Ravichandran Ashwin: ಇಂಗ್ಲೆಂಡ್ ವಿರುದ್ಧ ಅಶ್ವಿನ್​ರನ್ನು ಆಡಿಸದ ಬಗ್ಗೆ ಕೊಹ್ಲಿ-ಶಾಸ್ತ್ರಿಗೆ ಮೆದುಳಿಲ್ಲ ಎಂದ ಪಾಕ್ ಕ್ರಿಕೆಟಿಗ

| Updated By: Vinay Bhat

Updated on: Dec 07, 2021 | 11:56 AM

Salman Butt: ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆ ರವಿಚಂದ್ರನ್ ಅಶ್ವಿನ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡದ ಬಗ್ಗೆ ಸಲ್ಮಾನ್ ಬಟ್ ಪ್ರತಿಕ್ರಿಯಿಸಿದ್ದು, ಅವರಿಗೆ ಮೆದುಳು ಇರಲಿಲ್ಲ ಹಾಗೂ ಈ ಪ್ರಶ್ನೆಗೆ ಆಗಿನ ಟೀಮ್ ಮ್ಯಾನೇಜ್ಮೆಂಟ್ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

Ravichandran Ashwin: ಇಂಗ್ಲೆಂಡ್ ವಿರುದ್ಧ ಅಶ್ವಿನ್​ರನ್ನು ಆಡಿಸದ ಬಗ್ಗೆ ಕೊಹ್ಲಿ-ಶಾಸ್ತ್ರಿಗೆ ಮೆದುಳಿಲ್ಲ ಎಂದ ಪಾಕ್ ಕ್ರಿಕೆಟಿಗ
Salman Butt and Virat Kohli
Follow us on

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಟೀಮ್ ಇಂಡಿಯಾ (Team India) ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ ಮೊತ್ತದ ಗೆಲುವು ಕಂಡು ಟೆಸ್ಟ್ ರ್ಯಾಂಕಿಂಗ್​ನಲ್ಲಿ ನಂಬರ್ ಒನ್ ಪಟ್ಟಕ್ಕೇರಿದೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ರವಿಚಂದ್ರನ್ ಅಶ್ವಿನ್ (Ravichandran Ashwin) ಸರಣಿಶ್ರೇಷ್ಠ ಪ್ರಶಸ್ತಿಯನ್ನು ಬಾಜಿಕೊಂಡರು. ಅವಕಾಶ ನೀಡಿದಾಗೆಲ್ಲ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವ ಆರ್. ಅಶ್ವಿನ್ (R. Ashwin) ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಾತ್ರ ಕಣಕ್ಕಿಳಿಯಲಿಲ್ಲ. ತಂಡದಲ್ಲಿ ಸ್ಥಾನ ಪಡೆದಿದ್ದರೂ ಇವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಲಿಲ್ಲ. ಈ ಬಗ್ಗೆ ಆಗ ಸಾಕಷ್ಟು ಆಕ್ರೋಶಗಳು ಕೇಳಿಬಂದಿದ್ದವು. ಸದ್ಯ ಇದೇ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ (Pakistan Cricket) ತಂಡದ ಮಾಜಿ ನಾಯಕ ಸಲ್ಮಾನ್ ಬಟ್ (Salman Butt) ಮಾತನಾಡಿದ್ದಾರೆ.

ಕಳೆದ ಇಂಗ್ಲೆಂಡ್‌ ಟೆಸ್ಟ್ ಸರಣಿ ವೇಳೆ ಆರ್‌ ಅಶ್ವಿನ್‌ಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಯಾಕೆ ನೀಡಲಾಗಿರಲಿಲ್ಲ ಎಂದು ಅಭಿಮಾನಿಯೊಬ್ಬರು ಸಲ್ಮಾನ್‌ ಬಟ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಪಾಕ್‌ ಮಾಜಿ ನಾಯಕ, ಅವರ ತಲೆಯಲ್ಲಿ ಮೆದುಳು ಇರಲಿಲ್ಲ ಹಾಗೂ ಈ ಪ್ರಶ್ನೆಗೆ ಆಗಿನ ಟೀಮ್‌ ಮ್ಯಾನೇಜ್‌ಮೆಂಟ್ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

