RCB ತಂಡದ ಸ್ಮೈಲ್ ಸುಂದರಿ ಸ್ಮೃತಿ ಮಂಧಾನ ಅವರ ಶೈಕ್ಷಣಿಕ ಅರ್ಹತೆ ಏನು ಗೊತ್ತಾ?

Smriti Mandhana Biography: ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ಯುವ ಆಟಗಾರ್ತಿ ಇಂದು ಉಪನಾಯಕಿಯಾಗಿ ಮಿಂಚುತ್ತಿದ್ದಾರೆ. ಭಾರತ ತಂಡದ ಪರ ಇದುವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 1 ಶತಕದೊಂದಿಗೆ 325 ರನ್ ಕಲೆಹಾಕಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Feb 14, 2023 | 7:23 PM

ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಇದೀಗ  ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಮೈದಾನದಲ್ಲಿನ ದಾಖಲೆಯ ಮೂಲಕ ಸುದ್ದಿಯಲ್ಲಿದ್ದ ಸುರ ಸುಂದರಾಂಗಿ ಈ ಬಾರಿ ಭಾರೀ ಮೊತ್ತಕ್ಕೆ ಹರಾಜಾಗುವ ಮೂಲಕ ದಾಖಲೆ ಬರೆದಿದ್ದಾರೆ.

1 / 10
ಹೌದು, ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಭರ್ಜರಿ ಮೊತ್ತಕ್ಕೆ ಹರಾಜಾದ ದಾಖಲೆ ಸ್ಮೃತಿ ಮಂಧಾನ ಪಾಲಾಗಿದೆ. ಸೋಮವಾರ ಮುಂಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರ್​ಸಿಬಿ ಫ್ರಾಂಚೈಸಿಯು ಟೀಮ್ ಇಂಡಿಯಾ ಆಟಗಾರ್ತಿಯನ್ನು ಬರೋಬ್ಬರಿ 3.4 ಕೋಟಿ ರೂ.ಗೆ ಖರೀದಿಸಿದೆ.

2 / 10
ಇದರ ಬೆನ್ನಲ್ಲೇ ಸ್ಮೃತಿ ಮಂಧಾನ ಹೆಸರು ವೈರಲ್ ಆಗಲು ಆರಂಭಿಸಿದೆ. ಈ ಬಾರಿ ಕೇವಲ ಹರಾಜಿನ ಕಾರಣಕ್ಕಾಗಿ ಮಾತ್ರ ವೈರಲ್ ಆಗಿಲ್ಲ. ಬದಲಾಗಿ ಅವರ ವಿದ್ಯಾಭ್ಯಾಸ ಹಾಗೂ ವಯಸ್ಸನ್ನೂ ಕೂಡ ಅಭಿಮಾನಿಗಳು ಜಾಲಾಡಿದ್ದಾರೆ. ಸ್ಮೃತಿ ಮಂಧಾನ ಏನು ಓದಿದ್ದಾರೆ? ಎಲ್ಲಿಯವರು? ಎಂಬಿತ್ಯಾದಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

3 / 10
1996, ಜುಲೈ 18 ರಂದು ಮುಂಬೈನ ಮಾರ್ವಾಡಿ ಸಮುದಾಯದವರಾದ ಸ್ಮಿತಾ ಮತ್ತು ಶ್ರೀನಿವಾಸ್ ದಂಪತಿಗಳ 2ನೇ ಮಗುವಾಗಿ ಸ್ಮೃತಿ ಮಂಧಾನ ಜನಿಸಿದರು. ಆಕೆಗೆ ಎರಡು ವರ್ಷದವಳಿದ್ದಾಗ, ಅವರ ಕುಟುಂಬವು ಮಹಾರಾಷ್ಟ್ರದ ಸಾಂಗ್ಲಿಯ ಮಾಧವನಗರಕ್ಕೆ ಸ್ಥಳಾಂತರಗೊಂಡಿತು.

