WPL 2024: ಡಬ್ಲ್ಯೂಪಿಎಲ್ 2024 ಉದ್ಘಾಟನಾ ಸಮಾರಂಭದಲ್ಲಿ ಶಾರುಖ್ ಖಾನ್: ಎಷ್ಟು ಗಂಟೆಗೆ ಆರಂಭ, ಲೈವ್ ವೀಕ್ಷಣೆ ಹೇಗೆ?
Shah Rukh Khan, WPL 2024: ಮಹಿಳಾ ಪ್ರೀಮಿಯರ್ ಲೀಗ್ 2024ರ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಪ್ರದರ್ಶನ ನೀಡಲಿದ್ದಾರೆ. ವರುಣ್ ಧವನ್, ಶಾಹಿಕ್ ಕಪೂರ್, ಟೈಗರ್ ಶ್ರಾಫ್, ಕಾರ್ತಿಕ್ ಆರ್ಯನ್, ಸಿದ್ಧಾರ್ಥ್ ಮಲ್ಹೋತ್ರಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಕಿಂಗ್ ಶಾರುಖ್ ಖಾನ್ ಕೂಡ ರಂಜಿಸಲಿದ್ದಾರೆ.

ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ನಂತೆಯೇ ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಕೂಡ ವರ್ಣರಂಜಿತವಾಗಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಯಸಿದೆ. ಶುಕ್ರವಾರದಿಂದ (ಫೆ. 23) ಎರಡನೇ ಆವೃತ್ತಿಯ ಡಬ್ಲ್ಯೂಪಿಎಲ್ 2024 (WPL 2024) ಆರಂಭವಾಗಲಿದೆ. ಮೊದಲ ಪಂದ್ಯ ಆರಂಭಕ್ಕೂ ಮುನ್ನ ಉದ್ಘಾಟನಾ ಸಮಾರಂಭ ಆಯೋಜನೆ ಮಾಡಲಾಗಿದ್ದು, ಅನೇಕ ಬಾಲಿವುಡ್ ತಾರೆಯರು ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇದೀಗ ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಪ್ರದರ್ಶನ ನೀಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರವರಿ 23 ರಂದು ಆಡಲಿದೆ. ಅದಕ್ಕೂ ಮುನ್ನ ಬಿಸಿಸಿಐ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಕಿಂಗ್ ಖಾನ್ ಭರ್ಜರಿ ಸ್ಟೆಪ್ ಹಾಕಲಿದ್ದಾರೆ. ಇವರ ಜೊತೆಗೆ ವರುಣ್ ಧವನ್, ಶಾಹಿದ್ ಕಪೂರ್, ಟೈಗರ್ ಶ್ರಾಫ್, ಕಾರ್ತಿಕ್ ಆರ್ಯನ್, ಸಿದ್ಧಾರ್ಥ್ ಮಲ್ಹೋತ್ರಾ ಬರಲಿದ್ದಾರೆ ಎನ್ನಲಾಗಿದೆ.
ಇಂದು ಸಂಜೆ 5 ಗಂಟೆಗೆ ಐಪಿಎಲ್ 2024 ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯ ಯಾವಾಗ ಗೊತ್ತೇ?
ಸಾಮಾನ್ಯವಾಗಿ ಕೆಕೆಆರ್ ಪಂದ್ಯ ಇದ್ದಾಗ ಮಾತ್ರ ಮಾಲೀಕ ಶಾರುಖ್ ಖಾನ್ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಮಹಿಳಾ ಐಪಿಎಲ್‌ನಲ್ಲಿ ಅವರು ತಂಡವನ್ನು ಹೊಂದಿಲ್ಲ. ಇದರ ಹೊರತಾಗಿಯೂ, ಕಿಂಗ್ ಖಾನ್ ಬರುತ್ತಿರುವುದು ವಿಶೇಷ.
ಎರಡು ಬಾರಿರ ಇಂಡಿಯಾ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಫ್ರಾಂಚೈಸಿ ಟ್ರಿನ್‌ಬಾಗೊ ನೈಟ್ ರೈಡರ್ಸ್, ILT20 ನಲ್ಲಿ ಅಬುಧಾಬಿ ನೈಟ್ ರೈಡರ್ಸ್ ಮಾಲೀಕರಾಗಿರುವುದರಿಂದ ಶಾರುಖ್ ಖಾನ್ ಕ್ರಿಕೆಟ್‌ನೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದಾರೆ.
ಡಬ್ಲ್ಯೂಪಿಎಲ್ 2024 ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಪಟ್ಟಿ
- ಶಾರುಖ್ ಖಾನ್
- ಕಾರ್ತಿಕ್ ಆರ್ಯನ್
- ಶಾಹಿದ್ ಕಪೂರ್
- ಸಿದ್ಧಾರ್ಥ್ ಮಲ್ಹೋತ್ರಾ
- ವರುಣ್ ಧವನ್
- ಟೈಗರ್ ಶ್ರಾಫ್
ಒಂದೇ ಓವರ್ನಲ್ಲಿ 27 ರನ್ ಚಚ್ಚಿದ ಪೊಲಾರ್ಡ್; ಬಾಬರ್ ತಂಡಕ್ಕೆ ಹೀನಾಯ ಸೋಲು
ಡಬ್ಲ್ಯೂಪಿಎಲ್ 2024 ಉದ್ಘಾಟನಾ ಸಮಾರಂಭ – ದಿನಾಂಕ, ಸಮಯ, ಸ್ಥಳ
ಡಬ್ಲ್ಯೂಪಿಎಲ್ 2024 ರ ಉದ್ಘಾಟನಾ ಸಮಾರಂಭವು ಶುಕ್ರವಾರ (ಫೆಬ್ರವರಿ 23) ಸಂಜೆ 6:30 IST ಕ್ಕೆ ಪ್ರಾರಂಭವಾಗುತ್ತದೆ. ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಡಬ್ಲ್ಯೂಪಿಎಲ್ 2024 ಉದ್ಘಾಟನಾ ಸಮಾರಂಭ – ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?
ಡಬ್ಲ್ಯೂಪಿಎಲ್ 2024 ರ ಉದ್ಘಾಟನಾ ಸಮಾರಂಭವನ್ನು ಭಾರತದಲ್ಲಿ Sports18 ಚಾನಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಡಬ್ಲ್ಯೂಪಿಎಲ್ 2024 ರ ಉದ್ಘಾಟನಾ ಸಮಾರಂಭವನ್ನು ಜಿಯೋ ಸಿನಿಮಾ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್‌ಸ್ಟ್ರೀಮ್ ವೀಕ್ಷಿಸಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
