ಐಪಿಎಲ್ 2024ರ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 20 ರನ್‌ಗಳಿಂದ ಸೋಲಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು. ತಂಡದ ಪರ ಸಂಜು ಸ್ಯಾಮ್ಸನ್ 82 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಉತ್ತರವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 173 ರನ್ ಗಳಿಸಲಷ್ಟೇ ಶಕ್ತವಾಯಿತು. ಲಕ್ನೋ ಪರ ನಾಯಕ ರಾಹುಲ್ ಮತ್ತು ನಿಕೋಲಸ್ ಪೂರನ್ ತಲಾ ಅರ್ಧಶತಕ ಸಿಡಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ರಾಹುಲ್ 58 ರನ್ ಗಳಿಸಿ ಔಟಾದರೆ, ಪುರನ್ 64 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಆರು ಎಸೆತಗಳಲ್ಲಿ ಲಕ್ನೋ ಗೆಲುವಿಗೆ 27 ರನ್‌ಗಳ ಅಗತ್ಯವಿತ್ತು, ಆದರೆ ತಂಡವು ಕೇವಲ ಆರು ರನ್ ಗಳಿಸಲು ಸಾಧ್ಯವಾಯಿತು. ಕಳೆದ ಸೀಸನ್ನಲ್ಲಿ ಲಕ್ನೋ ಪರ ಆಡಿದ್ದ ಅವೇಶ್ ಖಾನ್ ಕೇವಲ ಆರು ರನ್ ಬಿಟ್ಟುಕೊಟ್ಟು ರಾಜಸ್ಥಾನಕ್ಕೆ ಅಮೋಘ ಗೆಲುವು ತಂದುಕೊಟ್ಟರು.
ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತನ್ನ ಮೊದಲ ಪಂದ್ಯವನ್ನು 20 ರನ್‌ಗಳಿಂದ ಗೆದ್ದಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ 194 ರನ್ ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 173 ರನ್ ಗಳಿಸಲಷ್ಟೇ ಶಕ್ತವಾಯಿತು.
ಲಕ್ನೋ ಐದನೇ ವಿಕೆಟ್ ಕಳೆದುಕೊಂಡಿದೆ. ವೇಗಿ ಸಂದೀಪ್ ಶರ್ಮಾ ನಾಯಕ ಕೆಎಲ್ ರಾಹುಲ್ ಅವರ ವಿಕೆಟ್ ಉರುಳಿಸಿದ್ದಾರೆ. ರಾಹುಲ್ 44 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 58 ರನ್ ಗಳಿಸಿ ಔಟಾದರು. ಪ್ರಸ್ತುತ, ನಿಕೋಲಸ್ ಪೂರನ್ ಅವರನ್ನು ಬೆಂಬಲಿಸಲು ಮಾರ್ಕಸ್ ಸ್ಟೊಯಿನಿಸ್ ಬಂದಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ 14 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 129 ರನ್ ಗಳಿಸಿದೆ. ತಂಡಕ್ಕೆ 36 ಎಸೆತಗಳಲ್ಲಿ 65 ರನ್‌ಗಳ ಅಗತ್ಯವಿದೆ. ಕೆಎಲ್ ರಾಹುಲ್ ಐಪಿಎಲ್ ವೃತ್ತಿಜೀವನದ 34ನೇ ಅರ್ಧಶತಕ ದಾಖಲಿಸಿದರು. ಸದ್ಯ ರಾಹುಲ್ 53 ರನ್ ಹಾಗೂ ನಿಕೋಲಸ್ ಪುರನ್ 35 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರ ನಡುವೆ 70ಕ್ಕೂ ಹೆಚ್ಚು ರನ್ ಗಳ ಜೊತೆಯಾಟ ನಡೆದಿದೆ.
