Rohit sharma: ಐಪಿಎಲ್​ಗಾಗಿ ಅಲ್ಲ, ದೇಶಕ್ಕಾಗಿ ಆಡಿ: ಆಟಗಾರರಿಗೆ ರೋಹಿತ್ ಶರ್ಮಾ ಖಡಕ್ ಸೂಚನೆ

| Updated By: ಝಾಹಿರ್ ಯೂಸುಫ್

Updated on: Feb 15, 2022 | 3:20 PM

India vs West Indies: ಫೆಬ್ರವರಿ 16 ರಿಂದ ಕೋಲ್ಕತ್ತಾದಲ್ಲಿ ಭಾರತ-ವೆಸ್ಟ್ ಇಂಡೀಸ್ ಟಿ 20 ಸರಣಿ ಪ್ರಾರಂಭವಾಗಲಿದೆ. ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳು ಫೆಬ್ರವರಿ 18 ಮತ್ತು 20 ರಂದು ನಡೆಯಲಿದ್ದು, ಮೂರೂ ಪಂದ್ಯಗಳು ಕೋಲ್ಕತ್ತಾದಲ್ಲಿಯೇ ಜರುಗಲಿದೆ.

Rohit sharma: ಐಪಿಎಲ್​ಗಾಗಿ ಅಲ್ಲ, ದೇಶಕ್ಕಾಗಿ ಆಡಿ: ಆಟಗಾರರಿಗೆ ರೋಹಿತ್ ಶರ್ಮಾ ಖಡಕ್ ಸೂಚನೆ
Rohit sharma
Follow us on

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಮುನ್ನ (India vs West Indies T20I Series) ನಾಯಕ ರೋಹಿತ್ ಶರ್ಮಾ ಟೀಮ್ ಇಂಡಿಯಾ ಆಟಗಾರರಿಗೆ ಖಡಕ್ ಸೂಚನೆ ನೀಡಿದ್ದಾರೆ. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಶರ್ಮಾ ಅವರಿಗೆ ಐಪಿಎಲ್ ಹರಾಜಿನ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ ಟೀಮ್ ಇಂಡಿಯಾದ ಗಮನವು ಕೇವಲ ಟಿ 20 ಸರಣಿಯ ಮೇಲೆ ಮಾತ್ರ ಎಂದು ರೋಹಿತ್ ಶರ್ಮಾ ಹೇಳಿದರು. ಐಪಿಎಲ್ 2022 ರ ಹರಾಜಿನ ನಂತರ, ಟೀಮ್ ಇಂಡಿಯಾ ಸಭೆಯನ್ನು ನಡೆಸಿದೆ. ಈ ವೇಳೆ ಎಲ್ಲಾ ಆಟಗಾರರಿಗೂ ಮುಂದಿನ ಎರಡು ವಾರಗಳ ಕಾಲ ದೇಶಕ್ಕಾಗಿ ಆಡುವತ್ತ ಗಮನ ಹರಿಸುವಂತೆ ತಿಳಿಸಲಾಗಿದೆ ಎಂದು ಇದೇ ವೇಳೆ ಹಿಟ್​ಮ್ಯಾನ್ ಹೇಳಿದರು.

ಪ್ರತಿಯೊಬ್ಬ ಆಟಗಾರನು ವೃತ್ತಿಪರ ಮತ್ತು ತನ್ನ ಕರ್ತವ್ಯವನ್ನು ತಿಳಿದಿದ್ದಾನೆ. ಟೀಮ್ ಇಂಡಿಯಾದಲ್ಲಿರುವ ಆಟಗಾರರಿಗೆ ಐಪಿಎಲ್ ಪಾತ್ರದ ಪ್ರಕಾರ ವೇತನ ನೀಡಲಾಗುತ್ತಿಲ್ಲ. ಹೀಗಾಗಿ ಐಪಿಎಲ್​ಗಾಗಿ ಅಲ್ಲ, ದೇಶಕ್ಕಾಗಿ ಆಡುವುದರತ್ತ ಗಮನ ಹರಿಸುವಂತೆ ಸಲಹೆ ನೀಡಿರುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ.

