ಶ್ರೀಲಂಕಾದ ಮಾಜಿ ಅನುಭವಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಪ್ರಸ್ತುತ ಓಮನ್‌ನ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದ ಮುರಳೀಧರನ್ ಅವರಿಗೆ ಕೆಲ ಪ್ರಶ್ನೆಗಳನ್ನು ಮುಂದಿಡಲಾಗಿತ್ತು. ಅದರಲ್ಲಿ ಟೀಮ್ ಇಂಡಿಯಾದ ಮಾಜಿ ಆರಂಭಿಕರ ಬಗ್ಗೆ ಕೂಡ ಕೇಳಲಾಗಿತ್ತು. ಸಚಿನ್ ತೆಂಡೂಲ್ಕರ್ ಅಥವಾ ವೀರೇಂದ್ರ ಸೆಹ್ವಾಗ್ ನಿಮಗೆ ಬೌಲಿಂಗ್ ಮಾಡಲು ಯಾರಿಗೆ ಸುಲಭವಾಗುತ್ತಿತ್ತು ಎಂದು ಸ್ಪಿನ್ ಮಾಂತ್ರಿಕನಿಗೆ ಪ್ರಶ್ನಿಸಲಾಗಿತ್ತು.
ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ ಶ್ರೀಲಂಕಾದ ಸ್ಪಿನ್ ದಿಗ್ಗಜ ಮುರಳೀಧರನ್, ನನಗೆ ಸಚಿನ್ ಅವರಿಗೆ ಬೌಲಿಂಗ್ ಮಾಡುವುದು ಸುಲಭವಾಗಿತ್ತು ಎಂದರು. ಈ ಮೂಲಕ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರಿಗೆ ಚೆಂಡೆಸೆಯುವುದು ಸವಾಲಾಗಿತ್ತು ಎಂಬುದನ್ನು ಮುತ್ತಯ್ಯ ಮುರಳೀಧರನ್ ತಿಳಿಸಿದ್ದಾರೆ. ಇದೇ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ ನೀವು ಮಾಡಿರುವ 800 ವಿಕೆಟ್ ದಾಖಲೆ ಅಥವಾ ಏಕದಿನ ಕ್ರಿಕೆಟ್ನಲ್ಲಿನ 500 ವಿಕೆಟ್ಗಳ ದಾಖಲೆಯನ್ನು ಯಾರು ಮುರಿಯಬಲ್ಲರು ಎಂದು ಪ್ರಶ್ನಿಸಲಾಗಿತ್ತು.
ಇದಕ್ಕೂ ಮುತ್ತಯ್ಯ ಮುರಳೀಧರನ್ ಅವರ ಕಡೆಯಿಂದ ಬಂದ ಉತ್ತರ ಟೀಮ್ ಇಂಡಿಯಾ ಆಟಗಾರ ಎಂಬುದಾಗಿತ್ತು. ಹೌದು, ಪ್ರಸ್ತುತ ಆಡುತ್ತಿರುವ ಆಟಗಾರರಲ್ಲಿ ಅಶ್ವಿನ್ ಅವರು ನನ್ನ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದರು.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಮುತ್ತಯ್ಯ ಮುರಳೀಧರನ್ ಏಷ್ಯಾ ಲಯನ್ಸ್ ತಂಡದ ಪರ ಆಡುತ್ತಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮುರಳೀಧರನ್ 3 ವಿಕೆಟ್ ಪಡೆದಿದ್ದಾರೆ. ಮುರಳೀಧರನ್ ನೇತೃತ್ವದ ಏಷ್ಯಾ ಲಯನ್ಸ್ ತಂಡ ಈ ಬಾರಿಯ ಟಿ20 ಲೀಗ್‌ನಲ್ಲಿ 4 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಎರಡರಲ್ಲಿ ಸೋತಿದೆ.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(sachin tendulkar or virender sehwag? muttiah muralitharan answers who easier to bowl)
Published On - 8:19 pm, Thu, 27 January 22