾಸ್ ಮಾಡಿದ ಈ ಪೋಸ್ಟ್​​​ನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್​​ ಮಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Fri, 13 October 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್