ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ವಿಶ್ವಕಪ್ 2023 ಫೈನಲ್ ಪಂದ್ಯ (ICC World Cup 2023) ನಡೆಯುವಾಗ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ. ಓರ್ವ ಆಸ್ಟ್ರೇಲಿಯನ್ ವ್ಯಕ್ತಿ ಏಕಾಏಕಿ ಮೈದಾನಕ್ಕೆ ನುಗ್ಗಿದ್ದು, ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದಾನೆ. ಪ್ಯಾಲೆಸ್ಟೀನ್ ಟಿ ಶರ್ಟ್ ಧರಿಸಿದ್ದ ಅಭಿಮಾನಿಯೊಬ್ಬ ಪಂದ್ಯ ನಡೆಯುತ್ತಿರುವಾಗ ಮೈದಾನಕ್ಕೆ ನುಗ್ಗಿದ್ದು, ಬಳಿಕ ಆತ ನನ್ನು ಬಂಧಿಸಲಾಗಿದೆ. ನಂತರ ಪಂದ್ಯವನ್ನು ಪುನರಾರಂಭಿಸಲಾಗಿದೆ.
ವಿಶ್ವಕಪ್ ಫೈನಲ್‌ನಲ್ಲಿ ಅಹಮದಾಬಾದ್ ನಗರ ಸೇರಿದಂತೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 6 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ವರದಿ ಆಗಿದೆ. ಅದರ ಮಧ್ಯೆಯೂ ಭದ್ರತಾ ಲೋಪ ಉಂಟಾಗಿದೆ.
#ICCCricketWorldCup | Security breach during the India versus Australia ICC World Cup 2023 Final match, in Ahmedabad after a spectator entered the field
(Pics: ANI Photos) pic.twitter.com/AfilmF75sB
— ANI (@ANI) November 19, 2023
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡು ತಂಡಗಳು ಸದ್ಯ ಮೈದಾನದಲ್ಲಿ ಮುಖಾಮುಖಿಯಾಗಿವೆ. ಭಾರತವು ತನ್ನ ಮೂರನೇ ODI ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಆದರೆ ಆಸ್ಟ್ರೇಲಿಯಾ ದಾಖಲೆಯ ಆರನೇ ವಿಜಯಕ್ಕಾಗಿ ಹಾತೊರೆಯುತ್ತಿದೆ.
ಇದನ್ನೂ ಓದಿ: IND vs AUS: ತಂಡವನ್ನು ಮುನ್ನಡೆಸಬೇಕೆಂಬ ನನ್ನ ಕನಸು ನನಸಾಗಿದೆ: ರೋಹಿತ್ ಶರ್ಮಾ
30 ಓವರ್ಗಳ ಮುಕ್ತಾಯದ ವೇಳೆಗೆ 150 ರನ್ ಪೂರೈಸಿದ ಟೀಮ್ ಇಂಡಿಯಾ. 4 ವಿಕೆಟ್ ಕಬಳಿಸುವಲ್ಲಿ ಆಸ್ಟ್ರೇಲಿಯಾ ಬೌಲರ್ಗಳು ಯಶಸ್ವಿಯಾಗಿದ್ದಾರೆ.
12 ವರ್ಷಗಳ ಬಳಿಕ ತವರಿನಲ್ಲಿ ವಿಶ್ವಕಪ್ ಗೆಲ್ಲೋದಕ್ಕೆ ಭಾರತ ತಂಡ ಪಣತೊಟ್ಟಿದೆ. ಈ ಸಲ ಕಪ್ ನಮ್ದೇ ಅನ್ನೋ ಕೂಗು ಹಳ್ಳಿಯಿಂದ ದಿಲ್ಲಿವರೆಗೂ ಸದ್ದುಮಾಡ್ತಿದ್ದು, ಭಾರತದ ಗೆಲುವಿಗೆ ಅಭಿಮಾನಿಗಳು ದೇಗುಲಗಳಲ್ಲಿ ಪೂಜೆ, ಹವನಗಳು ಮಾಡಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:06 pm, Sun, 19 November 23