12 ಓವರ್‌ಗಳಲ್ಲಿ ಲಕ್ನೋ ನಾಲ್ಕು ವಿಕೆಟ್ ಕಳೆದುಕೊಂಡು 102 ರನ್ ಗಳಿಸಿದೆ. ನಿಕೋಲಸ್ ಪೂರನ್ 15 ರನ್ ಮತ್ತು ಕೆಎಲ್ ರಾಹುಲ್ 46 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಇಬ್ಬರ ನಡುವೆ 40+ ರನ್‌ಗಳ ಜೊತೆಯಾಟ ನಡೆದಿದೆ. ಲಕ್ನೋಗೆ 48 ಎಸೆತಗಳಲ್ಲಿ 92 ರನ್ ಅಗತ್ಯವಿದೆ.
ಲಕ್ನೋ ಸೂಪರ್ ಜೈಂಟ್ಸ್ 11 ಓವರ್‌ಗಳ ಆಟದಲ್ಲಿ 4 ವಿಕೆಟ್ ನಷ್ಟದಲ್ಲಿ 93 ರನ್ ಗಳಿಸಿದೆ. ಕೆಎಲ್ ರಾಹುಲ್ 40 ರನ್ ಹಾಗೂ ನಿಕೋಲಸ್ ಪೂರನ್ 12 ರನ್ ಗಳಿಸಿ ಆಡುತ್ತಿದ್ದಾರೆ.
ಎಂಟನೇ ಓವರ್‌ನಲ್ಲಿ ಲಕ್ನೋ ತಂಡದ ನಾಲ್ಕನೇ ವಿಕೆಟ್ ಬಿದ್ದಿದೆ. ಯುಜ್ವೇಂದ್ರ ಚಹಾಲ್ ಪಂದ್ಯದ ಮೊದಲ ಓವರ್‌ನಲ್ಲಿ ದೀಪಕ್ ಹೂಡಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. 13 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಔಟಾದರು. ಎಂಟು ಓವರ್‌ಗಳ ನಂತರ ಲಕ್ನೋ ಸ್ಕೋರ್ ನಾಲ್ಕು ವಿಕೆಟ್‌ಗೆ 61 ರನ್ ಆಗಿದೆ. ಸದ್ಯ ನಿಕೋಲಸ್ ಪುರನ್ ಮತ್ತು ಕೆಎಲ್ ರಾಹುಲ್ ಕ್ರೀಸ್‌ನಲ್ಲಿದ್ದಾರೆ.
ಏಳು ಓವರ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮೂರು ವಿಕೆಟ್ ಕಳೆದುಕೊಂಡು 57 ರನ್ ಗಳಿಸಿದೆ. ದೀಪಕ್ ಹೂಡಾ 12 ಎಸೆತಗಳಲ್ಲಿ 26 ರನ್ ಗಳಿಸಿ ಕ್ರೀಸ್‌ನಲ್ಲಿದ್ದರೆ, ಕೆಎಲ್ ರಾಹುಲ್ 17 ಎಸೆತಗಳಲ್ಲಿ 17 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಲಕ್ನೋ ಗೆಲುವಿಗೆ 78 ಎಸೆತಗಳಲ್ಲಿ 137 ರನ್‌ಗಳ ಅಗತ್ಯವಿದೆ.
ಲಕ್ನೋ ಸೂಪರ್‌ಜೈಂಟ್ಸ್ ಮೊದಲ ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಕೇವಲ 11 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. 4 ರನ್ಗಳಿಗೆ ಕ್ವಿಂಟನ್ ಡಿ ಕಾಕ್ ಔಟಾದರೆ, ದೇವದತ್ ಪಡಿಕ್ಕಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಾಂದ್ರೆ ಬರ್ಗರ್ ಬಟ್ಲರ್ ಎಸೆತದಲ್ಲಿ ಆಯುಷ್ ಬದೋನಿ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ನಾಲ್ಕು ಓವರ್‌ಗಳ ನಂತರ ಲಕ್ನೋ ಸ್ಕೋರ್ ಮೂರು ವಿಕೆಟ್‌ಗೆ 22 ರನ್ ಆಗಿದೆ.
