ಆರ್​ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತ; ಈ ಪಂದ್ಯಗಳಿಂದ ಆಗುತ್ತೆ ನಿರ್ಧಾರ

|

Updated on: Apr 16, 2024 | 7:48 AM

ಏಪ್ರಿಲ್ 15ರಂದು ನಡೆದ ಆರ್​ಸಿಬಿ Vs ಎಸ್​ಆರ್​ಎಚ್​ ಪಂದ್ಯದಲ್ಲಿ ರನ್​ಗಳ ಮಳೆ ಹರಿದಿದೆ. 20 ಓವರ್​ಗಳಲ್ಲಿ 287 ರನ್​ಗಳನ್ನು ಕಲೆ ಹಾಕಿತ್ತು ಹೈದರಾಬಾದ್ ತಂಡ. ಇದನ್ನು ಬೆನ್ನು ಹತ್ತಿದ ಆರ್​ಸಿಬಿ ತಂಡ 262 ರನ್​ ಕಲೆ ಹಾಕಲಷ್ಟೇ ಶಕ್ತವಾಯಿತು.

ಆರ್​ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತ; ಈ ಪಂದ್ಯಗಳಿಂದ ಆಗುತ್ತೆ ನಿರ್ಧಾರ
ಆರ್​ಸಿಬಿ
Follow us on

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಆಡಿದ ಏಳು ಪಂದ್ಯಗಳಲ್ಲಿ ಆರು ಮ್ಯಾಚ್​ಗಳನ್ನು ಸೋಲುವ ಮೂಲಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪಂಜಾಬ್ ವಿರುದ್ಧ ಗೆಲುವು ಕಂಡು ಎರಡು ಅಂಕ ಪಡೆದಿದೆ. ರನ್​ ರೇಟ್ ಕೂಡ ಹೀನಾಯ ಸ್ಥಿತಿಯಲ್ಲಿದ್ದು -1.185 ಇದೆ. ಇನ್ನು ಉಳಿದಿರೋದು ಕೇವಲ ಏಳು ಪಂದ್ಯಗಳು ಮಾತ್ರ. ಅಂಕಿ ಅಂಶಗಳನ್ನು ನೋಡಿದರೆ ಆರ್​ಸಿಬಿ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಚಮತ್ಕಾರ ನಡೆದರೆ ಮಾತ್ರ ಆರ್​ಸಿಬಿ ಪ್ಲೇಆಫ್ ತಲುಪಬಹುದು.

ಆರ್​ಸಿಬಿಗೆ ಉಳಿದಿರೋದು ಏಳು ಪಂದ್ಯಗಳು ಮಾತ್ರ. ಇದರಲ್ಲಿ ಏಳೂ ಪಂದ್ಯಗಳನ್ನು ಗೆಲ್ಲಬೇಕು. ಜೊತೆಗೆ ಈಗಿರುವ ಮೈನಸ್ ರನ್​ರೇಟ್​ನ ಪ್ಲಸ್​ಗೆ ತಂದುಕೊಳ್ಳಬೇಕು. ಇದರ ಜೊತೆಗೆ ಉಳಿದ ತಂಡಗಳ ಮ್ಯಾಚ್ ರಿಸಲ್ಟ್ ಕೂಡ ಆರ್​ಸಿಬಿ ಪ್ಲೇಆಫ್ ಮೇಲೆ ಪ್ರಭಾವ ಬೀರಲಿದೆ.

ಇದನ್ನೂ ಓದಿ: IPL 2024: 102, 67 ರನ್; ಆರ್​ಸಿಬಿಗೆ ಕಂಟಕವಾದ ಮಾಜಿ ಆರ್​ಸಿಬಿ ಆಟಗಾರರು..!

ಏಪ್ರಿಲ್ 15ರಂದು ನಡೆದ ಆರ್​ಸಿಬಿ Vs ಎಸ್​ಆರ್​ಎಚ್​ ಪಂದ್ಯದಲ್ಲಿ ರನ್​ಗಳ ಮಳೆ ಹರಿದಿದೆ. 20 ಓವರ್​ಗಳಲ್ಲಿ 287 ರನ್​ಗಳನ್ನು ಕಲೆ ಹಾಕಿತ್ತು ಹೈದರಾಬಾದ್ ತಂಡ. ಇದನ್ನು ಬೆನ್ನು ಹತ್ತಿದ ಆರ್​ಸಿಬಿ ತಂಡ 262 ರನ್​ ಕಲೆ ಹಾಕಲಷ್ಟೇ ಶಕ್ತವಾಯಿತು. ಈ ಮೂಲಕ 25 ರನ್​ಗಳ ಸೋಲು ಕಂಡಿತು. ಸದ್ಯದ ಪರಿಸ್ಥಿತಿಯಲ್ಲಿ ಆರ್​ಸಿಬಿ ಪ್ಲೇಆಫ್ ಕನಸು ಅಷ್ಟು ಸುಲಭದಲ್ಲಿ ಇಲ್ಲ. ಆರ್​ಸಿಬಿ ಪ್ಲೇಆಫ್ ತಲುಪಬೇಕು ಎನ್ನುವ ಕನಸು ಕನಸಾಗಿಯೇ ಉಳಿಯೋ ಸಾಧ್ಯತೆ ಇದೆ.  ‘ಈ ವರ್ಷ ಕಪ್ ನಮ್ಮದೇ’ ಎನ್ನುವ ಸ್ಲೋಗನ್ ಮತ್ತೆ ಮುಂದುವರಿಸಬೇಕಾದ ಅನಿವಾರ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:41 am, Tue, 16 April 24