AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್ ಗೆಲ್ಲೋಕೆ ಇದೊಂದೇ ದಾರಿ? ಗಿಲ್‌ಗೆ ಮದುವೆ ಮಾಡಿಸಲು ರೋಹಿತ್ ರೆಡಿ!

ಭಾರತಕ್ಕೆ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದುಕೊಡಲು ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧರಿದ್ದಾರೆ! ಮೈದಾನದಲ್ಲಿ ತಮ್ಮ ಸಿಕ್ಸರ್‌ಗಳ ಮೂಲಕ ಎದುರಾಳಿಗಳನ್ನು ನಡುಗಿಸುವ 'ಹಿಟ್‌ಮ್ಯಾನ್', ಇದೀಗ 2027ರ ವಿಶ್ವಕಪ್ ಗೆಲ್ಲಲು ಒಂದು ವಿಚಿತ್ರ ಹಾಗೂ ತಮಾಷೆಯ ಪ್ಲ್ಯಾನ್ ಮಾಡಿದ್ದಾರೆ. ಅದೇನೆಂದರೆ, ಯುವ ನಾಯಕ ಶುಭಮನ್ ಗಿಲ್‌ಗೆ ಮದುವೆ ಮಾಡಿಸುವುದು!

ವಿಶ್ವಕಪ್ ಗೆಲ್ಲೋಕೆ ಇದೊಂದೇ ದಾರಿ? ಗಿಲ್‌ಗೆ ಮದುವೆ ಮಾಡಿಸಲು ರೋಹಿತ್ ರೆಡಿ!
Rohit Sharma - Shubhman GillImage Credit source: BCCI
ಝಾಹಿರ್ ಯೂಸುಫ್
|

Updated on: Nov 11, 2026 | 12:40 PM

Share

ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್‌ನಂತೆಯೇ, ಹಾಸ್ಯಪ್ರಜ್ಞೆ ಮತ್ತು ನೇರನುಡಿಗೂ ಹೆಸರುವಾಸಿ. ಇದೀಗ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ತಮ್ಮ ಹೊಸ ಶೋ ‘ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ’ ಕಾರ್ಯಕ್ರಮದಲ್ಲಿ ಯುವ ನಾಯಕ ಶುಭಮನ್ ಗಿಲ್ ಅವರ ಮದುವೆಯ ಕುರಿತು ಹಿಟ್​ಮ್ಯಾನ್ ಆಡಿರುವ ತಮಾಷೆಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

2027ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಭಾರತಕ್ಕೆ ತರಲು ಬೇಕಿದ್ದರೆ ತಾನೇ ಮುಂದೆ ನಿಂತು ಶುಭಮನ್ ಗಿಲ್‌ಗೆ ಮದುವೆ ಮಾಡಿಸಲು ಸಿದ್ಧ ಎಂದು ರೋಹಿತ್ ಶರ್ಮಾ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಅಷ್ಟಕ್ಕೂ ಈ ತಮಾಷೆಯ ಸಂಭಾಷಣೆ ಶುರುವಾಗಿದ್ದು ಹೇಗೆ?

ಈ ವಿಶೇಷ ಸಂಚಿಕೆಯಲ್ಲಿ ಖ್ಯಾತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಕಾಶ್ ಗುಪ್ತಾ ಮತ್ತು ಶಾದಿ.ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಡುವೆ ಆಕಾಶ್ ಗುಪ್ತಾ ಅವರು ಅನುಪಮ್ ಮಿತ್ತಲ್ ಮುಂದೆ ಒಂದು ವಿಚಿತ್ರ ಹಾಗೂ ತಮಾಷೆಯ ಸಿದ್ಧಾಂತವನ್ನು  ಮುಂದಿಟ್ಟರು.

“ಕ್ರಿಕೆಟ್ ಇತಿಹಾಸವನ್ನು ಗಮನಿಸಿದರೆ, ಯಾವ ತಂಡದ ನಾಯಕ ಮದುವೆಯಾಗುತ್ತಾರೋ, ಮರುವರ್ಷ ಆ ತಂಡ ವಿಶ್ವಕಪ್ ಗೆಲ್ಲುತ್ತದೆ” ಎಂದು ಆಕಾಶ್ ವಾದಿಸಿದರು. ಇದಕ್ಕೆ ಉದಾಹರಣೆಯಾಗಿ, ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮದುವೆಯಾದ ನಂತರ 2023ರ ವಿಶ್ವಕಪ್ ಗೆದ್ದಿದ್ದನ್ನು ಅವರು ನೆನಪಿಸಿದರು.

ಆಕಾಶ್ ಅವರ ಈ ಮಾತಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಅನುಪಮ್ ಮಿತ್ತಲ್, “ನಮ್ಮ ಶಾದಿ.ಕಾಮ್ ತಂಡ ಈಗಾಗಲೇ ಭಾರತದ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರ ಪ್ರೊಫೈಲ್ ಸಿದ್ಧಪಡಿಸಿ ಅವರಿಗೆ ಪ್ರಪೋಸಲ್ ಕಳುಹಿಸಿದೆ. ಅವರು ಕೇವಲ ‘ರೈಟ್ ಸ್ವೈಪ್’ ಮಾಡಬೇಕಷ್ಟೇ, ಆದರೆ ಗಿಲ್ ಸದ್ಯಕ್ಕೆ ಮದುವೆಯಾಗಲು ನಿರಾಕರಿಸಿದ್ದಾರೆ” ಎಂದು ನಗೆಚಟಾಕಿ ಹಾರಿಸಿದರು.

ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದ ನಿರೂಪಕ ರೋಹಿತ್ ಶರ್ಮಾ, ತಮ್ಮದೇ ಶೈಲಿಯಲ್ಲಿ ಮಧ್ಯಪ್ರವೇಶಿಸಿ, “ಇಲ್ಲಾ, ವಿಶ್ವಕಪ್ ಗೆಲ್ಲಲು ನಾನು ಏನು ಬೇಕಾದರೂ ಮಾಡಲು ಸಿದ್ಧ. ನಾನೇ ಮುಂದೆ ನಿಂತು ಶುಭ್​ಮನ್ ಗಿಲ್ ಮಾಡಿಸುತ್ತೇನೆ” ಎಂದು ಹೇಳುವ ಮೂಲಕ ಇಡೀ ವೇದಿಕೆಯನ್ನು ನಗೆಗಡಲಲ್ಲಿ ತೇಲಿಸಿದರು.

2 ಬಾರಿ ಟಿ20 ವಿಶ್ವಕಪ್ ಗೆದ್ದಿರುವ ರೋಹಿತ್ ಶರ್ಮಾಗೆ ಏಕದಿನ ವಿಶ್ವಕಪ್ ಎಂಬುದು ಬಹುದೊಡ್ಡ ಕನಸು. 2023ರ ಫೈನಲ್‌ನಲ್ಲಿ ಸ್ವಲ್ಪದರಲ್ಲೇ ಕೈತಪ್ಪಿದ್ದ ಆ ಟ್ರೋಫಿಯನ್ನು ಈ ಬಾರಿಯಾದರೂ ಎತ್ತ ಹಿಡಿಯಬೇಕೆಂಬ ಹಂಬಲ ಅವರಲ್ಲಿದೆ. ಇದೇ ಕಾರಣಕ್ಕೆ, 2027ರ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲಿರುವ ಯುವ ನಾಯಕ ಶುಭ್​ಮನ್ ಗಿಲ್‌ಗೆ ಸಂಪೂರ್ಣ ಬೆಂಬಲ ನೀಡುವುದರ ಜೊತೆಗೆ, ಕಪ್ ಗೆಲ್ಲಲು ಬೇಕಿದ್ದರೆ ತಾನೇ ಮುಂದೆ ನಿಂತು ಗಿಲ್‌ಗೆ ಮದುವೆ ಮಾಡಿಸಲೂ ಸಿದ್ಧ ಎಂದು ರೋಹಿತ್ ತಮಾಷೆಯಾಗಿ ತಮ್ಮ ಮನದಾಸೆಯನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: ICCಗೆ ಸೆಡ್ಡು ಹೊಡೆಯುತ್ತಾ IPL? 

2027ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಶುಭ್​ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಉತ್ತರಾಧಿಕಾರಿ ಗಿಲ್ ಮತ್ತು ವಿಶ್ವಕಪ್ ಕುರಿತು ರೋಹಿತ್ ತೋರಿದ ಈ ಪ್ರೀತಿ ಹಾಗೂ ಹಾಸ್ಯಪ್ರಜ್ಞೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಈ ವಿಡಿಯೋ ತುಣುಕು ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಗಿಲ್ ಕಾಲೆಳೆಯುತ್ತಾ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
‘ಒಂದು ತಿಂಗಳು ಹೊರಗಿದ್ದ ಬಚ್ಚಾ ನೀನು’; ಮಂಜುಗೆ ಪ್ರಶಾಂತ್ ಅವಾಜ್
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಹುಟ್ಟುಹಬ್ಬಕ್ಕೆ ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ ದರ್ಶನ್: ವಿಡಿಯೋ
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಇಲ್ಲಿ ಪರಸ್ಪರ ಸಗಣಿ ಗಟ್ಟಿ ಎಸೆದುಕೊಳ್ಳೋದೇ ಹಬ್ಬದ ಮಜಾ!
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ಹೇಳಿದ್ದೇನು?
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಪಟಾಕಿ ಶಬ್ದದಿಂದ ಹೃದಯಾಘಾತವಾಗಿ 6 ವರ್ಷದ ಡಾಬರ್​ಮನ್​​​​ ನಾಯಿ ಸಾವು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ; ಯುವಕನನ್ನು ಹಿಡಿದು ಥಳಿಸಿದ ಸಾರ್ವಜನಿಕರು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಹಾಸನಾಂಬೆ ದರ್ಶನಕ್ಕೆ ಇಂದು ತೆರೆ: ಕೊನೆಯ ದಿನದ ದರ್ಶನಕ್ಕೆ ಭಕ್ತರ ಸಾಲು
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮಂಜು-ಯಶಸ್ ಕಿರಿಕ್; ಮರುಕಳಿಸುತ್ತಾ ಇತಿಹಾಸ?
ಪಟಾಕಿ ಹಚ್ಚಿ ಯುವತಿಯರ ಮೇಲೆ ಎಸೆದ ಪುಡಿರೌಡಿ
ಪಟಾಕಿ ಹಚ್ಚಿ ಯುವತಿಯರ ಮೇಲೆ ಎಸೆದ ಪುಡಿರೌಡಿ
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ
ಇಂದು ಈ ರಾಶಿಯವರು ಇತರರಿಂದ ಸಾಲ ಪಡೆಯದಿರಿ