ತ್ರಿಕೋನ ಸರಣಿಗೆ ವೇದಿಕೆ ಸಜ್ಜು: ಸೌತ್ ಆಫ್ರಿಕಾ vs ನ್ಯೂಝಿಲೆಂಡ್ vs ಪಾಕಿಸ್ತಾನ್ ಮುಖಾಮುಖಿ
Champions Trophy 2025: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮೂರು ದೇಶಗಳ ನಡುವಣ ತ್ರಿಕೋನ ಸರಣಿ ಏರ್ಪಡಿಸುತ್ತಿದೆ. ಏಕದಿನ ಸ್ವರೂಪದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಆತಿಥೇಯ ಪಾಕಿಸ್ತಾನ್ ತಂಡದ ಜೊತೆ ನ್ಯೂಝಿಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ಕಣಕ್ಕಿಳಿಯಲಿವೆ.

ಕ್ರಿಕೆಟ್ ಅಂಗಳದಲ್ಲಿ ತ್ರಿಕೋನ ಸರಣಿಗಳು ಮರೆಯಾಗಿ ವರ್ಷಗಳೇ ಕಳೆದಿವೆ. ಅದರಲ್ಲೂ ಟೀಮ್ ಇಂಡಿಯಾ ತ್ರಿಕೋನ ಸರಣಿಯಲ್ಲಿ ಕಾಣಿಸಿಕೊಂಡು ದಶಕ ಕಳೆದಿದೆ. ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ತ್ರಿಕೋನ ಸರಣಿ ಇದೀಗ ಮತ್ತೆ ಬರುತ್ತಿದೆ. ಈ ಬಾರಿ ಮುಖಾಮುಖಿಗುತ್ತಿರುವುದು ಪಾಕಿಸ್ತಾನ್, ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು.
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಈ ತ್ರಿಕೋನ ಸರಣಿಯು ಫೆಬ್ರವರಿ 8 ರಿಂದ ಶುರುವಾಗಲಿದೆ. ಏಕದಿನ ಸ್ವರೂಪದಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಇನ್ನು ಫೆಬ್ರವರಿ 10 ರಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಲಿದೆ. ಫೆಬ್ರವರಿ 12 ರಂದು ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ.
ಈ ಪಂದ್ಯಗಳಲ್ಲಿ ಅತ್ಯಧಿಕ ಮ್ಯಾಚ್ ಗೆದ್ದ ತಂಡಗಳು ಅಥವಾ ಉತ್ತಮ ನೆಟ್ ರೇಟ್ ಪಡೆದ ಟೀಮ್ಗಳು ಫೈನಲ್ ಪಂದ್ಯಗಳನ್ನಾಡಲಿದೆ. ಅದರಂತೆ ಫೆಬ್ರವರಿ 14 ರಂದು ತ್ರಿಕೋನ ಸರಣಿಯ ಅಂತಿಮ ಮ್ಯಾಚ್ ಜರುಗಲಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಾಸ್ಟರ್ ಪ್ಲ್ಯಾನ್:
ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಅದಕ್ಕೂ ಮುನ್ನ ತ್ರಿಕೋನ ಸರಣಿ ಆಯೋಜಿಸಿ ಭರ್ಜರಿ ತಯಾರಿಸಲು ನಡೆಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ತ್ರಿಕೋನ ಸರಣಿಯಲ್ಲಿ ಕಣಕ್ಕಿಳಿಯುವ ತಂಡಗಳು:
ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್ಗಿಡಿ, ಅನ್ರಿಕ್ ನೋಕಿಯ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್, ತಬ್ರೇಝ್ ಶಂಸಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟ್ರಿಸ್ಟನ್ ಸ್ಟಬ್ಸ್.
ನ್ಯೂಝಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಡೆವೊನ್ ಕಾನ್ವೆ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ವಿಲ್ ಯಂಗ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ನಾಥನ್ ಸ್ಮಿತ್, ಲಾಕಿ ಫರ್ಗುಸನ್, ಬೆನ್ ಸೀರ್ಸ್ , ವಿಲಿಯಂ ಒರೋಕ್, ಮ್ಯಾಟ್ ಹೆನ್ರಿ, ಮೈಕೆಲ್ ಬ್ರೇಸ್ವೆಲ್.
ಪಾಕಿಸ್ತಾನ್ ತಂಡ: ಬಾಬರ್ ಆಝಂ, ಫಖರ್ ಝಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಸಲ್ಮಾನ್ ಅಲಿ ಅಘಾ (ಉಪನಾಯಕ), ಮೊಹಮ್ಮದ್ ರಿಝ್ವಾನ್ (ನಾಯಕ), ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ.
ಇದನ್ನೂ ಓದಿ: ಆ್ಯಂಡ್ರೆ ರಸೆಲ್ ಆರ್ಭಟಕ್ಕೆ ಮ್ಯಾಕ್ಸ್ವೆಲ್ ವಿಶ್ವ ದಾಖಲೆ ಉಡೀಸ್
ಪಾಕಿಸ್ತಾನ್ ತ್ರಿಕೋನ ಸರಣಿ ವೇಳಾಪಟ್ಟಿ:
- ಫೆಬ್ರವರಿ 8, ಶನಿವಾರ – ಪಾಕಿಸ್ತಾನ್ vs ನ್ಯೂಝಿಲೆಂಡ್ – ಮಧ್ಯಾಹ್ನ 2:30 IST – ಗಡಾಫಿ ಕ್ರೀಡಾಂಗಣ, ಲಾಹೋರ್.
- ಫೆಬ್ರವರಿ 10, ಸೋಮವಾರ – ನ್ಯೂಝಿಲೆಂಡ್ vs ಸೌತ್ ಆಫ್ರಿಕಾ – ಬೆಳಿಗ್ಗೆ 10:00 IST – ಗಡಾಫಿ ಕ್ರೀಡಾಂಗಣ, ಲಾಹೋರ್.
- ಫೆಬ್ರವರಿ 12, ಬುಧವಾರ – ಪಾಕಿಸ್ತಾನ್ vs ಸೌತ್ ಆಫ್ರಿಕಾ – ಮಧ್ಯಾಹ್ನ 2:30 IST – ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ.
- ಫೆಬ್ರವರಿ 14, ಶುಕ್ರವಾರ – ಫೈನಲ್ – ಮಧ್ಯಾಹ್ನ 2:30 IST – ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ.
Published On - 9:55 am, Tue, 4 February 25