
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 2025 ರ ಮಹಿಳಾ ವಿಶ್ವಕಪ್‌ನ (Women’s World Cup 2025) ಅಂತಿಮ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ಪಡೆ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದೆ. ಈ ಮೂಲಕ ಆಫ್ರಿಕಾ ತಂಡಕ್ಕೆ 299 ರನ್‌ಗಳ ಗುರಿ ನೀಡಿದೆ. ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ ಶಫಾಲಿ ವರ್ಮಾ ಹಾಗೂ ದೀಪ್ತಿ ಶರ್ಮಾ ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್‌ಗೆ ಆರಂಭಿಕರಾದ ಸ್ಮೃತಿ ಹಾಗೂ ಶಫಾಲಿ 105 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ ಸ್ಮೃತಿ 45 ರನ್ ಬಾರಿಸಿ ಔಟಾಗುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ಸೆಮಿಫೈನಲ್ನಲ್ಲಿ ಶತಕ ಬಾರಿಸಿದ್ದ ಜೆಮಿಮಾ, ಫೈನಲ್ ಪಂದ್ಯದಲ್ಲಿ 24 ರನ್ ಕಲೆಹಾಕಲಷ್ಟೇ ಶಕ್ತರಾದರು.
ಒಂದು ಹಂತದಲ್ಲಿ ಭಾರತ ತಂಡವು 350 ರನ್‌ಗಳನ್ನು ತಲುಪುತ್ತದೆ ಎಂದು ತೋರುತ್ತಿತ್ತು, ಆದರೆ ಮಧ್ಯಮ ಕ್ರಮಾಂಕದ ಕುಸಿತ ಮತ್ತು ನಿಧಾನಗತಿಯ ಬ್ಯಾಟಿಂಗ್ನಿಂದ ತಂಡ 300 ರನ್‌ಗಳ ಹತ್ತಿರ ತಲುಪುವಲ್ಲಿ ಮಾತ್ರ ಯಶಸ್ವಿಯಾಯಿತು. ಇದು ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಎರಡನೇ ಅತ್ಯಧಿಕ ಸ್ಕೋರ್ ಮತ್ತು ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಅತ್ಯಧಿಕ ಸ್ಕೋರ್ ಆಗಿದೆ. 2022 ರ ವಿಶ್ವಕಪ್ ಫೈನಲ್‌ನಲ್ಲಿ ಐದು ವಿಕೆಟ್‌ಗೆ 356 ರನ್ ಗಳಿಸಿರುವ ಆಸ್ಟ್ರೇಲಿಯಾ ಈ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ದಕ್ಷಿಣ ಆಫ್ರಿಕಾ ದಾಖಲೆಯನ್ನು ಬೆನ್ನಟ್ಟಬೇಕಾಗುತ್ತದೆ. ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಇದುವರೆಗೆ ಇಷ್ಟು ದೊಡ್ಡ ಸ್ಕೋರ್ ಅನ್ನು ಬೆನ್ನಟ್ಟಲಾಗಿಲ್ಲ ಎಂಬುದು ಟೀಂ ಇಂಡಿಯಾಕ್ಕೆ ಸಮಾಧಾನಕರ ಸುದ್ದಿಯಾಗಿದೆ.
World Cup 2025: ವಿಶ್ವಕಪ್ನಲ್ಲಿ ಮಾಜಿ ನಾಯಕಿಯ ದಾಖಲೆ ಮುರಿದ ಸ್ಮೃತಿ ಮಂಧಾನ
ಉಳಿದಂತೆ ಭಾರತದ ಪರ ದೀಪ್ತಿ ಶರ್ಮಾ 58 ರನ್ ಗಳಿಸಿದರೆ, ಶಫಾಲಿ 87 ರನ್ ಬಾರಿಸಿದರು. ಸ್ಮೃತಿ ಮಂಧಾನ ಕೂಡ 45 ರನ್ ಗಳಿಸಿದರು. ಉಳಿದಂತೆ ರಿಚಾ ಘೋಷ್ 24 ಎಸೆತಗಳಲ್ಲಿ 34 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರೆ, ಜೆಮಿಮಾ ರೊಡ್ರಿಗಸ್ 24 ರನ್ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ 20 ರನ್ ಗಳಿಸಿ ಔಟಾದರು. ಅಮಂಜೋತ್ ಕೌರ್ 12 ರನ್‌ಗಳ ಕಾಣಿಕೆ ನೀಡಿದರು. ದಕ್ಷಿಣ ಆಫ್ರಿಕಾ ಪರ ಅಯಬೊಂಗಾ ಖಾಕಾ ಮೂರು ವಿಕೆಟ್ ಪಡೆದರೆ, ಮಲಬಾ, ಡಿ ಕ್ಲರ್ಕ್ ಮತ್ತು ಕ್ಲೋಯ್ ಟ್ರಯಾನ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 pm, Sun, 2 November 25