ಲಕ್ನೋ ಇನ್ನಿಂಗ್ಸ್ ಆರಂಭವಾಗಿದೆ. ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್‌ಗೆ ಬಂದರು. ಆದರೆ, ಮೊದಲ ಓವರ್ ನ ಐದನೇ ಎಸೆತದಲ್ಲಿ ಟ್ರೆಂಟ್ ಬೌಲ್ಟ್ ಡಿ ಕಾಕ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಡಿ ಕಾಕ್ ನಾಲ್ಕು ರನ್ ಗಳಿಸಿ ಔಟಾದರು. ಸದ್ಯ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಕ್ರೀಸ್‌ನಲ್ಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ಗೆ ರಾಜಸ್ಥಾನ್ ರಾಯಲ್ಸ್ 194 ರನ್‌ಗಳ ಗುರಿ ನೀಡಿದೆ. ರಾಜಸ್ಥಾನ ತಂಡ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು.ನಾಯಕತ್ವದ ಇನ್ನಿಂಗ್ಸ್ ಆಡಿದ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರನ್ನು ಹೊರತುಪಡಿಸಿ, ಧ್ರುವ್ ಜುರೆಲ್ 12 ಎಸೆತಗಳಲ್ಲಿ 20 ರನ್ ಗಳಿಸಿ ಅಜೇಯರಾಗಿ ಉಳಿದರು.
ರಾಜಸ್ಥಾನ್ ರಾಯಲ್ಸ್ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ. ನಾಯಕ ಸಂಜು ಸ್ಯಾಮ್ಸನ್ 72 ರನ್ ಹಾಗೂ ಧ್ರುವ್ ಜುರೆಲ್ 10 ರನ್ ಗಳಿಸಿ ಆಡುತ್ತಿದ್ದಾರೆ.
17ನೇ ಓವರ್‌ನಲ್ಲಿ ರಾಜಸ್ಥಾನ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ರವಿ ಬಿಷ್ಣೋಯ್ ಅವರು ಶಿಮ್ರಾನ್ ಹೆಟ್ಮೆಯರ್ ಅವರನ್ನು ಔಟ್ ಮಾಡಿದರು. 17 ಓವರ್‌ಗಳ ನಂತರ ರಾಜಸ್ಥಾನದ ಸ್ಕೋರ್ ನಾಲ್ಕು ವಿಕೆಟ್‌ಗೆ 158 ರನ್ ಆಗಿದೆ.
15ನೇ ಓವರ್‌ನಲ್ಲಿ ರಾಜಸ್ಥಾನದ ಮೂರನೇ ವಿಕೆಟ್ ಪತನವಾಯಿತು. ನವೀನ್ ಉಲ್ ಹಕ್ ಬೌಲಿಂಗ್ನಲ್ಲಿ ರಿಯಾನ್ ಪರಾಗ್ ಕ್ಯಾಚಿತ್ತು ಔಟಾದರು. ಪರಾಗ್ 29 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 43 ರನ್ ಗಳಿಸಿದರು. ನಾಯಕ ಸ್ಯಾಮ್ಸನ್ ಜೊತೆಗೂಡಿ 59 ಎಸೆತಗಳಲ್ಲಿ 93 ರನ್‌ಗಳ ಜೊತೆಯಾಟ ನೀಡಿದರು. ಸದ್ಯ, ಸ್ಯಾಮ್ಸನ್ ಅವರೊಂದಿಗೆ ಹೆಟ್ಮೆಯರ್ ಕ್ರೀಸ್‌ನಲ್ಲಿದ್ದಾರೆ. ಸ್ಯಾಮ್ಸನ್ ಅರ್ಧಶತಕ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. 15 ಓವರ್‌ಗಳ ನಂತರ ರಾಜಸ್ಥಾನದ ಸ್ಕೋರ್ ಮೂರು ವಿಕೆಟ್‌ಗೆ 143 ರನ್ ಆಗಿದೆ.
ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ ವೃತ್ತಿಜೀವನದ 21ನೇ ಅರ್ಧಶತಕ ದಾಖಲಿಸಿದ್ದಾರೆ. 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಲ್ಲದೇ ಅವರು ಇದುವರೆಗೆ ಮೂರನೇ ವಿಕೆಟ್‌ಗೆ ರಿಯಾನ್ ಪರಾಗ್ ಅವರೊಂದಿಗೆ 69 ರನ್‌ಗಳ ಜೊತೆಯಾಟವನ್ನು ಮಾಡಿದ್ದಾರೆ. 13 ಓವರ್‌ಗಳ ನಂತರ ರಾಜಸ್ಥಾನದ ಸ್ಕೋರ್ ಎರಡು ವಿಕೆಟ್‌ಗೆ 119 ರನ್ ಆಗಿದೆ.
10 ಓವರ್‌ಗಳಲ್ಲಿ ರಾಜಸ್ಥಾನ 2 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದೆ. ಸದ್ಯ ಸಂಜು ಸ್ಯಾಮ್ಸನ್ 35 ಹಾಗೂ ರಿಯಾನ್ ಪರಾಗ್ 17 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಇವರಿಬ್ಬರ ನಡುವೆ 40 ರನ್‌ಗಳ ಜೊತೆಯಾಟ ನಡೆದಿದೆ. ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಔಟಾಗಿದ್ದು, ಪೆವಿಲಿಯನ್‌ಗೆ ಮರಳಿದ್ದಾರೆ.
ರಾಜಸ್ಥಾನ ಬಿಗ್ ವಿಕೆಟ್ ಕಳೆದುಕೊಂಡಿದೆ.ಸ್ಫೋಟಕ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 12 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಎರಡನೇ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ನವೀನ್ ಉಲ್ ಹಕ್ ಅವರು ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದ್ದಾರೆ. ಸದ್ಯ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಕ್ರೀಸ್‌ನಲ್ಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಆರಂಭಿಸಿದೆ. ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಕ್ರೀಸ್‌ನಲ್ಲಿದ್ದಾರೆ.
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್ (ನಾಯಕ), ನಿಕೋಲಸ್ ಪೂರನ್, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ನವೀನ್-ಉಲ್-ಹಕ್, ರವಿ ಬಿಷ್ಣೋಯ್. ಯಶ್ ಠಾಕೂರ್, ಮೊಹ್ಸಿನ್ ಖಾನ್.
ಇಂಪ್ಯಾಕ್ಟ್ ಪ್ಲೇಯರ್: ದೀಪಕ್ ಹೂಡಾ, ಮಯಾಂಕ್ ಯಾದವ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಕೃಷ್ಣಪ್ಪ ಗೌತಮ್.
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರಯಾನ್ ಪರಾಗ್, ಧ್ರುವ್ ಜುರೆಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್, ಸಂದೀಪ್ ಶರ್ಮಾ.
ಇಂಪ್ಯಾಕ್ಟ್ ಪ್ಲೇಯರ್: ರೋವ್ಮನ್ ಪೊವೆಲ್, ನಾಂದ್ರೆ ಬರ್ಗರ್, ತನುಷ್ ಕೋಟ್ಯಾನ್, ಶುಭಂ ದುಬೆ ಮತ್ತು ಕುಲ್ದೀಪ್ ಸೇನ್.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಧ್ರುವ್ ಜುರೆಲ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ಟ್ರೆಂಟ್ ಬೌಲ್ಟ್.
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ದೀಪಕ್ ಹೂಡಾ, ಕೆಎಲ್ ರಾಹುಲ್ (ನಾಯಕ), ನಿಕೋಲಸ್ ಪೂರನ್, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ನವೀನ್-ಉಲ್-ಹಕ್, ಯಶ್ ಠಾಕೂರ್, ರವಿ ಬಿಷ್ಣೋಯಿ.
ಐಪಿಎಲ್ 2024ರ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯ ರಾಜಸ್ಥಾನದ ತವರು ಮೈದಾನ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
Published On - 2:50 pm, Sun, 24 March 24