IND vs AUS 2nd Test: ಇಂದಿನಿಂದ ಭಾರತ- ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್: ರೋಹಿತ್ ಪಡೆಯಲ್ಲಿ ಬದಲಾವಣೆ ಖಚಿತ

| Updated By: Vinay Bhat

Updated on: Feb 17, 2023 | 6:35 AM

India vs Australia 2nd Test: ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಬೆಳಗ್ಗೆ 09:30ಕ್ಕೆ ಆರಂಭವಾಗಲಿದೆ. ಟಾಸ್ ಒಂಬತ್ತು ಗಂಟೆಗೆ ನಡೆಯಲಿದೆ.

IND vs AUS 2nd Test: ಇಂದಿನಿಂದ ಭಾರತ- ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್: ರೋಹಿತ್ ಪಡೆಯಲ್ಲಿ ಬದಲಾವಣೆ ಖಚಿತ
India vs Australia 4th Test
Follow us on

ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಇಂದು ಚಾಲನೆ ಸಿಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಇಂಡೋ- ಆಸೀಸ್​ ಮೊದಲ ಟೆಸ್ಟ್ ಎರಡುವರೆ ದಿನಕ್ಕೇ ಮುಕ್ತಾಯಗೊಂಡಿತ್ತು. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸ್ಪಿನ್ ದಾಳಿಗೆ ನಲುಗಿದ ಕಾಂಗರೂ ಪಡೆ ಹೀನಾಯ ಪ್ರದರ್ಶನ ತೋರಿತು. ರೋಹಿತ್ (Rohit Sharma) ಪಡೆ ಇನ್ನಿಂಗ್ಸ್ ಹಾಗೂ 132 ರನ್​ಗಳ ಭರ್ಜರಿ ಜಯದೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದೀಗ ದ್ವಿತೀಯ ಟೆಸ್ಟ್ ಕದನ ಕುತೂಹಲ ಕೆರಳಿಸಿದೆ.

ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ:

ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಬೆನ್ನು ನೋವಿನ ಕಾರಣ ಶ್ರೇಯಸ್ ಅಯ್ಯರ್ ತಂಡದಿಂದ ಹೊರಗುಳಿದಿದ್ದರು. ಅಲ್ಲದೆ ಕಳೆದ ಒಂದು ವಾರದಿಂದ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿ ತಂಡ ಸೇರಿಕೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಹೊರಗುಳಿದಿದ್ದ ಕಾರಣ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದೀಗ ಅಯ್ಯರ್​ ಅವರ ಆಗಮನದೊಂದಿಗೆ 2ನೇ ಪಂದ್ಯದ ಪ್ಲೇಯಿಂಗ್ ಇಲೆವೆನ್​ನಿಂದ ಸೂರ್ಯಕುಮಾರ್ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

Prasidh Krishna: ಇಂಜುರಿ ಬಗ್ಗೆ ಬಿಗ್​ ಅಪ್​ಡೇಟ್ ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ; ಮತ್ತೆ ತಂಡಕ್ಕೆ ರೀ ಎಂಟ್ರಿ ಯಾವಾಗ?

ಇದನ್ನೂ ಓದಿ
Asia Cup 2023: 2 ದೇಶಗಳಲ್ಲಿ ನಡೆಯಲಿದೆ ಏಷ್ಯಾಕಪ್
IND vs AUS 2nd Test: ಇಬ್ಬರು ಔಟ್, ಮತ್ತಿಬ್ಬರು ಇನ್​: ಹೀಗಿರಲಿದೆಯಂತೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
IPL 2023 – WPL 2023: ತಂಡದಲ್ಲಿ ಕಿಂಗ್ ಅ್ಯಂಡ್ ಕ್ವೀನ್: ಈ ಸಲ ಕಪ್ ನಮ್ದೆ ಎಂದ RCB ಫ್ಯಾನ್ಸ್​
ಹೊಸ ಮೈಲುಗಲ್ಲಿನತ್ತ ಪೂಜಾರ: ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 12 ಆಟಗಾರರು ಯಾರು ಗೊತ್ತಾ?