4 / 10
ಬಾಲ್ಯವನ್ನು ಸಾಂಗ್ಲಿಯಲ್ಲೇ ಕಳೆದಿದ್ದ ಸ್ಮೃತಿ ಅಲ್ಲೇ ಶಾಲಾ ಶಿಕ್ಷಣವನ್ನು ಪಡೆದರು. ಇನ್ನು ಸಾಂಗ್ಲಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದ ಬಳಿಕ ಅವರು ಚಿಂತಾಮನ್ ರಾವ್ ವಾಣಿಜ್ಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ (ಬಿಕಾಂ) ಓದಿದ್ದಾರೆ. ಇದರ ನಡುವೆ ಕ್ರಿಕೆಟ್ ಅಭ್ಯಾಸವನ್ನೂ ಕೂಡ ಆರಂಭಿಸಿದ್ದರು.

5 / 10
ಸಹೋದರ ಶ್ರವಣ್ ಮಂಧಾನ ಅವರು ಮಹಾರಾಷ್ಟ್ರ ರಾಜ್ಯ ಅಂಡರ್-16 ಪಂದ್ಯಾವಳಿಗಳಲ್ಲಿ ಕ್ರೀಡೆಯನ್ನು ಆಡುವುದನ್ನು ನೋಡಿದ ನಂತರ ಕ್ರಿಕೆಟಿಗಳಾಗಬೇಕೆಂದು ನಿರ್ಧರಿಸಿದರು. ವಿಶೇಷ ಎಂದರೆ ಅವರ ತಂದೆ ಶ್ರೀನಿವಾಸ್ ಮಂಧಾನ ಕೂಡ ಸಾಂಗ್ಲಿಗಾಗಿ ಜಿಲ್ಲಾ ಮಟ್ಟದಲ್ಲಿ ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಮನೆಯವರಿಂದ ಸಂಪೂರ್ಣ ಬೆಂಬಲ ದೊರೆಯಿತು.

6 / 10
ಸ್ಮೃತಿ ಒಂಬತ್ತನೇ ವಯಸ್ಸಿನಲ್ಲಿ ಮಹಾರಾಷ್ಟ್ರದ 15 ವರ್ಷದೊಳಗಿನವರ ತಂಡದಲ್ಲಿ ಮತ್ತು ಹನ್ನೊಂದನೇ ವಯಸ್ಸಿನಲ್ಲಿ ರಾಜ್ಯದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದರು. ಆ ಬಳಿಕ ಅವರು ಹಿಂತಿರುಗಿ ನೋಡಿಲ್ಲ ಎನ್ನಬಹುದು.

7 / 10
2013 ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ಯುವ ಆಟಗಾರ್ತಿ ಇಂದು ಉಪನಾಯಕಿಯಾಗಿ ಮಿಂಚುತ್ತಿದ್ದಾರೆ. ಭಾರತ ತಂಡದ ಪರ ಇದುವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿರುವ ಅವರು 1 ಶತಕದೊಂದಿಗೆ 325 ರನ್ ಕಲೆಹಾಕಿದ್ದಾರೆ.

8 / 10
ಹಾಗೆಯೇ 77 ಏಕದಿನ ಪಂದ್ಯಗಳಿಂದ 5 ಶತಕ ಹಾಗೂ 25 ಅರ್ಧಶತಕಗಳೊಂದಿಗೆ 3073 ರನ್​ ಬಾರಿಸಿದ್ದಾರೆ. ಇನ್ನು 112 ಟಿ20 ಪಂದ್ಯಗಳಲ್ಲಿ 2651	 ರನ್​ ಕಲೆಹಾಕಿದ್ದಾರೆ. ಈ ವೇಳೆ 20 ಅರ್ಧಶತಕಗಳನ್ನು ಬಾರಿಸಿದ್ದಾರೆ.

9 / 10
ಇದೀಗ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ 26 ವರ್ಷದ ಸ್ಮೃತಿ ಮಂಧಾನ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಆರ್​ಸಿಬಿ ಮಹಿಳಾ ತಂಡವನ್ನು ಅವರೇ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.

10 / 10
Follow us
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?

ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