ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಹಾರ್ದಿಕ್ ಪಾಂಡ್ಯ (Hardik Pandya) ತಂಡದ ನಾಯಕತ್ವ ಪಡೆದಿದ್ದು, ಸಂಜು ಸ್ಯಾಮ್ಸನ್ (Sanju Samson) ತಂಡಕ್ಕೆ ಮರಳಿದ್ದಾರೆ. ಅದೇ ಸಮಯದಲ್ಲಿ ಐಪಿಎಲ್ (IPL)ನಲ್ಲಿ ಅಮೋಘ ಪ್ರದರ್ಶನ ನೀಡಿದ ರಾಹುಲ್ ತ್ರಿಪಾಠಿ ತಂಡಕ್ಕೆ ಮೊದಲ ಪ್ರವೇಶ ಪಡೆದಿದ್ದಾರೆ. ಆದರೆ ತಮ್ಮ ವೇಗದ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದ ಆಟಗಾರನಿಗೆ ಭಾರತದ ‘ಬಿ’ ತಂಡದಲ್ಲೂ ಅವಕಾಶ ನೀಡಲಾಗಿಲ್ಲ. ನಾವಿಲ್ಲಿ ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಟಿ 20 ಸರಣಿಗೆ ಆಯ್ಕೆಯಾಗದ ಶಿಖರ್ ಧವನ್ (Shikhar Dhawan) ಬಗ್ಗೆ ಮಾತನಾಡುತ್ತಿದ್ದೇವೆ. ಧವನ್‌ಗೆ ಈಗ ಐರ್ಲೆಂಡ್‌ನಂತಹ ದುರ್ಬಲ ತಂಡದ ವಿರುದ್ಧದ ಟಿ 20 ಸರಣಿಗೂ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.
ಇದು ಧವನ್ ತಪ್ಪೇ?
ಶಿಖರ್ ಧವನ್ ಅವರಿಗೆ ವಯಸ್ಸಾಗಿದೆ ಮತ್ತು ಅವರ ಸ್ಟ್ರೈಕ್ ರೇಟ್ ಕೂಡ ತುಂಬಾ ಕಡಿಮೆಯಾಗಿದೆ ಎಂದು ಆಗಾಗ್ಗೆ ಆರೋಪಿಸುತ್ತಾರೆ, ಆದರೆ ದಿನೇಶ್ ಕಾರ್ತಿಕ್ ತಂಡದಲ್ಲಿ ಏನು ಮಾಡುತ್ತಿದ್ದಾರೆ? ಅವರ ವಯಸ್ಸು ಶಿಖರಕ್ಕಿಂತ ಹೆಚ್ಚು. ಅಲ್ಲದೆ, ಸ್ಟ್ರೈಕ್ ರೇಟ್ ವಿಚಾರಕ್ಕೆ ಬಂದರೆ ರಿಷಬ್ ಪಂತ್ ಕೂಡ ವೇಗವಾಗಿ ರನ್ ಗಳಿಸುವುದಿಲ್ಲ. ಅವರ ಸ್ಟ್ರೈಕ್ ರೇಟ್ 130ಕ್ಕಿಂತ ಕಡಿಮೆ ಇದೆ. ಅಂದಹಾಗೆ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ತಂಡವನ್ನು ಆಯ್ಕೆ ಮಾಡಿದಾಗ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಶಿಖರ್ ಧವನ್‌ಗೆ ಕರೆ ಮಾಡಿ ಟಿ20ಯಲ್ಲಿ ಯುವಕರಿಗೆ ಅವಕಾಶ ನೀಡುವ ಚಿಂತನೆಯಲ್ಲಿದ್ದೇವೆ ಎಂದು ಧವನ್ ಬಳಿ ಹೇಳಿದ್ದಾರೆ ಎಂದು ವರದಿಯಾಗಿದೆ. ಬಹುಶಃ ಅದಕ್ಕೇ ಧವನ್ ಐರ್ಲೆಂಡ್ ಸರಣಿಗೂ ಆಯ್ಕೆಯಾಗಲಿಲ್ಲ.
ಇದನ್ನೂ ಓದಿ:Shikhar Dhawan Acting Debut: ನಟನೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಶಿಖರ್ ಧವನ್; ಮೊದಲ ಚಿತ್ರ ಇದೇ ವರ್ಷ ರಿಲೀಸ್!
ಫಿಟ್ನೆಸ್, ಫಾರ್ಮ್ ಚೆನ್ನಾಗಿದ್ದಾಗ ಏನು ಸಮಸ್ಯೆ?
ಶಿಖರ್ ಧವನ್ ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿ, 14 ಪಂದ್ಯಗಳಲ್ಲಿ 38 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 460 ರನ್ ಗಳಿಸಿದ್ದಾರೆ. ಈ ಆಟಗಾರ 2016 ರಿಂದ ಐಪಿಎಲ್‌ನ ಪ್ರತಿ ಸೀಸನ್ನಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಅವರ ಪ್ರದರ್ಶನ ಕೊಹ್ಲಿ ಕೂಡ ಹೀಗಿರಲಿಲ್ಲ. ಆದರೆ ವಯಸ್ಸಿನ ಕಾರಣ ನೀಡಿ ಧವನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಈಗ ಅವರು ಐರ್ಲೆಂಡ್ ಸರಣಿಗೂ ಆಯ್ಕೆಯಾಗಿಲ್ಲ. ಆದ್ದರಿಂದ ಅಭಿಮಾನಿಗಳು ಶಿಖರ್ ಧವನ್ ಅವರ ಟಿ20 ಕೆರಿಯರ್ ಮುಗಿಯಿತು ಎಂಬ ಭಾವನೆಯಲ್ಲಿದ್ದಾರೆ.
India Squad
Hardik Pandya (C), Bhuvneshwar Kumar (vc), Ishan Kishan, Ruturaj Gaikwad, Sanju Samson, Suryakumar Yadav, Venkatesh Iyer, Deepak Hooda, Rahul Tripathi, Dinesh Karthik (wk), Yuzvendra Chahal, Axar Patel, R Bishnoi, Harshal Patel, Avesh Khan, Arshdeep Singh, Umran Malik— BCCI (@BCCI) June 15, 2022
Published On - 2:56 pm, Thu, 16 June 22