ರಾಹುಲ್​ಗೆ ಮತ್ತೊಂದು ಅವಕಾಶ:

ದ್ವಿತೀಯ ಟೆಸ್ಟ್​ನಲ್ಲಿ ಕೆಎಲ್ ರಾಹುಲ್ ಅವರ ಭವಿಷ್ಯ ನಿರ್ಧಾರವಾಗಲಿದೆ. ಕಳೆದ ಕೆಲ ಪಂದ್ಯಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವ ರಾಹುಲ್ ಅವರ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳೆದ್ದಿವೆ. ಅದರಲ್ಲೂ ಇನ್​ಫಾರ್ಮ ಆಟಗಾರ ಶುಭ್​ಮನ್ ಗಿಲ್ ಅವರನ್ನು ಹೊರಗಿಟ್ಟು ರಾಹುಲ್ ಅವರಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ರಾಹುಲ್ ಕೇವಲ 20 ರನ್​ಗಳಿಸಿ ನಿರಾಸೆ ಮೂಡಿಸಿದ್ದರು. ಇದರ ಬೆನ್ನಲ್ಲೇ 2ನೇ ಟೆಸ್ಟ್ ಪಂದ್ಯದಿಂದ ರಾಹುಲ್ ಅವರನ್ನು ಕೈ ಬಿಡಬೇಕೆಂಬ ಕೂಗುಗಳು ಕೇಳಿ ಬಂದಿದ್ದವು. ಇದಾಗ್ಯೂ ಮತ್ತೊಂದು ಅವಕಾಶ ನೀಡಲು ರೋಹಿತ್ ಹಾಗೂ ದ್ರಾವಿಡ್ ಬಯಸಿದ್ದಾರಂತೆ.

ಇತ್ತ ಮೊದಲ ಟೆಸ್ಟ್​ನಲ್ಲಿ ಹೀನಾಯ ಪ್ರದರ್ಶನ ತೋರಿರುವ ಆಸ್ಟ್ರೇಲಿಯಾಕ್ಕೆ ಗೆಲುವು ಅನಿವಾರ್ಯವಾಗಿದೆ. ಮಿಚೆಲ್ ಸ್ಟಾರ್ಕ್ ತಂಡ ಸೇರಿಕೊಂಡಿರುವುದು ಬೌಲಿಂಗ್ ಬಲ ಹೆಚ್ಚಿದೆ ಎನ್ನಬಹುದು. ಆದರೆ ಪ್ರಮುಖ ಬ್ಯಾಟರ್‌ಗಳಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಲಾಬುಷೇನ್ ಹಾಗೂ ಉಸ್ಮಾನ್ ಖ್ವಾಜಾ ಅವರು ಈ ಪಂದ್ಯದಲ್ಲಾದರೂ ತಂಡಕ್ಕೆ ಕೊಡುಗೆ ನೀಡಬೇಕಿದೆ. ಪ್ರವಾಸಿ ಬಳಗದ ಸ್ಪಿನ್ನರ್‌ಗಳಾದ ನೇಥನ್ ಲಯನ್ ಹಾಗೂ ಟಾಡ್ ಮರ್ಫೀ ಅವರು ಆತಿಥೇಯ ಬ್ಯಾಟರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ. ಈ ಮೈದಾನ ಕೂಡ ಸ್ಪಿನ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಬೆಳಗ್ಗೆ 09:30ಕ್ಕೆ ಆರಂಭವಾಗಲಿದೆ. ಟಾಸ್ ಒಂಬತ್ತು ಗಂಟೆಗೆ ನಡೆಯಲಿದೆ. ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭ್​ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್ , ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್‌ಶಾಮಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:35 am, Fri, 17 February 23