ತಂಡದ ಪ್ರತಿಯೊಬ್ಬ ಆಟಗಾರರಿಗೆ ಅವರ ಪಾತ್ರದ ಬಗ್ಗೆ ತಿಳಿಸಲಾಗಿದೆ. ಈಗ ಮೈದಾನದಲ್ಲಿ ತನ್ನ ಪ್ರತಿಭೆ ತೋರಬೇಕಿದೆ ಎಂದು ರೋಹಿತ್ ಶರ್ಮಾ ತಿಳಿಸಿದರು. ಐಪಿಎಲ್ ಹರಾಜಿನಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರ ಮೇಲೆ ಭಾರೀ ಹಣದ ಸುರಿಮಳೆಯಾಗಿದೆ. ವಿಕೆಟ್ ಕೀಪರ್ ಇಶಾನ್ ಕಿಶನ್ ಈ ಸೀಸನ್​ನ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.50 ಕೋಟಿಗೆ ಖರೀದಿಸಿದೆ. ದೀಪಕ್ ಚಹಾರ್ ಸಿಎಸ್​ಕೆಗೆ ಕೂಡ 14 ಕೋಟಿಗೆ ಮಾರಾಟವಾಗಿದ್ದಾರೆ. ಹರ್ಷಲ್ ಪಟೇಲ್, ಅವೇಶ್ ಖಾನ್ ಮತ್ತು ಪ್ರಸಿದ್ಧ ಕೃಷ್ಣ ಕೂಡ 10 ಕೋಟಿಗೂ ಹೆಚ್ಚು ಮೊತ್ತ ಪಡೆದಿದ್ದಾರೆ. ಈ ಆಟಗಾರರು ಈಗ ಟೀಮ್ ಇಂಡಿಯಾದಲ್ಲಿರುವ ಕಾರಣ ವೆಸ್ಟ್ ಇಂಡೀಸ್ ವಿರುದ್ದ ಸರಣಿಯಲ್ಲಿ ಹೇಗೆ ಆಡಲಿದ್ದಾರೆ ಕಾದು ನೋಡಬೇಕಿದೆ.

ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿ:
ಫೆಬ್ರವರಿ 16 ರಿಂದ ಕೋಲ್ಕತ್ತಾದಲ್ಲಿ ಭಾರತ-ವೆಸ್ಟ್ ಇಂಡೀಸ್ ಟಿ 20 ಸರಣಿ ಪ್ರಾರಂಭವಾಗಲಿದೆ. ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳು ಫೆಬ್ರವರಿ 18 ಮತ್ತು 20 ರಂದು ನಡೆಯಲಿದ್ದು, ಮೂರೂ ಪಂದ್ಯಗಳು ಕೋಲ್ಕತ್ತಾದಲ್ಲಿಯೇ ಜರುಗಲಿದೆ.

T20 ಸರಣಿಗೆ ಭಾರತ ತಂಡ – ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್, ಹರ್ಷಲ್. , ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ ಮತ್ತು ಕುಲದೀಪ್ ಯಾದವ್.

T20I ಸರಣಿಗಾಗಿ ವೆಸ್ಟ್ ಇಂಡೀಸ್ ತಂಡ – ಕೀರಾನ್ ಪೊಲಾರ್ಡ್, ನಿಕೋಲಸ್ ಪೂರನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡರ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶೇ ಹೋಪ್, ಅಕೀಲ್ ಹೊಸೈನ್, ಬ್ರಾಂಡನ್ ಕಿಂಗ್, ರೋವ್‌ಮನ್ ಪೊವೆಲ್, ರೊಮಾರಿಯೋ ಮೈಥ್, ಓಡಿನ್ ಸ್ಮಿತ್, ಓಡಿನ್ ಸ್ಮಿತ್ ವಾಲ್ಷ್ ಜೂ.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(Rohit sharma ipl 2022 auction india vs west indies t20i series)