ಐಪಿಎಲ್ 2023ಕ್ಕೆ (IPL 2023) ಎಲ್ಲಾ ತಂಡಗಳು ತಯಾರಿ ಆರಂಭಿಸಿವೆ. ಅದರಲ್ಲೂ ಇದುವರೆಗು ಒಂದೇ ಒಂದು ಪ್ರಶಸ್ತಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ವಿಶೇಷ ತಂತ್ರಗಾರಿಕೆಯೊಂದಿಗೆ ಮೈದಾನಕ್ಕಿಳಿಯುವ ಚಿಂತನೆಯಲ್ಲಿದೆ. ಈ ಬಾರಿ ಮೊದಲ ಟ್ರೋಫಿಯ ನಿರೀಕ್ಷೆಯಲ್ಲಿ ತಂಡ ಕೆಲವು ವಿಶೇಷ ತಂತ್ರಗಳನ್ನು ಅನುಸರಿಸಲಿದೆ. ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿ ಕಾಣುವ ತಂಡಕ್ಕೆ ಪ್ರತಿ ಬಾರಿ ಬೌಲಿಂಗ್ನಲ್ಲಿನ ನ್ಯೂನತೆಯಿಂದಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯಾವಾಗುತ್ತಿಲ್ಲ. ಈ ಬಾರಿ ಮಿನಿ ಹರಾಜಿಗೂ (IPL Mini Auction) ಮುನ್ನ ತಂಡ ಐವರು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದೆ. ಸದ್ಯ ತಂಡಕ್ಕೆ 9 ಆಟಗಾರರ ಅಗತ್ಯವಿದ್ದು, ಇದರಲ್ಲಿ 7 ಭಾರತೀಯ ಮತ್ತು 2 ವಿದೇಶಿ ಆಟಗಾರರ ಜಾಗಗಳು ಖಾಲಿ ಉಳಿದಿವೆ. ಹೀಗಾಗಿ ಮಿನಿ ಹರಾಜಿನಲ್ಲಿ ಫ್ರಾಂಚೈಸಿ ಈ ಆಟಗಾರರ ಖರೀದಿ ಮೇಲೆ ಕಣ್ಣಿಟ್ಟಿದೆ.
ಫಾಫ್ ಡು ಪ್ಲೆಸಿಸ್ (ನಾಯಕ), ಶಾಬಾಜ್ ಅಹ್ಮದ್, ಫಿನ್ ಅಲೆನ್, ಆಕಾಶ್ ದೀಪ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ದಿನೇಶ್ ಕಾರ್ತಿಕ್, ಸಿದ್ಧಾರ್ಥ್ ಕೌಲ್, ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಅನುಜ್ ಶರ್ಮ, ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲಿ.
AB de Villiers: ಆರ್ಸಿಬಿಗೆ ಡಿವಿಲಿಯರ್ಸ್ ಎಂಟ್ರಿ ಖಚಿತ; ಅಧಿಕೃತ ಹೇಳಿಕೆ ನೀಡಿದ ಫ್ರಾಂಚೈಸಿ..!
ಜೇಸನ್ ಬೆಹ್ರೆನ್‌ಡಾರ್ಫ್, ಶೆರ್ಫಾನ್ ರುದರ್‌ಫೋರ್ಡ್, ಚಾಮ್ ಮಿಲಿಂದ್, ಅನೇಶ್ವರ್ ಗೌತಮ್, ಲೊವೆನಿತ್ ಸಿಸೋಡಿಯಾ.
ಈ ಸೀಸನ್ನಲ್ಲಿ ಬೌಲರ್‌ಗಳ ಮೇಲೆ ಹೆಚ್ಚಿನ ಗಮನ ಹರಿಸುವತ್ತ ಆರ್ಸಿಬಿ ಮುಖ ಮಾಡಿದೆ. ಡಿಸೆಂಬರ್ 23 ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಇಬ್ಬರು ಉತ್ತಮ ಬೌಲರ್ಗಳನ್ನು ಖರೀದಿಸಲು ಚಿಂತಿಸಿರುವ ಆರ್ಸಿಬಿ ಬಳಿ 8.75 ಕೋಟಿ ರೂ. ಮಾತ್ರ ಉಳಿದಿದೆ. ಈ ಮೊತ್ತದಲ್ಲಿ ತಂಡವು 9 ಆಟಗಾರರನ್ನು ಖರೀದಿಸಬೇಕಾಗಿದೆ. ಈ ಇಬ್ಬರು ವಿದೇಶಿ ಆಟಗಾರರ ಪೈಕಿ, ಆರ್ಸಿಬಿ ಮೊದಲು ಆಫ್ರಿಕನ್ ವೇಗದ ಬೌಲರ್ ವೇಯ್ನ್ ಪಾರ್ನೆಲ್ ಅವರನ್ನು ತಮ್ಮ ಪಾಳೆಯಕ್ಕೆ ಸೇರಿಸಿಕೊಳ್ಳಲು ನೋಡಲಿದೆ. ಹರಾಜಿನಲ್ಲಿ ಪಾರ್ನೆಲ್ ತಮ್ಮ ಮೂಲ ಬೆಲೆಯನ್ನು 75 ಲಕ್ಷ ರೂ. ಗೆ ಇರಿಸಿದ್ದಾರೆ. ಇವರಲ್ಲದೆ, ತಂಡದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ಆಯ್ಕೆಯಾಗಿ ನೋಡಲು ತಂಡವು ಪ್ರಯತ್ನಿಸಲಿದೆ. 2 ಕೋಟಿ ಮೂಲ ಬೆಲೆ ಹೊಂದಿರುವ ಆದಿಲ್ ರಶೀದ್ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದರು.
ಕುತೂಹಲಕಾರಿಯಾಗಿ, ತಂಡವು ಈಗಾಗಲೇ ತುಂಬಾ ಪ್ರಬಲವಾಗಿದೆ. ಮಿನಿ ಹರಾಜಿನಲ್ಲಿ ತಂಡವು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಲಿಲ್ಲ. ಫಾಫ್ ಡು ಪ್ಲೆಸಿಸ್ ಮತ್ತು ಫಿನ್ ಅಲೆನ್ ಆರಂಭಿಕ ಜವಾಬ್ದಾರಿಯನ್ನು ನಿಭಾಯಿಸಲು ತಂಡದಲ್ಲಿದ್ದಾರೆ. ಇದಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಫಿನಿಶರ್‌ಗಳಾಗಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಇದ್ದಾರೆ.
ಆದರೆ ತಂಡದ ಬೌಲಿಂಗ್ ವಿಭಾಗ ಯಾವಾಗಲೂ ಸಮಸ್ಯೆಯಾಗಿದೆ. ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲಿ ತಂಡದಲ್ಲಿ ವೇಗದ ಬೌಲರ್‌ಗಳಾಗಿದ್ದರೂ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಾರ್ನೆಲ್ ಎಂಟ್ರಿ ತಂಡಕ್ಕೆ ಬಲ ನೀಡಬಲ್ಲರು. ಅದೇ ಸಮಯದಲ್ಲಿ ಸ್ಪಿನ್ನರ್‌ಗಳ ಪೈಕಿ ವನಿಂದು ಹಸರಂಗ ಅವರಂತಹ ಸ್ಟಾರ್ ಬೌಲರ್ ಈಗಾಗಲೇ ತಂಡದಲ್ಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಆದಿಲ್ ರಶೀದ್ ತಂಡದ ಸ್ಪಿನ್ ವಿಭಾಗದಲ್ಲಿ ಮತ್ತಷ್ಟು ಬಲ ಒದಗಿಸಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