
ಸೌತ್ ಆಫ್ರಿಕಾ ಟಿ20 ಲೀಗ್ನ ಮೂರನೇ ಸೀಸನ್ ಮುಕ್ತಾಯಕ್ಕೂ ಮುನ್ನವೇ ಮುಂದಿನ ಮೂರು ಸೀಸನ್ಗಳಿಗಾಗಿ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ SA20 ಲೀಗ್ ಸೀಸನ್-4 ಡಿಸೆಂಬರ್ 26 ರಿಂದ ಶುರುವಾಗಲಿದೆ. ಅಂದರೆ ಬಾಕ್ಸಿಂಗ್ ಡೇ ಮೂಲಕ ಮುಂಬರುವ ಸೀಸನ್ ಆರಂಭಿಸಲು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.
2026 ರಲ್ಲಿ ಟಿ20 ವಿಶ್ವಕಪ್ ನಡೆಯುವುದರಿಂದ ಡಿಸೆಂಬರ್-ಜನವರಿ ನಡುವೆ 4ನೇ ಸೀಸನ್ ಅನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಇದೇ ವರ್ಷಾಂತ್ಯದಲ್ಲಿ ಮತ್ತೆ ಸೌತ್ ಆಫ್ರಿಕಾ ಟಿ20 ಲೀಗ್ ನಡೆಯಲಿರುವುದು ವಿಶೇಷ.
ಈ ಮೂಲಕ ಪ್ರತಿ ಸೀಸನ್ಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ಗೂ ಮುಂಚಿತವಾಗಿ ಕೊನೆಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಸೌತ್ ಆಫ್ರಿಕಾ ಲೀಗ್ನ ಫ್ರಾಂಚೈಸಿಗಳು. ಅಂದರೆ ಸೌತ್ ಆಫ್ರಿಕಾ ಲೀಗ್ನಲ್ಲಿ ಕಣಕ್ಕಿಳಿಯುವ 6 ಫ್ರಾಂಚೈಸಿಗಳ ಮಾಲೀಕರು ಐಪಿಎಲ್ ತಂಡಗಳ ಓನರ್ಗಳು.
ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಡೇವಿಡ್ ವಾರ್ನರ್
ಎಲ್ಲಾ ತಂಡಗಳು ಐಪಿಎಲ್ ಫ್ರಾಂಚೈಸಿಗಳ ಒಡೆತನದಲ್ಲಿರುವ ಕಾರಣ ಸೌತ್ ಆಫ್ರಿಕಾ ಟಿ20 ಲೀಗ್ ಅನ್ನು ಮಿನಿ ಐಪಿಎಲ್ ಎಂದು ಬಣ್ಣಿಸಲಾಗುತ್ತದೆ. ಅಲ್ಲದೆ ಇದೇ ಕಾರಣದಿಂದಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ಈ ಟೂರ್ನಿಯನ್ನು ಆಯೋಜಿಸಲಾಗುತ್ತದೆ. ಅದರಂತೆ ಜನವರಿ 9 ರಿಂದ ಶುರುವಾಗಿರುವ ಸೌತ್ ಆಫ್ರಿಕಾ ಟಿ20 ಲೀಗ್ನ ಮೂರನೇ ಸೀಸನ್ ಫೆಬ್ರವರಿ 8 ರಂದು ಕೊನೆಗೊಳ್ಳಲಿದೆ.
Published On - 8:26 am, Tue, 4 February 25