Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಂದಿಗೂ ಮುಗಿಯದ ಪ್ರೇಮಕಥೆ’; ಪಾಕ್ ಆಟಗಾರರ ಕಾಲೆಳೆದ ಶಿಖರ್ ಧವನ್

Shikhar Dhawan: ಏಕದಿನ ವಿಶ್ವಕಪ್‌ ಗೆಲ್ಲುವ ಪ್ರಮುಖ ತಂಡಗಳಲ್ಲಿ ಪಾಕಿಸ್ತಾನ ತಂಡವನ್ನು ಸಹ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಆದರೆ ಅಭ್ಯಾಸ ಪಂದ್ಯದಲ್ಲಿ ತಂಡದ ಪ್ರದರ್ಶನ ನೋಡಿದ ಬಳಿಕ ಕ್ರೀಡಾಭಿಮಾನಿಗಳ ಅಭಿಪ್ರಾಯ ಬದಲಾಗಿರಬೇಕು ಎಂದು ತೋರುತ್ತದೆ. ಏಕಂದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ ಸೋಲನುಭವಿಸಿದೆ.

‘ಎಂದಿಗೂ ಮುಗಿಯದ ಪ್ರೇಮಕಥೆ’; ಪಾಕ್ ಆಟಗಾರರ ಕಾಲೆಳೆದ ಶಿಖರ್ ಧವನ್
ಶಿಖರ್ ಧವನ್
Follow us
ಪೃಥ್ವಿಶಂಕರ
|

Updated on: Oct 04, 2023 | 9:51 AM

ಏಕದಿನ ವಿಶ್ವಕಪ್‌ (ICC World Cup 2023) ಗೆಲ್ಲುವ ಪ್ರಮುಖ ತಂಡಗಳಲ್ಲಿ ಪಾಕಿಸ್ತಾನ ತಂಡವನ್ನು (Pakistan cricket team) ಸಹ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಆದರೆ ಅಭ್ಯಾಸ ಪಂದ್ಯದಲ್ಲಿ ತಂಡದ ಪ್ರದರ್ಶನ ನೋಡಿದ ಬಳಿಕ ಕ್ರೀಡಾಭಿಮಾನಿಗಳ ಅಭಿಪ್ರಾಯ ಬದಲಾಗಿರಬೇಕು ಎಂದು ತೋರುತ್ತದೆ. ಏಕಂದರೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಪಾಕಿಸ್ತಾನ (PAK vs AUS World Cup warm-up) ಸೋಲನುಭವಿಸಿದೆ. ಹಾಗಾಗಿ ಏಕದಿನ ವಿಶ್ವಕಪ್ ಪ್ರಶಸ್ತಿಯ ಪಯಣ ಪಾಕಿಸ್ತಾನಕ್ಕೆ ಸುಲಭವಲ್ಲ ಎಂಬುದೂ ಅಷ್ಟೇ ಸತ್ಯ. ಇದೆಲ್ಲದರ ನಡುವೆ ಪ್ರತಿ ಐಸಿಸಿ ಈವೆಂಟ್​ನಲ್ಲೂ ತನ್ನ ಕಳಪೆ ಫೀಲ್ಡಿಂಗ್​​ನಿಂದ ಭಾರಿ ಬೆಲೆ ತೆತ್ತುವ ಪಾಕ್ ತಂಡ ಈ ಬಾರಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ತನ್ನ ಕಳಪೆ ಫೀಲ್ಡಿಂಗ್​ನಿಂದ ನಗೆಪಾಟಲಿಗೀಡಾಗಿದೆ.

ವಾಸ್ತವವಾಗಿ ನಿನ್ನೆ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಕೊನೆಯ ಅಭ್ಯಾಸ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 351 ರನ್ ಗಳಿಸಿ ಗೆಲುವಿಗೆ 352 ರನ್ ಗಳ ಗುರಿ ನೀಡಿತು. ಆದರೆ ಪಾಕಿಸ್ತಾನ ತಂಡ 47.4 ಓವರ್‌ಗಳಲ್ಲಿ ತನ್ನಲ್ಲೇ ವಿಕೆಟ್​ ಕಳೆದುಕೊಂಡು 337 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 14 ರನ್‌ಗಳ ಸೋಲು ಕೂಡ ಅನುಭವಿಸಿತು. ಆದರೆ ಪಂದ್ಯ ಮುಗಿದ ಬಳಿಕ ಪಾಕ್ ತಂಡ ಸೊತಿದ್ದಕ್ಕೆ ಹೆಚ್ಚು ಸುದ್ದಿಯಾಗುವ ಬದಲು ತನ್ನ ಕಳಪೆ ಫೀಲ್ಡಿಂಗ್​ನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ.

ವಾಸ್ತವವಾಗಿ ಆಸ್ಟ್ರೇಲಿಯಾ ಇನ್ನಿಂಗ್ಸ್​ನ 23ನೇ ಓವರ್‌ ಬೌಲ್ ಮಾಡಲು ಬಂದ ಹ್ಯಾರಿಸ್ ರೌಫ್, ಶಾರ್ಟ್ ಲೆಂಗ್ತ್ ಬಾಲ್ ಅನ್ನು ಬೌಲ್ ಮಾಡಿದರು. ಈ ಬಾಲನ್ನು ಎದುರಿಸಿದ ಮಾರ್ನಸ್ ಲಬುಶೇನ್ ಆ ಚೆಂಡನ್ನು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ ಕಡೆಗೆ ಆಡಿದರು. ಈ ವೇಳೆ ಮೊಹಮ್ಮದ್ ವಾಸಿಂ ಮತ್ತು ಮೊಹಮ್ಮದ್ ನವಾಜ್ ಇಬ್ಬರೂ ಚೆಂಡನ್ನು ತಡೆಯಲು ಯತ್ನಿಸಿದರು. ಆದರೆ ಇಬ್ಬರಿಗೂ ಚೆಂಡನ್ನು ತಡೆಯಲು ಸಾಧ್ಯವಾಗಲಿಲ್ಲಿ. ಸಂವಹನದ ಕೊರತೆಯಿಂದಾಗಿ ಇಬ್ಬರಿಗೂ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಸೀದಾ ಬೌಂಡರಿ ದಾಟಿತು. ಇದೀಗ ಪಾಕ್ ಆಟಗಾರರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ಟೀಂ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಡಿಯೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಧವನ್ “ಪಾಕಿಸ್ತಾನ ಮತ್ತು ಫೀಲ್ಡಿಂಗ್ ಎಂದಿಗೂ ಮುಗಿಯದ ಪ್ರೇಮಕಥೆ” ಎಂದು ಟ್ವೀಟ್ ಮಾಡಿದ್ದಾರೆ. ಧವನ್ ಮಾಡಿರುವ ಈ ಟ್ವೀಟ್​ ಇದೀಗ ಬಾರಿ ವೈರಲ್ ಆಗುತ್ತಿದೆ. ವಾಸ್ತವವಾಗಿ ಪಾಕ್ ಆಟಗಾರರ ಈ ಕಳಪೆ ಫೀಲ್ಡಿಂಗ್​ನಿಂದಾಗಿ ತಂಡ ಟಿ20 ವಿಶ್ವಕಪ್ ಗೆಲ್ಲುವುದರಿಂದ ವಂಚಿತವಾಗಿತ್ತು. ಅಲ್ಲದೆ ಆಟಗಾರರ ಈ ಕಳಪೆ ಫೀಲ್ಡಿಂಗ್​ಗೆ ಅಭಿಮಾನಿಗಳು ಛೀಮಾರಿಯನ್ನು ಹಾಕಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