T20 World Cup: ಚಪ್ಪಾಳೆ ತಟ್ಟಿ ಪಾಕ್ ತಂಡಕ್ಕೆ ಸಾನಿಯಾ ಮಿರ್ಜಾ ಬೆಂಬಲ; ಭಾರತ ಬಿಟ್ಟು ತೊಲಗಿ ಎಂದ ನೆಟ್ಟಿಗರು

| Updated By: ಪೃಥ್ವಿಶಂಕರ

Updated on: Nov 12, 2021 | 5:44 PM

T20 World Cup: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಈ ಕಾರಣಕ್ಕೆ ಕ್ರೀಡಾಂಗಣಕ್ಕೆ ಬಂದಿರಲಿಲ್ಲ. ಈ ಪಂದ್ಯ ಮುಗಿಯುವವರೆಗೂ ಸೋಷಿಯಲ್ ಮೀಡಿಯಾದಿಂದ ದೂರ ಇರುವುದಾಗಿ ಪಂದ್ಯಕ್ಕೂ ಒಂದು ದಿನ ಮೊದಲು ಟ್ವೀಟ್ ಮಾಡುವ ಮೂಲಕ ಹೇಳಿದ್ದರು.

T20 World Cup: ಚಪ್ಪಾಳೆ ತಟ್ಟಿ ಪಾಕ್ ತಂಡಕ್ಕೆ ಸಾನಿಯಾ ಮಿರ್ಜಾ ಬೆಂಬಲ; ಭಾರತ ಬಿಟ್ಟು ತೊಲಗಿ ಎಂದ ನೆಟ್ಟಿಗರು
ಸಾನಿಯಾ ಮಿರ್ಜಾ
Follow us on

ಪಾಕಿಸ್ತಾನದ ಸೋಲಿನಿಂದಾಗಿ ತಂಡದ ಅಭಿಮಾನಿಗಳು ತುಂಬಾ ನಿರಾಸೆ ಮತ್ತು ಕೋಪಗೊಂಡಿದ್ದಾರೆ. ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ತಂಡ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಅವರು ಪಂದ್ಯಾವಳಿಯಿಂದ ಹೊರಬಿದ್ದರು. ಪಾಕಿಸ್ತಾನವನ್ನು ಸೋಲಿಸಿ ಆಸ್ಟ್ರೇಲಿಯಾ ಫೈನಲ್‌ಗೆ ಟಿಕೆಟ್ ಪಡೆದಿದೆ. ಆದರೆ ಪಾಕ್ ತಂಡವನ್ನು ಬೆಂಬಲಿಸಿದಕ್ಕಾಗಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ರೋಲ್​ಗೆ ಗುರಿಯಾಗಿದ್ದಾರೆ.

ಸಾನಿಯಾ ಮಿರ್ಜಾ ಅವರು ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಭಾಗವಾಗಿದ್ದ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ಪತ್ನಿ. ಪಂದ್ಯಾವಳಿಯ ಸಂದರ್ಭದಲ್ಲಿ ಸಾನಿಯಾ ಯುಎಇಯಲ್ಲಿದ್ದು ಪಾಕಿಸ್ತಾನದ ಪಂದ್ಯಗಳಲ್ಲಿ ತನ್ನ ಪತಿಯನ್ನು ಹುರಿದುಂಬಿಸಲು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆಯೂ ಅವರು ಕ್ರೀಡಾಂಗಣದಲ್ಲಿ ಹಾಜರಿದ್ದರು. ಹೀಗಿರುವಾಗ ಪಾಕಿಸ್ತಾನ ತಂಡ ಸೋತ ತಕ್ಷಣ ಸಾನಿಯಾ ಮಿರ್ಜಾ ಅವರನ್ನು ಟ್ರೋಲ್ ಮಾಡಲು ನೆಟ್ಟಿಗರು ಹಿಂದೇಟು ಹಾಕಲಿಲ್ಲ.

ಸಾನಿಯಾ ಮಿರ್ಜಾ ಟ್ರೋಲ್
ಪಂದ್ಯದ ವೇಳೆ ಸಾನಿಯಾ ಮಿರ್ಜಾ ಆಸ್ಟ್ರೇಲಿಯಾದ ವಿಕೆಟ್ ಪತನದ ಸಂಭ್ರಮದಲ್ಲಿ ಪಾಕ್ ತಂಡವನ್ನು ಬೆಂಬಲಿಸಿ ಚಪ್ಪಾಳಿ ತಟ್ಟಿ ಹುರಿದುಂಬಿದರು. ಆದರೆ ಇದನ್ನು ಕಂಡ ಭಾರತೀಯ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿತ್ತು. ಸಾನಿಯಾ ಬಗ್ಗೆ ಹಲವು ಮೀಮ್ಸ್ ಮಾಡಿ ಈ ಟೆನಿಸ್ ತಾರೆ ಭಾರತ ಬಿಟ್ಟು ಪಾಕಿಸ್ತಾನದಲ್ಲಿ ನೆಲೆಯೂರಲಿ ಎಂದಿದ್ದಾರೆ. ಅನೇಕ ಅಭಿಮಾನಿಗಳು ಅವರನ್ನು ಉಪ್ಪಿನಕಾಯಿ ಎಂದೂ ಕರೆದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಈ ಕಾರಣಕ್ಕೆ ಕ್ರೀಡಾಂಗಣಕ್ಕೆ ಬಂದಿರಲಿಲ್ಲ. ಈ ಪಂದ್ಯ ಮುಗಿಯುವವರೆಗೂ ಸೋಷಿಯಲ್ ಮೀಡಿಯಾದಿಂದ ದೂರ ಇರುವುದಾಗಿ ಪಂದ್ಯಕ್ಕೂ ಒಂದು ದಿನ ಮೊದಲು ಟ್ವೀಟ್ ಮಾಡುವ ಮೂಲಕ ಹೇಳಿದ್ದರು.