ಆರ್ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತ; ಈ ಪಂದ್ಯಗಳಿಂದ ಆಗುತ್ತೆ ನಿರ್ಧಾರ
ಏಪ್ರಿಲ್ 15ರಂದು ನಡೆದ ಆರ್ಸಿಬಿ Vs ಎಸ್ಆರ್ಎಚ್ ಪಂದ್ಯದಲ್ಲಿ ರನ್ಗಳ ಮಳೆ ಹರಿದಿದೆ. 20 ಓವರ್ಗಳಲ್ಲಿ 287 ರನ್ಗಳನ್ನು ಕಲೆ ಹಾಕಿತ್ತು ಹೈದರಾಬಾದ್ ತಂಡ. ಇದನ್ನು ಬೆನ್ನು ಹತ್ತಿದ ಆರ್ಸಿಬಿ ತಂಡ 262 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಆಡಿದ ಏಳು ಪಂದ್ಯಗಳಲ್ಲಿ ಆರು ಮ್ಯಾಚ್ಗಳನ್ನು ಸೋಲುವ ಮೂಲಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪಂಜಾಬ್ ವಿರುದ್ಧ ಗೆಲುವು ಕಂಡು ಎರಡು ಅಂಕ ಪಡೆದಿದೆ. ರನ್ ರೇಟ್ ಕೂಡ ಹೀನಾಯ ಸ್ಥಿತಿಯಲ್ಲಿದ್ದು -1.185 ಇದೆ. ಇನ್ನು ಉಳಿದಿರೋದು ಕೇವಲ ಏಳು ಪಂದ್ಯಗಳು ಮಾತ್ರ. ಅಂಕಿ ಅಂಶಗಳನ್ನು ನೋಡಿದರೆ ಆರ್ಸಿಬಿ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಚಮತ್ಕಾರ ನಡೆದರೆ ಮಾತ್ರ ಆರ್ಸಿಬಿ ಪ್ಲೇಆಫ್ ತಲುಪಬಹುದು.
ಆರ್ಸಿಬಿಗೆ ಉಳಿದಿರೋದು ಏಳು ಪಂದ್ಯಗಳು ಮಾತ್ರ. ಇದರಲ್ಲಿ ಏಳೂ ಪಂದ್ಯಗಳನ್ನು ಗೆಲ್ಲಬೇಕು. ಜೊತೆಗೆ ಈಗಿರುವ ಮೈನಸ್ ರನ್ರೇಟ್ನ ಪ್ಲಸ್ಗೆ ತಂದುಕೊಳ್ಳಬೇಕು. ಇದರ ಜೊತೆಗೆ ಉಳಿದ ತಂಡಗಳ ಮ್ಯಾಚ್ ರಿಸಲ್ಟ್ ಕೂಡ ಆರ್ಸಿಬಿ ಪ್ಲೇಆಫ್ ಮೇಲೆ ಪ್ರಭಾವ ಬೀರಲಿದೆ.
ಇದನ್ನೂ ಓದಿ: IPL 2024: 102, 67 ರನ್; ಆರ್ಸಿಬಿಗೆ ಕಂಟಕವಾದ ಮಾಜಿ ಆರ್ಸಿಬಿ ಆಟಗಾರರು..!
ಏಪ್ರಿಲ್ 15ರಂದು ನಡೆದ ಆರ್ಸಿಬಿ Vs ಎಸ್ಆರ್ಎಚ್ ಪಂದ್ಯದಲ್ಲಿ ರನ್ಗಳ ಮಳೆ ಹರಿದಿದೆ. 20 ಓವರ್ಗಳಲ್ಲಿ 287 ರನ್ಗಳನ್ನು ಕಲೆ ಹಾಕಿತ್ತು ಹೈದರಾಬಾದ್ ತಂಡ. ಇದನ್ನು ಬೆನ್ನು ಹತ್ತಿದ ಆರ್ಸಿಬಿ ತಂಡ 262 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಈ ಮೂಲಕ 25 ರನ್ಗಳ ಸೋಲು ಕಂಡಿತು. ಸದ್ಯದ ಪರಿಸ್ಥಿತಿಯಲ್ಲಿ ಆರ್ಸಿಬಿ ಪ್ಲೇಆಫ್ ಕನಸು ಅಷ್ಟು ಸುಲಭದಲ್ಲಿ ಇಲ್ಲ. ಆರ್ಸಿಬಿ ಪ್ಲೇಆಫ್ ತಲುಪಬೇಕು ಎನ್ನುವ ಕನಸು ಕನಸಾಗಿಯೇ ಉಳಿಯೋ ಸಾಧ್ಯತೆ ಇದೆ. ‘ಈ ವರ್ಷ ಕಪ್ ನಮ್ಮದೇ’ ಎನ್ನುವ ಸ್ಲೋಗನ್ ಮತ್ತೆ ಮುಂದುವರಿಸಬೇಕಾದ ಅನಿವಾರ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:41 am, Tue, 16 April 24