AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Faf du Plessis: ‘ಅದು ನಮಗೆ ದುಬಾರಿ ಆಯಿತು’; ಸೋಲಿನ ಬಳಿಕ ಆರ್​ಸಿಬಿ ನಾಯಕನ ಬೇಸರದ ಮಾತು

‘ನಮ್ಮಿಂದ ಉತ್ತಮ ಪ್ರದರ್ಶನ ಸಿಕ್ಕಿದೆ. 280 ಅನ್ನೋದು ದೊಡ್ಡ ಮೊತ್ತ. ಅದರ ಸಮೀಪ ಹೋಗಲು ಪ್ರಯತ್ನಿಸಿದೆವು. ಇಲ್ಲಿ ನಮ್ಮ ವೇಗಿಗಳು ಬೌಲ್ ಮಾಡಲು ಕಷ್ಟಪಟ್ಟರು. ಬ್ಯಾಟಿಂಗ್ ಕ್ಷೇತ್ರದಲ್ಲೂ ನಾವು ಕೆಲವು ಕಡೆ ಇನ್ನಷ್ಟು ಶ್ರಮ ಹಾಕಬೇಕಿದೆ’ ಎಂದಿದ್ದಾರೆ ಡುಪ್ಲೆಸಿಸ್.

Faf du Plessis: ‘ಅದು ನಮಗೆ ದುಬಾರಿ ಆಯಿತು’; ಸೋಲಿನ ಬಳಿಕ ಆರ್​ಸಿಬಿ ನಾಯಕನ ಬೇಸರದ ಮಾತು
ಆರ್​ಸಿಬಿ
ರಾಜೇಶ್ ದುಗ್ಗುಮನೆ
|

Updated on:Apr 16, 2024 | 8:14 AM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸನ್​ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿದೆ. 288 ರನ್​ಗಳ ಬೃಹತ್ ಟಾರ್ಗೆಟ್​ ಬೆನ್ನು ಹತ್ತಿದ ಆರ್​ಸಿಬಿ ಸುಲಭದಲ್ಲಿ ಸೋಲೊಪ್ಪಲಿಲ್ಲ. 262 ರನ್​ಗಳ ಮೊತ್ತ ಕಲೆ ಹಾಕಿ ಕೇವಲ 25 ರನ್​ಗಳಲ್ಲಿ ಸೋತಿತು. ಆರ್​ಸಿಬಿ ಆರನೇ ಸೋಲಿನ ಬಳಿಕ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಅವರು ಮಾತನಾಡಿದ್ದಾರೆ. ಈ ಪಂದ್ಯವನ್ನು ನಾವು ಗೆಲ್ಲಬಹುದಿತ್ತು ಎಂದು ಅವರು ಹೇಳಿದ್ದಾರೆ.

ಟಾಸ್ ಗೆದ್ದ ಆರ್​ಸಿಬಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಪಿಚ್ ಹಾಗೂ ಆರ್​ಸಿಬಿ ಬೌಲರ್​ಗಳ ಕಳಪೆ ಪ್ರದರ್ಶನದಿಂದ ಹೈದರಾಬಾದ್ ತಂಡ 287 ರನ್ ಕಲೆ ಹಾಕಿತು. ಹೆಡ್ 41 ಬೌಲ್​ಗೆ 101 ರನ್ ಕಲೆ ಹಾಕಿದರು. ಅಬ್ದುಲ್ ಸಮಾದ್ ಹಾಗೂ ಮಕ್ರಮ್ ಅನುಕ್ರವಾಗಿ 37 ರನ್ ಹಾಗೂ 32 ರನ್ ಬಾರಿಸಿದರು. ಕ್ಲಾಸನ್ 31 ಬೌಲ್​ಗೆ 67 ರನ್ ಸಿಡಿಸಿದರು. ಇದನ್ನು ಬೆನ್ನು ಹತ್ತಿದ ಆರ್​ಸಿಬಿ ಉತ್ತಮ ಆರಂಭ ಕಂಡಿತು. ವಿರಾಟ್ ಕೊಹ್ಲಿ 20 ಬೌಲ್​ಗೆ 42 ರನ್ ಸಿಡಿಸಿದರು. ಫಾಪ್ 28 ಬೌಲ್​ಗೆ 62 ರನ್ ಬಾರಿಸಿದರು. ಕಾರ್ತಿಕ್ 35 ಬೌಲ್​ಗೆ 83 ಸಿಡಿಸಿ ತಂಡಕ್ಕೆ ಆಸರೆ ಆದರು.

ಪಂದ್ಯ ಮುಗಿದ ಬಳಿಕ ಫಾಪ್ ಮಾತನಾಡಿದ್ದಾರೆ. ‘ನಮ್ಮಿಂದ ಉತ್ತಮ ಪ್ರದರ್ಶನ ಸಿಕ್ಕಿದೆ. 280 ಅನ್ನೋದು ದೊಡ್ಡ ಮೊತ್ತ. ಅದರ ಸಮೀಪ ಹೋಗಲು ಪ್ರಯತ್ನಿಸಿದೆವು. ಇಲ್ಲಿ ನಮ್ಮ ವೇಗಿಗಳು ಬೌಲ್ ಮಾಡಲು ಕಷ್ಟಪಟ್ಟರು. ಬ್ಯಾಟಿಂಗ್ ಕ್ಷೇತ್ರದಲ್ಲೂ ನಾವು ಕೆಲವು ಕಡೆ ಇನ್ನಷ್ಟು ಶ್ರಮ ಹಾಕಬೇಕಿದೆ. ಪವರ್​ಪ್ಲೇ ಬಳಿಕವೂ ರನ್​ರೇಟ್ ಕಡಿಮೆ ಆಗದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ ಫಾಪ್.

ಇದನ್ನೂ ಓದಿ: ಆರ್​ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತ; ಈ ಪಂದ್ಯಗಳಿಂದ ಆಗುತ್ತೆ ನಿರ್ಧಾರ

‘ನಮ್ಮ ಬಾಯ್ಸ್ ಕೈ ಜೋಡಿಸಿದರು ಮತ್ತು ಬಿಟ್ಟುಕೊಡಲಿಲ್ಲ. ಫೈಟ್ ನೋಡಲು ಖುಷಿ ಆಯಿತು. ಬೌಲಿಂಗ್ ದೃಷ್ಟಿಯಿಂದ ನೋಡೋದಾದರೆ ನಮ್ಮಿಂದ 30-40 ರನ್ ಹೆಚ್ಚುವರಿಯಾಗಿ ಬಂದಿದೆ. ಅದು ನಮಗೆ ದುಬಾರಿ ಆಯಿತು. ಮರಳಿ ಪೆವಿಲಿಯನ್ ಹೋಗಿ ಮನಸ್ಸನ್ನು ತಿಳಿ ಗೊಳಿಸಿಕೊಂಡುಬರೋದು ಮುಖ್ಯ. ಇದು ಮನಸ್ಸಿನ ಆಟ. ಕೆಲವೊಮ್ಮೆ ನಿಮ್ಮ ತಲೆ ಸಿಡಿದಂತೆ ಅನಿಸುತ್ತದೆ. ಆದರೆ, ಮ್ಯಾಚ್ ಎಂಬುದು ಬಂದಾಗ ಶೇ. 100 ನೀಡಬೇಕು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:14 am, Tue, 16 April 24

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್