AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್ ಆಫ್ರಿಕಾ ಟಿ20 ಲೀಗ್​ನ ಮುಂದಿನ ಮೂರು ಸೀಸನ್​ಗಳಿಗೆ ದಿನಾಂಕ ನಿಗದಿ

SA20 2025: ಸೌತ್ ಆಫ್ರಿಕಾ ಟಿ20 ಲೀಗ್​ನ ಮೂರನೇ ಸೀಸನ್ ನಡೆಯುತ್ತಿದ್ದು, ಈ ಟೂರ್ನಿಯ ಫೈನಲ್ ಪಂದ್ಯವು ಫೆಬ್ರವರಿ 8 ರಂದು ಜರುಗಲಿದೆ. ವಿಶೇಷ ಎಂದರೆ ಈ ಲೀಗ್​ನಲ್ಲಿ ಕಣಕ್ಕಿಳಿಯುತ್ತಿರುವ ಎಲ್ಲಾ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್​ ಫ್ರಾಂಚೈಸಿಗಳ ಒಡೆತನದಲ್ಲಿದೆ. ಹೀಗಾಗಿಯೇ ಇದನ್ನು ಮಿನಿ ಐಪಿಎಲ್ ಎಂದು ಬಣ್ಣಿಸಲಾಗುತ್ತದೆ.

ಸೌತ್ ಆಫ್ರಿಕಾ ಟಿ20 ಲೀಗ್​ನ ಮುಂದಿನ ಮೂರು ಸೀಸನ್​ಗಳಿಗೆ ದಿನಾಂಕ ನಿಗದಿ
Sa20
ಝಾಹಿರ್ ಯೂಸುಫ್
|

Updated on:Feb 04, 2025 | 8:26 AM

Share

ಸೌತ್ ಆಫ್ರಿಕಾ ಟಿ20 ಲೀಗ್​​ನ ಮೂರನೇ ಸೀಸನ್​ ಮುಕ್ತಾಯಕ್ಕೂ ಮುನ್ನವೇ ಮುಂದಿನ ಮೂರು ಸೀಸನ್​​ಗಳಿಗಾಗಿ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ SA20 ಲೀಗ್ ಸೀಸನ್-4 ಡಿಸೆಂಬರ್ 26 ರಿಂದ ಶುರುವಾಗಲಿದೆ. ಅಂದರೆ ಬಾಕ್ಸಿಂಗ್​ ಡೇ ಮೂಲಕ ಮುಂಬರುವ ಸೀಸನ್​ ಆರಂಭಿಸಲು ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.

  • ಸೌತ್ ಆಫ್ರಿಕಾ ಟಿ20 ಲೀಗ್​ನ 4ನೇ ಸೀಸನ್ ಡಿಸೆಂಬರ್ 26, 2025 ರಂದು ಪ್ರಾರಂಭವಾಗಿ ಜನವರಿ 26, 2026 ರವರೆಗೆ ನಡೆಯಲಿದೆ.

2026 ರಲ್ಲಿ ಟಿ20 ವಿಶ್ವಕಪ್ ನಡೆಯುವುದರಿಂದ ಡಿಸೆಂಬರ್-ಜನವರಿ ನಡುವೆ 4ನೇ ಸೀಸನ್ ಅನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಇದೇ ವರ್ಷಾಂತ್ಯದಲ್ಲಿ ಮತ್ತೆ ಸೌತ್ ಆಫ್ರಿಕಾ ಟಿ20 ಲೀಗ್ ನಡೆಯಲಿರುವುದು ವಿಶೇಷ.

  • ಸೌತ್ ಆಫ್ರಿಕಾ ಟಿ20 ಲೀಗ್​ನ 5ನೇ ಸೀಸನ್ ಜನವರಿ 9 ರಿಂದ ಫೆಬ್ರವರಿ 14, 2027 ರವರೆಗೆ ನಡೆಯಲಿದೆ. ಅಂದರೆ ಹೀಗಿನಂತೆ ಮತ್ತೆ ಜನವರಿ-ಫೆಬ್ರವರಿ ನಡುವೆ ಟೂರ್ನಿ ಆಯೋಜಿಸಲಿದ್ದಾರೆ.
  • ಸೌತ್ ಆಫ್ರಿಕಾ ಟಿ20 ಲೀಗ್​ನ 6ನೇ ಸೀಸನ್​ ಕೂಡ ಜನವರಿ 9 ರಿಂದ ಶುರುವಾಗಲಿದ್ದು, ಫೆಬ್ರವರಿ 13, 2028 ರವರೆಗೆ ನಡೆಯಲಿದೆ.

ಈ ಮೂಲಕ ಪ್ರತಿ ಸೀಸನ್​ಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಮುಂಚಿತವಾಗಿ ಕೊನೆಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಸೌತ್ ಆಫ್ರಿಕಾ ಲೀಗ್​ನ ಫ್ರಾಂಚೈಸಿಗಳು. ಅಂದರೆ ಸೌತ್ ಆಫ್ರಿಕಾ ಲೀಗ್​ನಲ್ಲಿ ಕಣಕ್ಕಿಳಿಯುವ 6 ಫ್ರಾಂಚೈಸಿಗಳ ಮಾಲೀಕರು ಐಪಿಎಲ್​ ತಂಡಗಳ ಓನರ್​ಗಳು.

ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಕಣಕ್ಕಿಳಿಯುವ ತಂಡಗಳು ಮತ್ತು ಮಾಲೀಕರು:

  1. ಸನ್​ರೈಸರ್ಸ್ ಈಸ್ಟರ್ನ್ ಕೇಪ್ (ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ)
  2. ಎಂಐ ಕೇಪ್​ಟೌನ್ (ಮುಂಬೈ ಇಂಡಿಯನ್ಸ್ ಫ್ರಾಂಚೈಸಿ)
  3. ಜೋಬರ್ಗ್​ ಸೂಪರ್ ಕಿಂಗ್ಸ್ (ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ)
  4. ಪಾರ್ಲ್ ರಾಯಲ್ಸ್ (ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ)
  5. ಡರ್ಬನ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ)
  6. ಪ್ರಿಟೋರಿಯಾ ಕ್ಯಾಪಿಟಲ್ಸ್ (ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ)

ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಡೇವಿಡ್ ವಾರ್ನರ್

ಎಲ್ಲಾ ತಂಡಗಳು ಐಪಿಎಲ್ ಫ್ರಾಂಚೈಸಿಗಳ ಒಡೆತನದಲ್ಲಿರುವ ಕಾರಣ ಸೌತ್ ಆಫ್ರಿಕಾ ಟಿ20 ಲೀಗ್​ ಅನ್ನು ಮಿನಿ ಐಪಿಎಲ್ ಎಂದು ಬಣ್ಣಿಸಲಾಗುತ್ತದೆ. ಅಲ್ಲದೆ ಇದೇ ಕಾರಣದಿಂದಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ಈ ಟೂರ್ನಿಯನ್ನು ಆಯೋಜಿಸಲಾಗುತ್ತದೆ. ಅದರಂತೆ ಜನವರಿ 9 ರಿಂದ ಶುರುವಾಗಿರುವ ಸೌತ್ ಆಫ್ರಿಕಾ ಟಿ20 ಲೀಗ್​ನ ಮೂರನೇ ಸೀಸನ್ ಫೆಬ್ರವರಿ 8 ರಂದು ಕೊನೆಗೊಳ್ಳಲಿದೆ.

Published On - 8:26 am, Tue, 4 February 25

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