AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೂ ಸಹ ಬಿಟ್ಟುಕೊಡಲ್ಲ, ಸಂಜು ನಿಸ್ವಾರ್ಥಿ: ಅಭಿಷೇಕ್ ಶರ್ಮಾ

ಭಾರತೀಯ ಕ್ರಿಕೆಟ್‌ನಲ್ಲಿ ಈಗ ವೈಯಕ್ತಿಕ ಮೈಲಿಗಲ್ಲುಗಳಿಗಿಂತ ತಂಡದ ಗೆಲುವೇ ಸರ್ವಸ್ವ ಎಂಬ ಹೊಸ ಸಂಸ್ಕೃತಿ ಮುನ್ನೆಲೆಗೆ ಬಂದಿದೆ. ಟೀಮ್ ಇಂಡಿಯಾದ ಹಿರಿಯ ಆಟಗಾರರು ಯುವ ಪ್ರತಿಭೆಗಳ ಏಳಿಗೆಗಾಗಿ ತಮ್ಮ ಬ್ಯಾಟಿಂಗ್ ಸ್ಥಾನಗಳನ್ನೇ ತ್ಯಾಗ ಮಾಡುತ್ತಿರುವುದಕ್ಕೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿ ಸಾಕ್ಷಿಯಾಗಿದೆ.

ಯಾರೂ ಸಹ ಬಿಟ್ಟುಕೊಡಲ್ಲ, ಸಂಜು ನಿಸ್ವಾರ್ಥಿ: ಅಭಿಷೇಕ್ ಶರ್ಮಾ
Abhishek Sharma - Sanju SamsonImage Credit source: x.com
ಝಾಹಿರ್ ಯೂಸುಫ್
|

Updated on:Oct 28, 2026 | 3:15 PM

Share

ಭಾರತೀಯ ಕ್ರಿಕೆಟ್ ತಂಡದಲ್ಲಿ ಈಗ ವೈಯಕ್ತಿಕ ದಾಖಲೆಗಳಿಗಿಂತ ತಂಡದ ಗೆಲುವೇ ಮುಖ್ಯ ಎಂಬ ನಿಸ್ವಾರ್ಥ ಮನೋಭಾವ ಎದ್ದುಕಾಣುತ್ತಿದೆ. ಇತ್ತೀಚೆಗೆ ಯುವ ಆಟಗಾರ ಅಭಿಷೇಕ್ ಶರ್ಮಾ ಅವರು ಹಿರಿಯ ಆಟಗಾರ ಸಂಜು ಸ್ಯಾಮ್ಸನ್ ಅವರ ನಿಸ್ವಾರ್ಥ ಮನೋಭಾವ ಮತ್ತು ಬ್ಯಾಟಿಂಗ್ ಸ್ಥಾನಗಳನ್ನು ತ್ಯಾಗ ಮಾಡುವ ಗುಣವನ್ನು ಬಹಿರಂಗವಾಗಿ ಶ್ಲಾಘಿಸಿದ್ದಾರೆ.

ಹೊಸ ಸಂಸ್ಕೃತಿಯ ಅನಾವರಣ:

ನ್ಯೂಝಿಲೆಂಡ್​ ವಿರುದ್ಧದ 3ನೇ ಟಿ20 ಪಂದ್ಯದ ಬಳಿಕ ತಂಡದ ಆಂತರಿಕ ವಾತಾವರಣದ ಬಗ್ಗೆ ಮಾತನಾಡಿರುವ ಅಭಿಷೇಕ್ ಶರ್ಮಾ, “ಇವತ್ತು ನಾನು ವೈಭವ್ ಸೂರ್ಯವಂಶಿ ಇನಿಂಗ್ಸ್ ಆರಂಭಿಸಿದೆವು. ಸಾಮಾನ್ಯವಾಗಿ ನಾನು ಮತ್ತು ಸಂಜು ಭಾಯ್ ಓಪನಿಂಗ್ ಮಾಡುತ್ತಿದ್ದೆವು. ಆದರೆ ತಂಡದಲ್ಲಿ ಪ್ರತಿಯೊಬ್ಬರೂ ಎಷ್ಟು ನಿಸ್ವಾರ್ಥಿಯಾಗಿದ್ದಾರೆ ಎಂಬುದನ್ನು ನಾವಿಲ್ಲಿ ನೋಡಬಹುದು. ಇವತ್ತು ತಂಡ ತೋರಿಸಿದ ಈ ಒಗ್ಗಟ್ಟಿನ ವಾತಾವರಣ ಮುಂದಿನ ದಿನಗಳಲ್ಲಿ ಎಲ್ಲರಿಗೂ ಆಟವನ್ನು ಸುಲಭವಾಗಿಸಲಿದೆ” ಎಂದು ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ನಿಸ್ವಾರ್ಥಿ:

ಸಂಜು ಸ್ಯಾಮ್ಸನ್ ಕಳೆದ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಅದ್ಭುತ ಪ್ರದರ್ಶನ ನೀಡಿದ್ದರೂ, ತಂಡದ ಮ್ಯಾನೇಜ್‌ಮೆಂಟ್ ನಿರ್ಧಾರಕ್ಕೆ ಗೌರವ ಕೊಟ್ಟು ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿಕೊಳ್ಳಲು ಸಿದ್ಧರಾಗಿದ್ದರು. ಈ ಬಗ್ಗೆ ಹೆಮ್ಮೆಯಿಂದ ಹೇಳಿರುವ ಅಭಿಷೇಕ್, “ಕಳೆದ ಎರಡು ಪಂದ್ಯಗಳಲ್ಲಿ ಸಂಜು ಭಾಯ್ ಆಡಿದ ರೀತಿ ಮತ್ತು ಅವರು ತಮ್ಮ ಬ್ಯಾಟಿಂಗ್ ಸ್ಥಾನವನ್ನು ಬಿಟ್ಟುಕೊಟ್ಟು ತೋರಿದ ವ್ಯಕ್ತಿತ್ವ ಅದ್ಭುತವಾದದ್ದು. ಇಡೀ ತಂಡವೇ ಇಂದು ಅದೇ ರೀತಿಯ ಗುಣವನ್ನು ಪ್ರದರ್ಶಿಸಿದೆ” ಎಂದು ತಿಳಿಸಿದ್ದಾರೆ.

