ಬುಧವಾರ ಜೈಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ಆರಂಭವಾದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ (India vs New Zealand) ತಂಡ ರೋಚಕ ಗೆಲುವು ಸಾಧಿಸಿತು. ಕಿವೀಸ್ ಪಡೆ ನೀಡಿದ್ದ 164 ರನ್ ಮೊತ್ತಕ್ಕೆ ಪ್ರತಿಯಾಗಿ ಭಾರತ 19.4 ಓವರ್ನಲ್ಲಿ 2 ಎಸೆತ ಇರುವಂತೆ ಚೇಸ್ ಮಾಡಿ ಗೆದ್ದಿತು. ಈ ಪಂದ್ಯದಲ್ಲಿ ಭಾರತ 5 ವಿಕೆಟ್ಗಳಿಂದ ಗೆಲುವು ಸಾಧಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ (T20I Series) 1-0 ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ರೋಹಿತ್-ದ್ರಾವಿಡ್ (Rohit Sharma-Rahul Dravid) ಜೋಡಿ ಪರಿಪೂರ್ಣ ಹುದ್ದೆ ಪಡೆದು ಚೊಚ್ಚಲ ಪಂದ್ಯದಲ್ಲೇ ಗೆಲುವಿನ ಸಿಹಿ ಕಂಡಿದ್ದಾರೆ. ಇದರ ನಡುವೆ ಪಂದ್ಯ ನಡೆಯುತ್ತಿರುವಾಗ ಭಾರತ ಬ್ಯಾಟಿಂಗ್ ನಡೆಸುವ ವೇಳೆ ಡಗೌಟ್ನಲ್ಲಿ ರೋಹಿತ್ ಶರ್ಮಾ (Rohit Sharma) ಅವರು ಮೊಹಮ್ಮದ್ ಸಿರಾಜ್ಗೆ (Mohammed Siraj) ಹೊಡೆದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ (Viral Video) ಕೂಡ ಆಗುತ್ತಿದೆ.
ಹೌದು, ನ್ಯೂಜಿಲೆಂಡ್ ನೀಡಿದ್ದ ಟಾರ್ಗೆಟ್ ಅನ್ನು ಬೆನ್ನಟ್ಟಲು ಕಣಕ್ಕಿಳಿದ ಭಾರತ ಸ್ಫೋಟಕ ಆರಂಭ ಪಡೆದುಕೊಂಡಿತು. 4.5 ಓವರ್‌ಗಳಲ್ಲಿ 50 ರನ್‌ಗಳ ಗಡಿ ಮುಟ್ಟಿತು. ನಾಯಕನ ಆಟವಾಡಿದ ರೋಹಿತ್ ಶರ್ಮಾ 36 ಎಸೆತಗಳಲ್ಲಿ 2 ಸಿಕ್ಸರ್, 5 ಫೋರ್ ಬಾರಿಸಿ 48 ರನ್ ಚಚ್ಚಿ ಔಟ್ ಆದರು. ಬಳಿಕ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಅತ್ತ ಗೆಲುವಿನ ದಡ ಸೇರಿಸುವತ್ತ ಹೋರಾಟ ನಡೆಸುತ್ತಿದ್ದರೆ, ಇತ್ತ ರೋಹಿತ್ ಶರ್ಮಾ ಡಗೌಟ್ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು.
ಈ ಸಂದರ್ಭ ಕ್ಯಾಮೆರಾ ಒಮ್ಮೆ ಡಗೌಟ್ ಕಡೆ ಕಣ್ಣು ಹಾಯಿಸಿದೆ. ಆಗ ರೋಹಿತ್ ಶರ್ಮಾ ಅವರು ಮೊಹಮ್ಮದ್ ಸಿರಾಜ್ ಅವರ ತಲೆಗೆ ಹೊಡೆಯುತ್ತಿರುವುದು ಸೆರೆಯಾಗಿದೆ. ಇದು ಗಂಭೀರವಾದ ಘಟನೆಯಂತೆ ಕಾಣಲಿಲ್ಲ. ತಮಾಷೆಗಾಗಿ ಈರೀತಿ ಮಾಡಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ರೋಹಿತ್ ಅವರು ಸಿರಾಜ್ ತಲೆಗೆ ಏತಕ್ಕಾಗಿ ಹೊಡೆದರು ಎಂದು ತಲೆಕೆಡೆಸಿಕೊಳ್ಳುತ್ತಿದ್ದಾರೆ. ಸದ್ಯ ಈ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ.
Why did Rohit hit Siraj???#INDvNZ #RohitSharma pic.twitter.com/EjqnUXts3v
— Bhanu? (@its_mebhanu) November 17, 2021
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಎರಡನೇ ವಿಕೆಟ್ಗೆ ಮಾರ್ಟಿನ್ ಗಪ್ಟಿಲ್ ಮತ್ತು ಮಾರ್ಕ್ ಚಾಪ್ಮನ್ ಅವರ 109 ರನ್ ಜೊತೆಯಾಟ ನೆರವಿನಿಂದ 164 ರನ್ ಕಲೆಹಾಕಿತು. ಈ ಪಿಚ್ನಲ್ಲಿ ಗೆಲ್ಲಲು 165 ರನ್ ಗುರಿ ಟೀಮ್ ಇಂಡಿಯಾಗೆ ಕಠಿಣ ಸವಾಲಾಗುವ ನಿರೀಕ್ಷೆ ಇರಲಿಲ್ಲ. ರಾಹುಲ್ ಮತ್ತು ರೋಹಿತ್ ಮೊದಲ ವಿಕೆಟ್ಗೆ 50 ರನ್ ಸೇರಿಸಿ ಬುನಾದಿ ಹಾಕಿದರು.
ಕೆಎಲ್ ರಾಹುಲ್ ನಿರ್ಗಮನದ ಬಳಿಕ ರೋಹಿತ್ ಮತ್ತು ಸೂರ್ಯಕುಮಾರ್ ಯಾದವ್ 2ನೇ ವಿಕೆಟ್ಗೆ 59 ರನ್ ಸೇರಿಸಿದರು. ಸೂರ್ಯಕುಮಾರ್ 40 ಬಾಲ್ನಲ್ಲಿ 62 ರನ್ ಗಳಿಸಿದರು. ಪರಿಣಾಮ ಕೊನೆಯ ಓವರ್ನಲ್ಲಿ 10 ರನ್ ಗಳಿಸುವ ಸ್ಥಿತಿಗೆ ಬಂತು. ಕೊನೆಯಲ್ಲಿ ರಿಷಭ್ ಪಂತ್ ಬೌಂಡರಿ ಭಾರಿಸಿ ಗೆಲುವಿನ ರನ್ ಹರಿಸಿದರು. ನ. 19ರಂದು ರಾಂಚಿಯಲ್ಲಿ ಎರಡನೇ ಪಂದ್ಯ ಇದೆ. ಅದಾದ ಬಳಿಕ ನ. 21ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ.
Rohit Sharma: ಪರಿಪೂರ್ಣ ನಾಯಕನಾಗಿ ಚೊಚ್ಚಲ ಗೆಲುವಿನ ಬಳಿಕ ರೋಹಿತ್ ಶರ್ಮಾ ಏನು ಹೇಳಿದ್ರು ಕೇಳಿ
India vs New Zealand: ಜೈಪುರದಲ್ಲಿ ಬೆಳಗಿದ ಸೂರ್ಯ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಗೆದ್ದು ಬೀಗಿದ ಭಾರತ
(Rohit sharma slap Mohammed Siraj during india vs New Zealand First T20 match video goes viral)