Attack on Prithvi Shaw: ಟೀಮ್ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಮುಂದಾದ ಯುವತಿ: ವಿಡಿಯೋ ವೈರಲ್

Prithvi Shaw Fight Video: ಈ ವೇಳೆ ಪೃಥ್ವಿ ಶಾ ನಿರಾಕರಿಸಿದ್ದರು. ಇದಾದ ಬಳಿಕ ಬೇಸ್​ಬಾಲ್ ಬ್ಯಾಟ್ ಮೂಲಕ ಕಿಡಿಗೇಡಿಗಳ ಗುಂಪೊಂದು ಟೀಮ್ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಮುಂದಾಗಿದೆ.

Attack on Prithvi Shaw: ಟೀಮ್ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಮುಂದಾದ ಯುವತಿ: ವಿಡಿಯೋ ವೈರಲ್
Prithvi Shaw
Follow us
| Updated By: Digi Tech Desk

Updated on:Feb 17, 2023 | 9:38 AM

ಟೀಮ್ ಇಂಡಿಯಾ (Team India) ಆಟಗಾರ ಪೃಥ್ವಿ ಶಾ (Prithvi Shaw) ಹಾಗೂ ಅಭಿಮಾನಿಗಳ ನಡುವಣ ಸೆಲ್ಫಿ ವಿವಾದವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಪೃಥ್ವಿ ಶಾ ತಾನು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೆಲವು ಕಿಡಿಗೇಡಿಗಳು ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ದೂರು ದಾಖಲಿಸಿದ್ದರು. ಅದರಂತೆ 8 ಮಂದಿಯನ್ನು ಬಂಧಿಸಲಾಗಿದೆ. ಇದೀಗ ಪೃಥ್ವಿ ಶಾ ವಿರುದ್ಧ ಹಲ್ಲೆಗೆ ಮುಂದಾಗಿರುವ ಯುವತಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಪೃಥ್ವಿ ಶಾ ಅವರೊಂದಿಗೆ ಕೆಲ ಅಭಿಮಾನಿಗಳು ಸೆಲ್ಫಿಗೆ ಮುಂದಾಗಿದ್ದಾರೆ. ಈ ವೇಳೆ ಇಬ್ಬರಿಗೆ ಸೆಲ್ಫಿ ನೀಡಿದ್ದಾರೆ. ಇದರ ನಂತರ ಇನ್ನಷ್ಟು ಮಂದಿ ಸೆಲ್ಫಿ ಕ್ಲಿಕ್ಕಿಸಲು ಕೇಳಿಕೊಂಡಿದ್ದಾರೆ.

ಈ ವೇಳೆ ಪೃಥ್ವಿ ಶಾ ನಿರಾಕರಿಸಿದ್ದರು. ಇದಾದ ಬಳಿಕ ಬೇಸ್​ಬಾಲ್ ಬ್ಯಾಟ್ ಮೂಲಕ ಕಿಡಿಗೇಡಿಗಳ ಗುಂಪೊಂದು ಟೀಮ್ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಮುಂದಾಗಿದೆ. ಇತ್ತ ವಿಡಿಯೋದಲ್ಲೂ ಪೃಥ್ವಿ ಶಾ ಯುವತಿಯ ಕೈಯಿಂದ ಬೇಸ್​ಬಾಲ್ ಬ್ಯಾಟ್​​ ಕಸಿದುಕೊಳ್ಳಲು ಯತ್ನಿಸುತ್ತಿರುವುದು ಕಾಣಬಹುದು. ಈ ವಿಡಿಯೋದಲ್ಲಿರುವ ಯುವತಿಯನ್ನು ಸಪ್ನಾ ಗಿಲ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ
Image
India vs Australia 2nd Test: ಟೀಮ್ ಇಂಡಿಯಾಗೆ ಸ್ಟಾರ್ ಆಟಗಾರ ಎಂಟ್ರಿ
Image
Virender Sehwag: ಪುಲ್ವಾಮಾ ದಾಳಿಗೆ 4 ವರ್ಷ: ಕೊಟ್ಟ ಮಾತು ಉಳಿಸಿಕೊಂಡ ವೀರೇಂದ್ರ ಸೆಹ್ವಾಗ್
Image
RCB ತಂಡದ ಸ್ಮೈಲ್ ಸುಂದರಿ ಸ್ಮೃತಿ ಮಂಧಾನ ಅವರ ಶೈಕ್ಷಣಿಕ ಅರ್ಹತೆ ಏನು ಗೊತ್ತಾ?
Image
WPL 2023: ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯುವ 5 ತಂಡಗಳು ಹೀಗಿವೆ

ಇದೀಗ ಯುವತಿಯು ಪೃಥ್ವಿ ಶಾ ತನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಪೃಥ್ವಿ ಶಾ ಆರೋಪದಂತೆ, ಸೆಲ್ಫಿ ನೀಡದಿರುವ ಕಾರಣ ಆರೋಪಿಗಳು ಅವರನ್ನು ಹಿಂಬಾಲಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇಲ್ಲದಿದ್ದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿದ್ದರು. ಈ ಸಂಬಂಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ಸಪ್ನಾ ಗಿಲ್ ಅವರ ವಕೀಲ ಅಲಿ ಕಾಸಿಫ್ ಖಾನ್ ದೇಶಮುಖ್ ಪ್ರಕಾರ, ಪೊಲೀಸರು ನನ್ನ ಕಕ್ಷಿದಾರರಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

8 ಜನರ ವಿರುದ್ಧ ಪ್ರಕರಣ ದಾಖಲು:

ಮುಂಬೈನ ಓಶಿವಾರ ಪೊಲೀಸ್ ಠಾಣಾ ಮಾಹಿತಿ ಪ್ರಕಾರ, ಪೃಥ್ವಿ ಶಾ ನೀಡಿದ ದೂರಿನ ಅನ್ವಯ 8 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರಿನ ಪ್ರಕಾರ, ಆರೋಪಿಗಳು ಪೃಥ್ವಿ ಶಾ ಅವರಲ್ಲಿ ಸೆಲ್ಫಿಗಾಗಿ ಒತ್ತಾಯಿಸಿದ್ದರು. ಈ ವೇಳೆ ಅವರ ಸ್ನೇಹಿತ ಹೋಟೆಲ್ ಮ್ಯಾನೇಜರ್‌ಗೆ ಕರೆ ಮಾಡಿದ್ದಾರೆ. ಇದಾದ ನಂತರ ಮ್ಯಾನೇಜರ್ ಆರೋಪಿಗಳನ್ನು ಅಲ್ಲಿಂದ ಹೊಟೇಲ್​ನಿಂದ ಹೊರಗೆ ಕಳುಹಿಸಿದ್ದಾರೆ.

ಇದರಿಂದ ಕೋಪಗೊಂಡಿದ್ದ ಆರೋಪಿಗಳು, ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಕ್ಲಬ್‌ನಿಂದ ಹೊರಬರಲು ಕಾಯುತ್ತಿದ್ದರು. ಆ ಬಳಿಕ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಬೇಸ್ ಬಾಲ್ ಬ್ಯಾಟ್​ನಿಂದ ಕಾರಿನ ಗಾಜು ಒಡೆದಿದ್ದಾರೆ. ಈ ಸಂಬಂಧ 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

Published On - 7:09 pm, Thu, 16 February 23