ಯಾರೂ ಸಹ ತಮ್ಮ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ. ಆದರೆ ಸಂಜು ಸ್ಯಾಮ್ಸನ್ ನಿಸ್ವಾರ್ಥಿ ಆಟಗಾರ. ಅವರು ತಮ್ಮ ಬ್ಯಾಟಿಂಗ್ ಸ್ಥಾನವನ್ನು ಬಿಟ್ಟುಕೊಟ್ಟಂತಹ ವ್ಯಕ್ತಿತ್ವ ದೊಡ್ಡದು. ಇಂತಹ ವ್ಯಕ್ತಿತ್ವದಿಂದಾಗಿ ತಂಡದಲ್ಲಿ ಅತ್ಯುತ್ತಮ ಒಗ್ಗಟಿದೆ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಮೊದಲ ಪಂದ್ಯದಲ್ಲಿ ಸಂಜು ಕೇವಲ 33 ಎಸೆತಗಳಲ್ಲಿ 67 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದಿದ್ದರು. ಆದರೆ, ಎರಡನೇ ಪಂದ್ಯದ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಗಾಯಗೊಂಡಿದ್ದರಿಂದ, ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗಿತ್ತು. ಮೂಲತಃ ಓಪನರ್ ಆಗಿದ್ದ ವೈಭವ್ ಅವರಿಗೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ತಿಳಿಸಲಾಗಿದ್ದರಿಂದ, ಅವರು ಆ ಪಂದ್ಯದಲ್ಲಿ ವಿಫಲರಾಗಿದ್ದರು.

ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ನೈಸರ್ಗಿಕ ಆಟಕ್ಕೆ ತೊಂದರೆಯಾಗಬಾರದು ಎಂದು ಭಾವಿಸಿದ ಟೀಮ್ ಮ್ಯಾನೇಜ್‌ಮೆಂಟ್, ಮೂರನೇ ಪಂದ್ಯಕ್ಕೂ ಮುನ್ನ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಲು ನಿರ್ಧರಿಸಿತು. ಫಾರ್ಮ್‌ನಲ್ಲಿದ್ದರೂ ಕೂಡ ಸಂಜು ಸ್ಯಾಮ್ಸನ್ ತಾವೇ ಸ್ವತಃ ಮುಂದೆ ಬಂದು ತಮ್ಮ ಆರಂಭಿಕ ಸ್ಥಾನವನ್ನು ವೈಭವ್‌ಗಾಗಿ ಬಿಟ್ಟುಕೊಟ್ಟರು.

ಇದನ್ನೂ ಓದಿ: 7 ಎಸೆತಗಳಿಂದ​ ಅಭಿಷೇಕ್ ಶರ್ಮಾ ಕೈತಪ್ಪಿದ ವಿಶ್ವ ದಾಖಲೆ!

ಅದರಂತೆ ವೆಲ್ಲಿಂಗ್ಟನ್ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಕಣಕ್ಕಿಳಿದರೆ, ಸಂಜು ಸ್ಯಾಮ್ಸನ್ 3ನೇ ಕ್ರಮಾಂಕಕ್ಕೆ ಜಾರಿದರು. ಈ ಬದಲಾವಣೆ ಅದ್ಭುತವಾಗಿ ಕೆಲಸ ಮಾಡಿತು. ಅಭಿಷೇಕ್ ಶರ್ಮಾ (38 ಎಸೆತಗಳಲ್ಲಿ 113 ರನ್) ಮತ್ತು ವೈಭವ್ ಸೂರ್ಯವಂಶಿ (19 ಎಸೆತಗಳಲ್ಲಿ 45 ರನ್) ಕೇವಲ 7.1 ಓವರ್‌ಗಳಲ್ಲಿ 133 ರನ್‌ಗಳ ದಾಖಲೆಯ ಆರಂಭಿಕ ಜತೆಯಾಟವಾಡಿ ಭಾರತದ ಭರ್ಜರಿ ಗೆಲುವಿಗೆ ಕಾರಣರಾದರು. ಇಂತಹದೊಂದು ಬದಲಾವಣೆಗೆ ಕಾರಣರಾದ ಸಂಜು ಸ್ಯಾಮ್ಸನ್ ಅವರ ನಿಸ್ವಾರ್ಥ ಗುಣವನ್ನು ಅಭಿಷೇಕ್ ಶರ್ಮಾ ಹಾಡಿ ಹೊಗಳಿದ್ದಾರೆ.

Published On - 3:14 pm, Wed, 28 October 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!
ಬಿಗ್ ಬಾಸ್ ಮನೆಗೆ ಕಾಲಿಟ್ಟ ರಕ್ಷಿತಾ ಶೆಟ್ಟಿ; ಶೆಟ್ಟಿ ಕುಟುಂಬದಲ್ಲಿ ಹರ್ಷ
ಬಿಗ್ ಬಾಸ್ ಮನೆಗೆ ಕಾಲಿಟ್ಟ ರಕ್ಷಿತಾ ಶೆಟ್ಟಿ; ಶೆಟ್ಟಿ ಕುಟುಂಬದಲ್ಲಿ ಹರ್ಷ