“ಅಶ್ವಿನ್​ರನ್ನು ಆಡಿಸದ ಬಗ್ಗೆ ನಾನು ಏನು ಹೇಳಬಹುದು?. ಅವರು ಆಡಬೇಕೆಂದು ನಾವು ಪದೇ-ಪದೆ ಹೇಳುತ್ತಲೇ ಇದ್ದೆವು. ಈಗಲೂ ನಾನು ಹೇಳುತ್ತೇನೆ, ಇತರರಿಗಿಂತ ಅಶ್ವಿನ್ ಒಬ್ಬ ಅತ್ಯುತ್ತಮ ಸ್ಪಿನ್ನರ್‌, ಅವರಲ್ಲಿ ಒಂದು ಸ್ಕಿಲ್ ಇದೆ. ಪ್ರಸ್ತುತ ಸನ್ನಿವೇಶದಲ್ಲಿ ಅವರು ಅದ್ಭುತ ಸ್ಪಿನ್ನರ್‌. ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಅವರು ಯಾಕೆ ಆಡಲಿಲ್ಲ? ರವಿ ಶಾಸ್ತ್ರಿ ಹಾಗೂ ನಾಯಕ ವಿರಾಟ್‌ ಕೊಹ್ಲಿ ಇದಕ್ಕೆ ಸೂಕ್ತ ಉತ್ತರ ನೀಡಬಹುದು. ತಂಡದಲ್ಲಿ ಅವರಿಗೆ ಆಡಲು ಅವಕಾಶ ಸಿಕ್ಕಾಗೆಲ್ಲ ಗೆಲುವಿಗಾಗಿ ಹೋರಾಡಿದ್ದಾರೆ. ಅವರ ಉಪಸ್ಥಿತಿ ತಂಡದಲ್ಲಿ ಹೆಚ್ಚಿನ ವಿಭಿನ್ನತೆಯನ್ನು ತಂದುಕೊಡುತ್ತದೆ”, ಎಂದು ಸಲ್ಮಾನ್‌ ಬಟ್‌ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 8 ರನ್​ಗೆ 4 ವಿಕೆಟ್ ಪಡೆದು ಕಿವೀಸ್ ಪಡೆಗೆ ಮಾರಕವಾಗಿದ್ದ ಆರ್ ಅಶ್ವಿನ್ ಎರಡನೇ ಇನ್ನಿಂಗ್ಸ್​ನಲ್ಲೂ 4 ವಿಕೆಟ್ ಪಡೆದು ಎದುರಾಳಿಗಳಿಗೆ ಮಗ್ಗುಲಮುಳ್ಳಾಗಿ ಕಾಡಿದರು. ಅಲ್ಲದೇ ಹಲವು ದಾಖಲೆ, ಮೈಲಿಗಲ್ಲುಗಳನ್ನ ಮುಟ್ಟಿದರು. ಅಶ್ವಿನ್ ಅವರು 2021ರಲ್ಲಿ 50 ಟೆಸ್ಟ್ ವಿಕೆಟ್ ಕಿತ್ತ ಸಾಧನೆ ಮಾಡಿದರು. ಒಂದು ವರ್ಷದಲ್ಲಿ 50 ವಿಕೆಟ್ ಪಡೆದ ಸಾಧನೆಯನ್ನ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಮಾಡಿದ್ದಾರೆ. ಈ ಮೂಲಕ ಅತೀ ಹೆಚ್ಚು ಬಾರಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 50 ಕ್ಕಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ ಭಾರತೀಯರ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಮೊದಲ ಸ್ಥಾನಕ್ಕೇರಿದರು.

ಇದರ ಜೊತೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಆರ್ ಅಶ್ವಿನ್ 66 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ವೇಗಿ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆಯನ್ನೂ ಮುರಿದರು. ಹ್ಯಾಡ್ಲಿ ದಾಖಲೆ ಬಗ್ಗೆ ಕುತೂಹಲ ಅಂಶ ಎಂದರೆ, ರಿಚರ್ಡ್ ಹ್ಯಾಡ್ಲಿ ಅವರು ಭಾರತ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ 65 ವಿಕೆಟ್ ಪಡೆಯಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ, ಆರ್ ಅಶ್ವಿನ್ ಅವರು ಕೇವಲ 17 ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದಾರೆ.

IND vs NZ Test: ವಾಂಖೆಡೆ ಪಿಚ್ ಸಿದ್ಧಪಡಿಸಿದ ಗ್ರೌಂಡ್ಸ್​ಮೆನ್​ಗೆ ಟೀಮ್ ಇಂಡಿಯಾ ಕೊಟ್ಟ ಉಡುಗೊರೆ ಏನು ಗೊತ್ತಾ?

India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ: ಆಯ್ಕೆಯಾಗಲಿರುವ 15 ಆಟಗಾರರು ಯಾರೆಲ್ಲ ಗೊತ್ತೇ?

(Salman Butt Said Only Virat Kohli and Shastri can answer why Ravichandran Ashwin Not Playing Against England)