ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಈ ಜನರೇಷನ್ನ ಬೆಸ್ಟ್ ಟೆಸ್ಟ್ ಇಲೆವೆನ್ ಹೆಸರಿಸಿದ್ದಾರೆ. ವಿಶ್ವದ ಪ್ರಮುಖ ಆಟಗಾರರನ್ನು ಒಳಗೊಂಡ ಈ ತಂಡದಲ್ಲಿ ಭಾರತದ 7 ಆಟಗಾರರಿರುವುದು ವಿಶೇಷ. ಅಚ್ಚರಿ ಎಂದರೆ ಈ ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ಗಳಾದ ಇಂಗ್ಲೆಂಡ್ನ ಜೋ ರೂಟ್ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ಗೆ ಸ್ಥಾನ ಕಲ್ಪಿಸಲಾಗಿಲ್ಲ.
ಈ ತಂಡಕ್ಕೆ ಆರಂಭಿಕ ಜೋಡಿಯಾಗಿ ಸಂಜಯ್ ಬಂಗಾರ್ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾ ದಾಂಡಿಗ ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ನ್ಯೂಝಿಲೆಂಡ್ನ ಕೇನ್ ವಿಲಿಯಮ್ಸನ್ ಅವರನ್ನು ಹೆಸರಿಸಿರುವ ಬಂಗಾರ್, ನಾಲ್ಕನೇ ಕ್ರಮಾಂಕಕ್ಕೆ ವಿರಾಟ್ ಕೊಹ್ಲಿಯನ್ನು ಸೂಚಿಸಿದ್ದಾರೆ. ಕಿಂಗ್ ಕೊಹ್ಲಿ ಟೆಸ್ಟ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲೇ ಆಡುತ್ತಿರುವುದರಿಂದ ಅವರನ್ನು ಅದೇ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಆಗಿ ಈ ತಂಡದಲ್ಲಿ ರಿಷಭ್ ಪಂತ್ಗೆ ಸ್ಥಾನ ನೀಡಲಾಗಿದೆ. ಆರನೇ ಕ್ರಮಾಂಕದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಹೆಸರಿಸಿದ್ದಾರೆ. ಅಲ್ಲದೆ ಏಳನೇ ಕ್ರಮಾಂಕದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದಾರೆ. 8ನೇ ಸ್ಥಾನದಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಿದ್ದಾರೆ.
ಇನ್ನು ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಝಲ್ವುಡ್ ಅವರನ್ನು ಹೆಸರಿಸಿದ್ದಾರೆ. ಅದರಂತೆ ಸಂಜಯ್ ಬಂಗಾರ್ ಹೆಸರಿಸಿರುವ ಈ ಪೀಳಿಗೆಯ ಬೆಸ್ಟ್ ಟೆಸ್ಟ್ ಇಲೆವೆನ್ ಈ ಕೆಳಗಿನಂತಿದೆ…
ಸಂಜಯ್ ಬಂಗಾರ್ ಅವರು ಟೀಮ್ ಇಂಡಿಯಾ ಪರ 27 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 12 ಟೆಸ್ಟ್ ಪಂದ್ಯಗಳಲ್ಲಿ 18 ಇನಿಂಗ್ಸ್ ಆಡಿರುವ ಅವರು ಒಟ್ಟು 470 ರನ್ ಕಲೆಹಾಕಿದ್ದಾರೆ. ಹಾಗೆಯೇ 7 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಇನ್ನು 15 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಸಂಜಯ್ ಬಂಗಾರ್ ಒಂದು ಅರ್ಧಶತಕದೊಂದಿಗೆ ಒಟ್ಟು 180 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!
ಹಾಗೆಯೇ ಐಪಿಎಲ್ನಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಲ್ಲಿ ಕಾಣಿಸಿಕೊಂಡಿರುವ ಬಂಗಾರ್ 12 ಪಂದ್ಯಗಳಲ್ಲಿ 8 ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ್ದು, ಈ ವೇಳೆ 49 ರನ್ ಕಲೆಹಾಕಿದ್ದಾರೆ. ಇದೇ ವೇಳೆ 4 ವಿಕೆಟ್ಗಳನ್ನು ಕಬಳಿಸಿದ್ದಾರೆ.
Published On - 11:58 am, Mon, 26 August 24